ಶಿರಸಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಾಹಿತಿ ಶಿಕ್ಷಣ ಸಂವಹನ ಉತ್ತರ ಕನ್ನಡ, ಕಾರವಾರ ಮತ್ತು ಗ್ರೀನ್ ಕೇರ್ ಕಲಾತಂಡದ ಸಂಯುಕ್ತ ಆಶ್ರಯದಲ್ಲಿ
ಜಾನಪದ ಕಲಾ ಪ್ರದರ್ಶನವನ್ನು
ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರೀನ್ ಕೇರ್ ಕಲಾ ತಂಡದವರಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಮಂಗನ ಕಾಯಿಲೆಯ ಬಗ್ಗೆ ಬಗ್ಗೆ ಬೀದಿ ನಾಟಕದ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು ಶ್ರೀರಾಮಚಂದ್ರ ಎಚ್. ಶೆಟ್ಟಿ ಮತ್ತು ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗೌರಿ ಸಿ. ನಾಯ್ಕ ತಮಟೆಯನ್ನು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರು ಶ್ರೀ ಉದಯಶಂಕರ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆ ಉತ್ತರ ಕನ್ನಡದ ಅಧ್ಯಕ್ಷರಾದ ಶ್ರೀ ಮಹೇಶ್ ಡಿ ನಾಯಕ್, ನಿವೃತ್ತ ಆಹಾರ ಸುರಕ್ಷಣಾಧಿಕಾರಿಗಳಾದ ಶ್ರೀ ಅರುಣ್ ಕಾಶಿ ಭಟ್, ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿತೇಂದ್ರ ಕುಮಾರ್ ಆರ್. ಎಂ, ಹೆಗಡೆ ಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಹಾಲಕ್ಷ್ಮಿ ಎನ್. ಹೆಗಡೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರಿ ಚಂದನ ಧಾರವಾಡ, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಶ್ರೀ ವಿಜಯ್ ಆಚೆದಿಂಬ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಕಲಾತಂಡದವರಿಂದ ಸಾರ್ವಜನಿಕರಿಗೆ ತಂಬಾಕಿನ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಮಂಗನ ಕಾಯಿಲೆಯ ಬಗ್ಗೆ ಬಗ್ಗೆ ಬೀದಿ ನಾಟಕದ ಮೂಲಕ ಪ್ರದರ್ಶನವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 150 ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು.

More Stories
ಜಾತ್ರಾ ಸಮಯದಲ್ಲಿ ಹೋಟೆಲ್ ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕರಿಂದ ಸೂಚನೆ.
ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ 950ನೇ ವಿಶೇಷ ಕಾರ್ಯಕ್ರಮ ಫೆ 28 ರಂದು ನವದೆಹಲಿಯಲ್ಲಿ
ಭಕ್ತಾದಿಗಳಿಗೆ ತಂಪು ಪಾನೀಯ ಕರ್ನಾಟಕ ರಕ್ಷಣಾ ವೇದಿಕೆಯಿಂದ