ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿ ವಧೆ ಮಾಡಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿ, ಎರಡು ಎತ್ತುಗಳನ್ನು ರಕ್ಷಿಸಿ ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
ಬಂದರ್ ರೋಡ್ 3ನೇ ಕ್ರಾಸ್ ನಿವಾಸಿ ಮಹಮ್ಮದ್ ಶಿಯಾಮ್ (42) ಸೇರಿದಂತೆ ಇತರರು ಸೇರಿಕೊಂಡು ಸುಮಾರು ₹2 ಲಕ್ಷ ಮೌಲ್ಯದ ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಆರೋಪಿಗಳು ಬಂದರ್ ರೋಡ್ 6ನೇ ಕ್ರಾಸ್ ಸಮೀಪದ ಖಾಲಿ ಜಾಗಕ್ಕೆ ವಾಹನದ ಮೂಲಕ ಎತ್ತುಗಳನ್ನು ತಂದು, ಅವುಗಳಿಗೆ ನೀರು ಹಾಗೂ ಮೇವು ನೀಡದೆ ಕಟ್ಟಿ ಹಾಕಿ, ವಧೆ ಮಾಡುವ ಉದ್ದೇಶದಿಂದ ಬೇರೆಡೆಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿದ್ದ ಎರಡು ಎತ್ತುಗಳನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ಸರ್ಕಾರದ ಪರವಾಗಿ ಪಿಎಸ್ಐ ತಿಮ್ಮಪ್ಪ ಎಸ್ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

More Stories
ಗಾಂಜಾ ಸೇವನೆ ದೃಢ; ಮೂವರು ಯುವಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಕಾಲೇಜು ಶುಲ್ಕದ ಹಣ ವಾಪಸ್ ಸಿಗದೆ ಮನನೊಂದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ
ಯುಜಿಡಿ ಸೋರಿಕೆಯಿಂದ 50ಕ್ಕೂ ಹೆಚ್ಚು ಬಾವಿ ನೀರು ಕಲುಷಿತ; ಜೂನ್ 15ಕ್ಕೆ ಹೆದ್ದಾರಿ ತಡೆ ಎಚ್ಚರಿಕೆ