ಶಿರಸಿ: ಇಲ್ಲಿನ ಅನೇಕ ಸಂಸ್ಥೆಯು ನಿಲೇಕಣಿ ಸರಕಾರಿ ಪಿಯು ಕಾಲೇಜಿನ ಸಹಕಾರದಲ್ಲಿ ಆ.16ರ ಬೆಳಿಗ್ಗೆ 10ಕ್ಕೆ ಕವಿತೆಯೊಡನೆ ನಾವು ಪಿಯು ಕಾಲೇಜು ಮಟ್ಟದ ಕವಿತಾ ವಾಚನ ಸ್ಪರ್ಧೆ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ಯುವ ಯಕ್ಷಗಾನ ಕಲಾವಿದೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ನಾಗರಾಜ ಗಾಂವಕರ ವಹಿಸಿಕೊಳ್ಳುವರು. ಅತಿಥಿಗಳಾಗಿ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ, ಕವಯತ್ರಿ ಗಾಯತ್ರೀ ರಾಘವೇಂದ್ರ, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ ಶೆಟ್ಟಿ, ಪ್ರಭಾರ ಪ್ರಾಚಾರ್ಯ ವಸಂತ ನಾಯಕ ಭಾಗವಹಿಸುವರು ಎಂದು ಸಂಚಾಲಕ, ಉಪನ್ಯಾಸಕ ಉಮೇಶ ನಾಯ್ಕ ತಿಳಿಸಿದ್ದಾರೆ.
ವರದಿ : ರಾಗವೇಂದ್ರ ಬೆಟ್ಟಕೊಪ್ಪಾ ಶಿರಸಿ

More Stories
ಡಿ.೬ಕ್ಕೆ ನಮ್ಮನೆ ಹಬ್ಬ, ಪ್ರಶಸ್ತಿ ಪ್ರದಾನ, ಚಿತ್ರನಟ ದೊಡ್ಡಣ್ಣ ಚಾಲನೆ. ‘ವಂದೇ ಗೋವಿಂದಮ್’ ಯಕ್ಷ ರೂಪಕ ಲೋಕಾರ್ಪಣೆ
ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಆಹ್ವಾನ
ನೂತನ ಅಧ್ಯಕ್ಷರಾಗಿ ಶಿವರಾಮ ಕೃಷ್ಣ ಸಂಗುಮನೆ ಉಪಾಧ್ಯಕ್ಷರಾಗಿ ಹರೀಶ ತಿಮ್ಮಪ್ಪ ಗೌಡ