ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಬೆಡದಹಳ್ಳಿಯ ಶ್ರೀ ಪಂಚಭೊತೇಶ್ವರ ದೇವಾಲಯದ ಮಠದಲ್ಲಿ ಮಕ್ಕಳಿಗೆ ವಸತಿ ಸಹಿತ ಸಂಸ್ಕಾರ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು..

ಶಾಸಕ ಹೆಚ್ ಟಿ ಮಂಜು ಕಾರ್ಯಕದಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದವನ್ನು ಕಲಿಕೆಯಾಗಬೇಕು ಅದೇ ರೀತಿ ಕಳೆದ ಮೂರು ವರ್ಷಗಳಿಂದ ಶ್ರೀ ಪಂಚಭೊತೇಶ್ವರ ಸುಕ್ಷೇತ್ರದಲ್ಲಿ ಪೀಠಾದ್ಯಕ್ಷರದ ಶ್ರೀ ರುದ್ರುಮುನಿ ಸ್ವಾಮೀಜಿ ರವರು ಮಕ್ಕಳಿಗೆ ಸಂಸ್ಕಾರದ ಅರಿವು ಮತ್ತು ಚಿತ್ರಕಲೆ, ಸಂಗೀತಾ, ನೃತ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮದೊಂದಿಗೆ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಈ ಶಿಭಿರದ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದ್ರು..
ಶ್ರೀ ಪಂಚಭೊತೇಶ್ವರ ಸುಕ್ಷೇತ್ರ ಪೀಠಾದ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಪ್ರತಿ ವರ್ಷದಂತೆ ದಾನಿಗಳ ಸಹಾರದೊಂದಿಗೆ ಊಟ ವಸತಿ ಸಹಿತ 10 ದಿನದ ಮಕ್ಕಳಿಗೆ ಸಂಸ್ಕಾರ ಶಿಭಿರ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಧಾನಿಗಳು ಕೈಲಾದ ಸಹಾಯ ಮಾಡುವುದರ ಜೊತೆಗೆ ಮಕ್ಕಳ ಕಲಿಗೆ ಕೈ ಜೋಡಿಸುವಂತೆ ತಿಳಿಸಿದ್ರು..

ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಸ್ವಾಮಿಜಿ, ಶಾಸಕ ಹೆಚ್ ಟಿ ಮಂಜು, ಟಿ ಎ ಪಿ.ಎಂ ಎಸ್ ನಿರ್ದೇಶಕ ದೀಲೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜೇಗೌಡ, ಬಿ.ಜಿ.ಪಿ ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ, ಉದ್ಯಮಿ ಎಂ ಎಸ್ ಸುಬ್ರಹ್ಮಣ್ಯ, ಶಿಕ್ಷಕ ಮಹೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಸುನೀಲ್, ಶಿಕ್ಷಕ ಪ್ರಕಾಶ್, ಮಠದ ಕಾರ್ಯದರ್ಶಿ ಕಾಂತರಾಜು ಪತ್ರಕರ್ತರಾದ ಶ್ರೀನಿವಾಸ್, ಚಂದ್ರು ಕಾಡುಮೆಣಸ, ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಕೆ.ಆರ್.ಪೇಟೆಯಲ್ಲಿ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಂಭ್ರಮ
ಆಷಾಢದ 2ನೇ ಶುಕ್ರವಾರ: ವಾರಾಹಿ ರೂಪದಲ್ಲಿ ಕಂಗೊಳಿಸಿದ ಶ್ರೀ ಚೌಡೇಶ್ವರಿ ದೇವಿ, ಹರಿದುಬಂದ ಭಕ್ತಸಾಗರ
ಡ್ರಗ್ಸ್ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ: ಕೆ.ಆರ್.ಪೇಟೆಯಲ್ಲಿ ಡಿವೈಎಸ್ಪಿ ಚೆಲುವರಾಜು ಕರೆ