ಹೊನ್ನಾವರ : ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಮೋಟಾರ ಅಪಘಾತ ಪರಿಹಾರ ವಿಮಾ ಪ್ರಕರಣಗಳು ರಾಜಿ ಸಂದಾನದ ಮೂಲಕ ಇತ್ಯರ್ಥಗೊಂಡವು.
ಹೊನ್ನಾವರ ಸಿವಿಲ್ ಜಡ್ಜ ಹಿರಿಯ ವಿಭಾಗ ಮತ್ತು ಎಮ್.ಎ.ಸಿ.ಟಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ೩೯, ಮೋಟಾರ ಅಪಘಾತ ಪರಿಹಾರ ಪ್ರಕರಣಗಳು ೨, ವಾಂಟಣಿ ದಾವೆ ೧, ಅಮಲ್ಜಾರಿ ಪ್ರಕರಣಗಳು ೮, ಒಟ್ಟೂ ೫೦ ಪ್ರಕರಣಗಳು ಇತ್ಯರ್ಥಗೊಂಡವು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ, ಸಂದಾನರಾರರಾಗಿ ವಿ.ಎಮ್. ಭಂಡಾರಿ ಉಪಸ್ಥಿತರಿದ್ದರು.
ಹೊನ್ನಾವರ ಹೆಚ್ಚುವರಿ ಜೆ. ಎಮ್.ಎಫ್. ಸಿ ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ೧೪೩ ಪ್ರಕರಣಗಳು ರಾಜಿ ಮೂಲಕ ಪ್ರಕರಣಗೊಂಡವು, ೨೬ ಚೆಕ್ ಬೌನ್ಸ್ ಪ್ರಕರಣಗಳು, ೩ ವಾಂಟಣಿ ದಾವೆಗಳು, ೨೩ ಅಮಲ್ಜಾರಿ ಪ್ರಕರಣಗಳು, ೯೧ ಲಘು ಕ್ರಿಮಿನಲ್ ಪ್ರಕರಣಗಳು ನಿಖಾಲಿಗೊಂಡವು.
ಹೊನ್ನಾವರ ಪ್ರಿನ್ಸಿಪಲ್ ಜೆ. ಎಮ್.ಎಫ್. ಸಿ ನ್ಯಾಯಾಲಯಕ್ಕೆ ಸಂಬಂಧಪಟ್ಟ ೨೮೦ ಪ್ರಕರಣಗಳು ಇತ್ಯರ್ಥಗೊಂಡವು, ಅವುಗಳಲ್ಲಿ ೪೮ ಚೆಕ್ ಬೌನ್ಸ ಪ್ರಕರಣಗಳು, ೧ ಕ್ರಮಿನಲ್ ಪ್ರಕರಣಗಳು, ೩ ಬ್ಯಾಂಕ ಹಣಕಾಸು ಪ್ರಕರಣಗಳು, ೨ ವಾಂಟಣಿ ದಾವೆಗಳು, ೨೨ ಅಮಲ್ಜಾರಿ ಪ್ರಕರಣಗಳು, ೧ ಜೀವನಾಂಶ ಪ್ರಕರಣ, ೧ ಖಾಸಗಿ ದೂರು, ೨೦೨ ಲಘು ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೊಂಡವು. ಜೆ.ಎಮ್.ಎಫ್. ಸಿ ನ್ಯಾಯಾಧೀಶ ಅನಿಲ್ ಜೊನ್ ಸಿಕ್ವೇರಾ, ಸಂದಾನಕಾರರಾಗಿ ಎಮ್.ಆಯ್. ಹೆಗಡೆ, ಉಪಸ್ಥಿತರಿದ್ದರು. ಸರಕಾರಿ ಅಭಿಯೋಜಕಿಯರಾದ ಸಂಪದಾ ಗುನಗಾ, ಪೂರ್ಣಿಮಾ ನಾಯ್ಕ ಉಪಸ್ಥಿತರಿದ್ದರು.

More Stories
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರತಿಷ್ಠಿತ ರಾಷ್ಟ್ರೀಯ ಶಾಲಾ ಪ್ರಶಸ್ತಿಯನ್ನು ಗಳಿಸಿದೆ.
ಡಾ. ಜಿ.ಎಸ್. ಹೆಗಡೆ ಅವರಿಗೆ ಭವ್ಯ ನಾಗರಿಕ ಸನ್ಮಾನ
ಹೊನ್ನಾವರದಲ್ಲಿ ಸೂಪರ್ ಮಾರ್ಕೆಟ್ ಕಳ್ಳತನ: 48 ಗಂಟೆಯಲ್ಲೇ ಆರೋಪಿತ ಬಂಧನ