ಹೊನ್ನಾವರ: ರಾಜ್ಯ ಕಾಂಗ್ರೇಸ್ ನಡೆಯುತ್ತಿರುವ ಅಧಿಕಾರ ಹಂಚಿಕೆ ವಿದ್ಯಮಾನದ ಕುರಿತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಶಿಘ್ರದಲ್ಲೆ ತೆರೆ ಎಳೆಯಲಿದ್ದಾರೆ ಎಂದು ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎರಡು ದಿನ ಪ್ರವಾಸದಲ್ಲಿರುವ ಸಚಿವರು ಹೊನ್ನಾವರದ ಅರೇಅಂಗಡಿಯ ಶ್ರೀಧರ ಶೆಟ್ಟಿ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಸದ್ಯ ಚರ್ಚೆ ಇಲ್ಲ, ಇದು ಪಕ್ಷದ ಹೈಕಮಾಂಡ ಮಟ್ಟದಲ್ಲಿ ತಿರ್ಮಾಣವಾಗಲಿದೆ. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣೆಗೆಯನ್ನು ಹೈಕಮಾಂಡ ಗಮನಿಸುತ್ತಿದೆ ಎನ್ನುವ ಮೂಲಕ ಸಿಎಂ. ಸಿದ್ದರಾಮಯ್ಯವರೇ ಮುಂದುವರೆಯುವ ಪರೋಕ್ಷ ಸೂಚನೆ ನೀಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಲಂಚ ಸ್ವೀಕರಿಸಿರುವ ಸಮಯದಲ್ಲಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ತನಿಖೆ ನಡೆದು ಶಿಕ್ಷೆಯಾದಾಗ ಮಾತ್ರ ಮುಂದಿನ ದಿನದಲ್ಲಿ ಭೃಷ್ಟಾಚಾರ ನಿಯಂತ್ರಣವಾಗಲಿದೆ, ಈ ಬಗ್ಗೆ ಲೋಕಾಯುಕ್ತ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಶ್ವಾಸವಿದೆ ಎಂದರು.
ಕಳೆದ 20 ವರ್ಷದಿಂದ ನನ್ನ ಕ್ಷೇತ್ರದಲ್ಲಿ ಉತ್ಸವ ಮಾಡುತ್ತಿದ್ದು, ಅದರಂತೆ ಹೊನ್ನಾವರ ಉತ್ಸವ ನೋಡಲು ಇಂದು ಆಗಮಿಸಿದ್ದೇನೆ, ಈ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಇಲ್ಲಿಯ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಮಳಿಗೆಗಳನ್ನು ವಿಕ್ಷಿಸುತ್ತೇನೆ. ಸೋಮವಾರ ಕುಮಟಾ ಹೊನ್ನಾವರ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಈಗಾಗಲೇ ಎರಡು ಸೇತುವೆ ಮಂಜೂರಾಗಿದ್ದು, ಇದರ ಶಂಕುಸ್ಥಾಪನೆ ನಡೆಸಲಾಗುವುದು. ಕರ್ಕಿ ಪಾವಿನಕುರ್ವಾ ಗ್ರಾಮದ ತೂಗುಸೇತುವೆ ವಿಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚೆ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಹೊನ್ನಾವರ ಮೆಣಸಿ ರಾಜ್ಯ ಹೆದ್ದಾರಿ ಬಗ್ಗೆ ಸ್ಥಳಿಯರಿಂದ ಮನವಿ ಸ್ವೀಕರಿಸಿ ಅರಣ್ಯ ಇಲಾಖೆಯಿಂದ ಅನುಮೊದನೆ ಪಡೆದು ಕಾಮಗಾರಿ ಆರಂಭಿಸುವ ಮೂಲಕ ದಶಕಗಳ ಬೇಡಿಕೆಯನ್ನು ಈಡೇರಿಸುದಾಗಿ ಸಚಿವರು ಭರವಸೆ ನೀಡಿದರು.
ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಹೀನಾಯ ಸ್ಥಿತಿ ತಲುಪಿರುವ ಬಗ್ಗೆ ಪ್ರಶ್ನಿಸಿದಾಗ, ಪಕ್ಷ ಸಂಘಟನೆಗೆ ಒತ್ತು ನೀಡಲು ಆಗಾಗ ಭೇಟಿ ನೀಡುತ್ತಿದ್ದೇವೆ. ಮುಂದಿನ ದಿನದಲ್ಲಿ ಪಕ್ಷ ಬಲವರ್ಧನೆ ಹೆಚ್ಚಿನ ಒತ್ತು ನೀಡುವ ಭರವಸೆ ನೀಡಿದರು.
ಅರೇಅಂಗಡಿ ಸರ್ಕಲ್ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದಲ್ಲೆ ಇರುವ ಲಲಿತಾ ಹುಲಸ್ವಾರ ಇವರ ಮನೆಗೆ ಭೇಟಿ ನೀಡಿ ಪ್ರಾಣಿ ಸಾಕಾಣಿಕೆಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೆ ವೇಳೆ ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಲಿ ಗೊರವನಕೊಳ್ಳ,
ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ, ರವಿಕುಮಾರ ಶೆಟ್ಟಿ, ವಿನಾಯಕ ಶೆಟ್ಟಿ, ಸಂದೇಶ ಶೆಟ್ಟಿ, ವಿನೋದ ನಾಯ್ಕ ಕರ್ಕಿ ಸೇರಿದಂತೆ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
……….
ಎರಡು ದಿನಗಳ ಜಿಲ್ಲಾ ಪ್ರವಾಸದ ನಿಮಿತ್ತ ಆಗಮಿಸಿದ ರಾಜ್ಯ ಲೊಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಇವರನ್ನು ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ತಹಶೀಲ್ದಾರ ಪ್ರವೀಣ ಕರಾಂಡೆ, ಸಿಪಿಐ ಸಿದ್ದರಾಮೇಶ್ವರ, ಪಿಡಬ್ಲುಡಿ ಅಧಿಕಾರಿ ಎಂ.ಎಸ್.ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹೊನ್ನಾವರ ಉತ್ಸವ ಸಮಿತಿ ಸದಸ್ಯರು ಆತ್ಮಿಯವಾಗಿ ಸ್ವಾಗತಿಸಿದರು.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ