ಕಾರ್ಕಳ,; ಕಾರ್ಕಳ ವಲಯದ ವತಿಯಿಂದ ಕಾರ್ಕಳ ತಾಲೂಕಿನ ಮುಟ್ಲುಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಲಯದ ಅಧ್ಯಕ್ಷರಾದ ಪ್ರಮೋದ್ ಪೈ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜ್ರಂಭಣೆಯಿAದ ಆಚರಿಸಲಾಯಿತು.

ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪಾರ್ಚನೆ ಮಾಡಲಾಯಿತು. ಮುಖ್ಯ ಅತಿಥಿ ಸಾಮಾಜಿಕ ಕಾರ್ಯಕರ್ತ ಸಮೃದ್ ಶೆಟ್ಟಿ ಮಾತನಾಡಿದ ಅವರು ನಾವು ಕನ್ನಡ ಶಾಲೆಗಳನ್ನು ಉಳಿಸಿದರೆ ಕನ್ನಡಕ್ಕೆ ಉಳಿಗಾಲವಿದೆ. ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ ಕನ್ನಡವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ನಂದಿನಿ ಕುಮಾರಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ
ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಮಾತನಾಡಿದ ನಿವೃತ್ತ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಕಾAತ್ ಅಂಡರು ಮಾತನಾಡಿದ ಅವರು ಇಂಥ ಕುಗ್ರಾಮದಲ್ಲಿರುವ ಏಕೈಕ ಕನ್ನಡ ಶಾಲೆಯಲ್ಲಿ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಅವರು ಕನ್ನಡ ರಾಜ್ಯೋತ್ಸವವನ್ನು ಇಷ್ಟು ಅದ್ದೂರಿಯಾಗಿ ಆಚರಿಸುವುದು ಇದೇ ಪ್ರಥಮ ಬಾರಿಗೆ ಆಗಿರುತ್ತದೆ. ನಾನು ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದ ವಲಯ ಅಧ್ಯಕ್ಷರಾದ ಪ್ರಮೋದ್ ಪೈ ಹಾಗೂ ಪದಾಧಿಕಾರಿಗಳಿಗೆ ನಾನು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಂತರ ಶಾಲಾ ವಿದ್ಯಾರ್ಥಿ ಗಳಿಂದ ಕನ್ನಡ ನಾಡು ನುಡಿಯ ಬಗ್ಗೆ ಭಾಷಣವನ್ನು ಮಾಡಿಸಲಾಯಿತು. ನಂತರ ಮಾತನಾಡಿದ ಅಧ್ಯಕ್ಷರಾದ ಪ್ರಮೋದ್ ಪೈ ನಾನು ವಲಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಕೇವಲ ಒಂದು ತಿಂಗಳ ಒಳಗೆ ಈ ಕನ್ನಡ ಶಾಲೆಯಲ್ಲಿ ರಾಜ್ಯೋತ್ಸವ ವನ್ನು ಆಚರಿಸುವುದು ನನ್ನ ಮೊದಲ ಕಾರ್ಯಕ್ರಮವಾಗಿದೆ. ನಾನು ಈ ಶಾಲೆಯಿಂದ ನನ್ನ ವೃತ್ತಿ ಜೀವನಕ್ಕೆ ಬೇಕಾಗುವ ಎಲ್ಲಾ ಪಾಠಗಳನ್ನು ಈ ಶಾಲೆಯಿಂದಲೇ ತುಂಬಾ ಕಲಿತಿರುತ್ತೇನೆ. ಇಂಥ ಸುಂದರ ವಾದ ಪ್ರಕೃತಿಯ ಮಡಿಲಿನಲ್ಲಿ ಇರುವ ಶಾಲೆಯಲ್ಲಿ ಕನ್ನಡಾಂಬೆಯ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ sಎಸ್ ಡಿ ಎನ್ ಸಿ ಅಧ್ಯಕ್ಷರಾದ ಶ್ರೀಮತಿ ಆಶಾಲತಾ ಎಸ್ ಕೆ ಪಿಯ ಕಾರ್ಕಳ Ä ವಲಯದ ಗೌರವ ಅಧ್ಯಕ್ಷರಾದ
ಟಿವಿ ಸುಶೀಲ್ ಕುಮಾರ್, ಉಪಾಧ್ಯಕ್ಷರಾದ ಪ್ರಕಾಶ್ ಪ್ರಭು, ಹಾಗೂ ಕೋಶಾಧಿಕಾರಿಯಾದ ಸತೀಶ್ ಆಚಾರ್ಯ, ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಎಸ್ ಕೆ ಪಿ ವಲಯದ ಪದಾಧಿಕಾರಿಗಳಾದ ಹಾಗೂ ಸಮಿತಿಯ ಸದಸ್ಯರಾದ ಸಂತೋಷ ಶೆಟ್ಟಿ, ಅಶ್ವಥ್ ಸಾಣೂರು, ಕಮಲಕ್ಸ ಪ್ರಭು, ಪ್ರಸನ್ನ, ಸುಭಾಸ್, ಕೆ ಎಮ್ ಖಲೀಲ್, ಸುರೇಶ, ಸುಜಿತ್, ಪ್ರಶಾಂತ್, ಪ್ರಶಾಂತ್ ಬಜಗೋಳಿ ಹಾಗೂ ಸುದರ್ಶನ್, ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದು ಸುಜೀತ್ ಅಂಚನ್ ಕಾರ್ಯಕ್ರಮ ನಿರೂಪಿಸಿ ಸತೀಶ್ ವರಂಗ ಧನ್ಯವಾದ ಅರ್ಪಿಸಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ಶ್ರೀ ಶಿರಡಿ ಸಾಯಿಬಾಬಾ ಮಂದಿರ ವರ್ಧಂತಿ ಉತ್ಸವ
ಕಾರ್ಕಳ ಗುತ್ತುಕರೆಯಲ್ಲಿ ನೇಮೋತ್ಸವ
U 15ರ ಭಾರತ ತಂಡದಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ