ಹೊನ್ನಾವರ : ನಮ್ಮ ಜೀವನ ಒಳ್ಳೆದಾಗಿ ಸಾಗಲು ,ಹರ್ಷದಾಯಕವಾಗಿರಲು ,ನೆಮ್ಮದಿ, ಸಮಾಧಾನ ,ಸಂತೋಷವಾಗಿರಲು ಮಾನಸಿಕ ಮತ್ತು ದೈಹಿಕ ಆರೋಗ್ಯ ಅತಿ ಮುಖ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ಹೇಳಿದರು.
ತಾಲೂಕಿನ ಶ್ರೀಕುಮಾರ ಲಾಜಿಸ್ಟಿಕ್ ಇಂಡಿಯಾದ ಮುಖ್ಯಸ್ಥ ವೆಂಕಟರಮಣ ಹೆಗಡೆ ಕವಲಕ್ಕಿ ಜನ್ಮದಿನದ ಅಂಗವಾಗಿ
ಕವಲಕ್ಕಿಯ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎಸ್.ಆರ್.ಎಲ್. ಗ್ರೂಪ್ ಮತ್ತು ಎಸ್ ಕೆ ಡಿ ಆರ್ ಡಿ ಪಿ ಸಹಕಾರದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ದೈನಂದಿನ ಜೀವನಕ್ರಮ ಅಚ್ಚುಕಟ್ಟಾಗಿರಬೇಕು. ನಾವು ಬಳಸುತ್ತಿರುವ ಆಹಾರ ಪದಾರ್ಥಗಳು ಕಲಬೇರಕೆ ಆಗಿದೆ.ಇದು ಸಹ ನಮ್ಮ ಆರೋಗ್ಯ ಹದಗೆಡಲು ಕಾರಣವಾಗಿದೆ. ನಾವು ಇತರರಿಗೆ ಸಹಾಯ ಮಾಡಿದರೆ ನಮ್ಮ ಬದುಕು ಇತರರಿಗೆ ಮಾದರಿ ಆಗಲಿದೆ .ಹಾಗಾದಲ್ಲಿ ನಮ್ಮ ಬದುಕು ಧನ್ಯ ಎಂದರು.
ತಾಲೂಕು ಎಸ್ ಕೆ ಡಿ ಆರ್ ಡಿ ಪಿ ಯೋಜನಾಧಿಕಾರಿ ಪ್ರಭಾಕರ್ ಎಚ್ ಮಾತನಾಡಿ ಗ್ರಾಮಿಣ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ತುತ್ಯಾರ್ಹ. ನಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೊಂದಿರಬೇಕು ಎಂದರು. ಪತ್ರಕರ್ತ ಜಿ.ಯು.ಭಟ್ ಶುಭಹಾರೈಸಿದರು. ಎಸ್.ಆರ್.ಎಲ್. ಗ್ರೂಪ್ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಹೃದಯ ರೋಗ, ಜನರಲ್ ಮೆಡಿಸಿನ್, ಹೆರಿಗೆ ಮತ್ತು ಸ್ತ್ರಿರೋಗ ತಜ್ಞರು, ಮಕ್ಕಳ ತಜ್ಞರು, ಎಲುಬು ಮತ್ತು ಕೀಲು ತಜ್ಞರುಣ ಚರ್ಮರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ಮಾನಸಿಕ ಚಿಕಿತ್ಸೆ ತಜ್ಞರು ಆಗಮಿಸಿದ್ದರು. ಶಂಭು ಹೆಗಡೆ ನಿರೂಪಿಸಿದರು.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ