March 4, 2026

ಅರಣ್ಯ ಇಲಾಖೆ ನಾಪತ್ತೆ ಪ್ರಕರಣ ಮಂತ್ರಾಲಯದಲ್ಲಿ ಪತ್ತೆ

ಹೊನ್ನಾವರ : ತಾಲೂಕಿನ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ನಾಪತ್ತೆ ಪ್ರಕರಣ ಕೊನೆಗೂ ಬಗೆಹರಿದಿದ್ದು, ಇರ್ವರು ಮಂತ್ರಾಲಯದಲ್ಲಿ ಪತ್ತೆಯಾಗಿದ್ದಾರೆ.

ನ. 26ರಂದು ಮೇಲಾಧಿಕಾರಿಗಳ ಒತ್ತಡವಿದೆ ಪತ್ರ ಬರೆದಿಟ್ಟು ಗೇರುಸೊಪ್ಪ ವಲಯ ಅರಣ್ಯ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಕೆರೆಕೋಣ, ಅಡಿಮನೆಯ ಮಂಜುನಾಥ ಗಣಪ ನಾಯ್ಕ ಮತ್ತು ಅವರ ಪತ್ನಿ ವೀಣಾ ಮಂಜುನಾಥ ನಾಯ್ಕ ನಾಪತ್ತೆಯಾಗಿದ್ದರು. ನ.26 ರಾತ್ರಿ ಮಿಸ್ಸಿಂಗ್ ದೂರು ದಾಖಲಿಸಿಕೊಂಡು, ವಿವಿಧ ಆಯಾಮದಲ್ಲಿ ತನಿಖೆಯ ಜಾಡು ಹಿಡಿದಿದ್ದರು. 27 ರಂದು ಕುಟುಂಬಸ್ಥರು ಠಾಣಿಯ ಮುಂದೆ ಜಮಾವಣೆಗೊಂಡು ಪೊಲೀಸರ ಜೊತೆಚರ್ಚೆ ನಡೆಸಿದಾಗ ಪತ್ತೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ಪಟ್ಟಣದಲ್ಲಿ ಬೈಕ್ ನಿಲ್ಲಿಸಿಟ್ಟು, ದಿಕ್ಕು ತಪ್ಪಿಸುವ ಯತ್ನ ನಡೆದಿತ್ತು. ಸಿಸಿ ಕ್ಯಾಮರ, ಮೊಬೈಲ್ ನೆಟವರ್ಕ್ ಮೂಲಕ ಮಂತ್ರಾಲಯದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ, ಅಲ್ಲಿಯ ಪೊಲೀಸರ ಸಹಕಾರದ ಮೇರೆಗೆ ಶುಕ್ರವಾರ ಹೊನ್ನಾವರಕ್ಕೆ ದಂಪತಿಗಳನ್ನು ಪೊಲೀಸರು ಕರೆ ತಂದಿದ್ದಾರೆ.

ಮೇಲಾಧಿಕಾರಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ನಾಟಕ ಕೆಲತಿಂಗಳಿನಲ್ಲಿ ಜಿಲ್ಲೆಯ ಎರಡು ಪ್ರಕರಣವಾಗಿದ್ದು, ಪೊಲೀಸ್ ಇಲಾಖೆಯು ಈ ಬಗ್ಗೆ ಆಳವಾದ ತನಿಖೆ ಮಾಡಬೇಕಿದೆ. ಇವರೆ ಪತ್ರ ಬರೆದರಾ? ಅಥವಾ ಬೇರೆಯವರು ಸಲಹೆ ನೀಡಿದರಾ? ನಾಪತ್ತೆಯ ಬಳಿಕ ಯಾರೊಂದಿಗೆ ಇವರು ಸಂಪರ್ಕ ಹೊಂದಿದ್ದರು. ಎನ್ನುವ ವಿವಿಧ ಮಜಲುಗಳಲ್ಲಿ ತನಿಖೆ ಮುಂದುವರೆಸಬೇಕಿದೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!