ಶಿರೂರು : ಪರಮಪೂಜ್ಯ ಯೋಗಬ್ರಹ್ಮ ಶ್ರೀ ಋಷಿಪ್ರಭಾಕರ್ ಗುರುಜಿಯವರ ದಿವ್ಯಾಶೀರ್ವಾದದಲ್ಲಿ, ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ, ಬೆಂಗಳೂರು ಅವರ ನೇತೃತ್ವದಲ್ಲಿ ಏಪ್ರಿಲ್ 11ರಿಂದ 21ರವರೆಗೆ ನಡೆದ 11 ದಿನಗಳ ಉಪನಯನ ಸಂಸ್ಕಾರ ಹಾಗೂ ಬೇಸಿಗೆ ಶಿಬಿರ ಯಶಸ್ವಿಯಾಗಿ ನೆರವೇರಿತು.
ಏಪ್ರಿಲ್ 12ರಂದು ಶುಭಮುಹೂರ್ತದಲ್ಲಿ ತಿರುಪತಿಯ ಟಿಟಿಡಿ ನಿರ್ವಹಣೆಯ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಆಚಾರ್ಯ ಡಾ. ಉಮೇಶ್ ಟಿ ಅವರ ಪೌರೋಹಿತ್ಯದಲ್ಲಿ ಶಿಬಿರದ ಮಕ್ಕಳಿಗೆ ಉಪನಯನ ಸಂಸ್ಕಾರ ನೆರವೇರಿತು.
ಮುಂದಿನ ದಿನಗಳಲ್ಲಿ ಆಚಾರ್ಯ ಶ್ರೀ ಕೇಶವಜೀ ಬೆಳ್ನಿ ಹಾಗೂ ಇತರ ಆಚಾರ್ಯರ ಮಾರ್ಗದರ್ಶನದಲ್ಲಿ ಸೂರ್ಯನಮಸ್ಕಾರ, ಅಗ್ನಿಹೋತ್ರ, ಪ್ರಾಣಾಯಾಮ, ಧ್ಯಾನ, ಸ್ತೋತ್ರಪಠನೆ ಮತ್ತು ನಿತ್ಯ ಜಪಾನುಷ್ಠಾನದ ತರಬೇತಿ ನೀಡಲಾಯಿತು. ಆಚಾರ್ಯ ಅರವಿಂದ್ ನಿಪ್ಪಾಣಿ ಅವರಿಂದ ಗಾಂಧಾರಿ ವಿದ್ಯೆ ಮತ್ತು ಕೈಗಾರಿಕೆ (ಕ್ರಾಫ್ಟ್) ತರಗತಿಗಳು ನಡೆದವು.
ಶಿಬಿರದಲ್ಲಿ ಮಕ್ಕಳು ದೇಸಿ ಆಟಗಳು, ಟ್ರಕ್ಕಿಂಗ್, ಭಜನೆ, ನರ್ತನ, ಫೈರ್ ಕ್ಯಾಂಪ್ ಹಾಗೂ ಸೂರ್ಯಾಸ್ತ ವೀಕ್ಷಣೆ ಮೂಲಕ ದೈಹಿಕ–ಮಾನಸಿಕ ಉಲ್ಲಾಸ ಅನುಭವಿಸಿದರು. ಸಿದ್ಧ ಸಮಾಧಿ ಯೋಗದ ವ್ಯಕ್ತಿತ್ವ ವಿಕಾಸ ತರಗತಿಗಳಲ್ಲಿ ನಾಯಕತ್ವ, ಜವಾಬ್ದಾರಿ, ತಾಯಿ–ತಂದೆ ಮತ್ತು ಗುರುಗಳ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಏಪ್ರಿಲ್ 21ರಂದು ಸಮಾರೋಪ ಕಾರ್ಯಕ್ರಮದಲ್ಲಿ ಕಂಬದಕೋಣೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಎಸ್. ಶೆಟ್ಟಿಯವರು ಭಾಗವಹಿಸಿ ಮಕ್ಕಳಿಗೆ ಹಾಗೂ ಪಾಲಕರಿಗೆ ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಕಲಿತ ಜಪಾನುಷ್ಠಾನ, ಸ್ತೋತ್ರಪಠನೆ ಮತ್ತು ಗಾಂಧಾರಿ ವಿದ್ಯೆಯ ಪ್ರದರ್ಶನ ನಡೆಯಿತು. ಅಂತಿಮವಾಗಿ ಶಿಬಿರಾರ್ಥಿಗಳು ಮಾತಾ–ಪಿತೃರ ಪಾದಪೂಜೆ ನೆರವೇರಿಸಿದರು.
ಶಿಬಿರಕ್ಕೆ ಮೆಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೊಕ್ತೇಶ್ವರ ಪ್ರಕಾಶ್ ಶೆಟ್ಟಿಯವರು ಸ್ಥಳಾವಕಾಶ ಒದಗಿಸಿದರು. ಸಿದ್ಧ ಸಮಾಧಿ ಯೋಗದ ಸ್ವಯಂಸೇವಕರು 11 ದಿನಗಳ ಕಾಲ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರನ್ನು ಅಭಿನಂದಿಸಲಾಯಿತು.

More Stories
ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪ್ಪುಂದದಲ್ಲಿ 7ನೇ ಶಾಖೆ ಉದ್ಘಾಟನೆ
ಸುರಭಿ ಜೈಸಿರಿ -2026 ಬಿಂದುಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ.
ಕಂಬದಕೋಣೆ ಗ್ರಾಮ ಪಂಚಾಯತ್ನಲ್ಲಿ ಸುದ್ಧಿಗೋಷ್ಟಿ