
ಕುಮಟಾ : ತಾಲೂಕಿನ ಉಪ್ಪಾರಕೇರಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯು, 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ 7 ದಿನಗಳ ಪರ್ಯಂತ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕುಮಟಾ ಉಪ್ಪಾರಕೇರಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯು, ಯಶಸ್ವಿ 50 ನೇ ವರ್ಷದ ಸುವರ್ಣ ಗಣೇಶೋತ್ಸವವನ್ನು ಈ ಬಾರಿ 7 ದಿನಗಳ ಪರ್ಯಂತ ಆಚರಿಸಿದ್ದು, ಪ್ರತಿ ನಿತ್ಯವು ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕ ಸತ್ಯನಾರಾಯಣ ಕಥೆ, ದಂಡಾವಳಿ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಮುಂತಾದ ಭಕ್ತಿ ಪ್ರಧಾನ ಸೇವೆಗಳು ನಡೆದವು. ರಾತ್ರಿ ಭಜನೆ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ವಿಶೇಷವಾಗಿ ಐದನೇ ದಿನದಂದು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ವಿಜಯ ಮಹಾಲೆ ಕುಮಟಾ ತಂಡದವರಿAದ ಭಕ್ತಿ ಭಜನೆ ನಡೆಯಿತು. ಈ ಸಂದರ್ಭದಲ್ಲಿ ಭಾಗಿಯಾದ ಕುಮಟಾ ಮಿರ್ಜಾನ್ ಬಿ.ಜಿ.ಎಸ್ ಕೇಂದ್ರೀಯ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಮನೋಜ್ ಗುನಗ ಅವರು, ಹಾರ್ಮೋನಿಯಂ ನುಡಿಸುತ್ತಿರುವ ವಿಜಯ ಮಹಾಲೆಯವರ ಚಿತ್ರವನ್ನು ಪೆನ್ಸಿಲ್ ಸ್ಕೆಚ್ ಮೂಲಕ ಲೈವ್ ಬಿಡಿಸಿ ಜನ ಮೆಚ್ಚುಗೆಗೆ ಸಾಕ್ಷಿಯಾದರು. ಇನ್ನು ಕೊನೆಯ ದಿನ ಟ್ಯಾಬ್ಲೊ ಗೊಂಬೆ ನೃತ್ಯ ಆಯೋಜಿಸಿ, ಭವ್ಯ ಮೆರವಣಿಗೆಯೊಂದಿಗೆ ವಿಘ್ನ ವಿನಾಶಕನನ್ನು ವಿಸರ್ಜನೆ ಮಾಡುವುದರೊಂದಿಗೆ ಗಣೇಶೋತ್ಸವ ಸಂಪನ್ನಗೊAಡಿತು.
ವರದಿ: ನರಸಿಂಹ ನಾಯ್ಕ್ ಹರಡಸೆ.
More Stories
ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ