ಹೊನ್ನಾವರ: ತಾಲೂಕಿನ ಮಂಕಿಯ ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ದಶಮಾನೊತ್ಸವದ ಅಂಗವಾಗಿ ಗೋಲ್ ದಶಮಾನೋತ್ಸವ ಜನವರಿ 3 ರಂದು ಜರುಗಲಿದೆ ಎಂದು ಶಾಲೆಯ ಪ್ರಾಚಾರ್ಯೆ ಸವಿತಾ ಪವಾರ ತಿಳಿಸಿದರು.
ಪಟ್ಟಣದ ಖಾಸಗಿ ಹೊಟೇಲನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಗೋಲ್ಗ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆ ಪ್ರತಿವರ್ಷ ಒಂದೊಂದು ಧ್ಯೇಯವಾಕ್ಯದಡಿ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುತ್ತ ಬಂದಿದ್ದು ಈ ಬಾರಿ “ಸಂಸ್ಕ್ರತಿಯಿಂದ ಸಮೃದ್ದಿಯಡೆದಗೆ” ಎನ್ನುವ ಧೈಯ ವಾಕ್ಯದಡಿ ಜರುಗಲಿದೆ.
ಶಾಲೆ ಆರಂಭವಾಗಿ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಪಠ್ಯೇತರ, ಕ್ರೀಡೆಯಲ್ಲಿ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಈ ಬಾರಿ ಡೈನಾಮಿಕ ಶಾಲೆ ಎನ್ನುವ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ .
ಜನವರಿ 2 ರಂದು ವಿಜ್ಞಾನ ವಸ್ತುಗಳ ಪ್ರದರ್ಶನ ನಡೆಯಲಿದೆ. ಜನವರಿ 3 ರಂದು
೫.೩೦ ಗಂಟೆಗೆ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕನ್ನಡಪ್ರಭಾ ಪತ್ರಿಕೆಯ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಬಿಇಓ ವಿನಾಯಕ ಅವಧಾನಿ ಪಾಲ್ಗೊಳ್ಳುವರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ.ಆರ್.ನಾಯಕ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಜೊತೆಗೆ ಸಾಧನೆಗೈದವರ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಶಿಕ್ಷಕಿ ಬೇಬಿ ಬೆಂಜಾಮಿನ್ ಉಪಸ್ಥಿತರಿದ್ದರು.

More Stories
ಕರ್ಕಿಯಲ್ಲಿ ದಿವಂಗತ ಪ್ರಭಾಕರ ಭಂಡಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಆಕಸ್ಮಿಕ ಬೆಂಕಿ
೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ