ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು.ಇತ್ತೀಚಿಗೆ ಕೆ. ಪಿ. ಎಸ್. ನೆಲ್ಲಿಕೇರಿ ಕುಮಟಾ ದಲ್ಲಿಜರುಗಿತು.
ಕಾರ್ಯಕ್ರಮ ದ ಉದ್ಘಾಟಕರಾದ ಶ್ರೀ ದಿನಕರ ಕೆ ಶೆಟ್ಟಿ..ಮಾನ್ಯ ಶಾಶಕರು ಕುಮಟಾ -ಹೊನ್ನಾವರ ವಿಧಾನ ಸಭಾ ಕ್ಷೇತ್ರ ಇವರು. ಶ್ರೀ ವಿನಾಯಕ ಎಲ್. ನಾಯ್ಕರನ್ನು ಸನ್ಮಾನಿಸಿ ಗೌರವಿಸಿದರು..
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಉದಯ ನಾಯ್ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಅಧ್ಯಕ್ಷರಾದ ಶ್ರೀ ಅನಂದು ಗಾಂವ್ಕರ.. ತಾಲ್ಲೂಕ ಅಧ್ಯಕ್ಷರಾದ ಶ್ರೀ ರವೀಂದ್ರ ಭಟ್ ಸೂರಿ.. ವಿವಿಧ ಪದಾಧಿಕಾರಿಗಳು ಅಧಿಕಾರಿಗಳು ಗಣ್ಯರು.SDMC ಯವರು ಪಾಲಕರು. ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಪ್ರಸ್ತುತ ಕುಮಟಾದ ಬಿ. ಆರ್. ಸಿ ಯಲ್ಲಿ ವಿಶೇಷ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾಗಿ (BIERT)ವಿಶೇಷ ಚೇತನರಿಗೆ ಶಿಕ್ಷಣ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು..ವಿಶೇಷ ಚೇತನ ವಿದ್ಯಾರ್ಥಿಗಳ.. ಪಾಲಕರ. ಶಿಕ್ಷಕರ.. ಮೆಚ್ಚುಗೆಗೆ ಪಾತ್ರ ರಾಗಿರುತ್ತಾರೆ
ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಗಾಗಿ ಇತ್ತೀಚಿಗೆ ಶ್ರೀಯುತರಿಗೆ “ಶಿಕ್ಷಣ ನಿರ್ಮಾತೃ –ರಾಜ್ಯ ಪ್ರಶಸ್ತಿ” ಹಾಗೂ ಶ್ರೀ H.ನರಸಿಂಹಯ್ಯ ರಾಜ್ಯ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.. ಹಲವು ಸಂಘ ಸಂಸ್ಥೆಗಳು ಇವರ ಪ್ರಾಮಾಣಿಕ ಹಾಗೂ. ಜನಪರ ಸೇವೆ ಗುರುತಿಸಿ ಗೌರವಿಸಿವೆ.. ಸ್ನೇಹಿತರು.. ಶಿಕ್ಷಕ ಬಳಗ ವಿದ್ಯಾರ್ಥಿವೃಂದ ಸಂತಸ ವ್ಯಕ್ತ ಪಡಿಸಿ ಇವರಿಂದ ಉತ್ತಮ ಸೇವೆ ಮುಂದುವರಿಯಲಿ ಎಂದು ಸದಾಶಯ ವ್ಯಕ್ತ ಪಡಿಸಿದರು

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’