ಬೈಂದೂರು : ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡಗಲ್ಲು ಕೆರಾಡಿ ಇಲ್ಲಿಗೆ ಶ್ರೀಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಇವರು ಬುಧವಾರ ಭೇಟಿ ನೀಡಿ, ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಶ್ರೀ ಕೇಶವನಾಥೇಶ್ವರ ದೇವರಿಗೆ ತ್ರಿಶೂಲ ಹಾಗೂ ಡಮರುಗ ಸಮರ್ಪಿಸಿ, ಶ್ರೀಕ್ಷೇತ್ರ ಶಂಕರಪುರ ದ್ವಾರಕಾಮಯಿ ಏಕಜಾತಿ ಧರ್ಮ ಪೀಠದ ಪೀಠಾಧ್ಯಕ್ಷರ ಶ್ರೀ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಮಾತನಾಡಿ, ಸಮಸ್ತ ಹಿಂದೂಗಳ ಮನಸ್ಸು ಒಂದಾಗಬೇಕು ಎಲ್ಲಾ ಹಿಂದೂಗಳ ರಕ್ಷಣೆಯಾಗಬೇಕು. ಸನಾತನದ ಧರ್ಮದ ರಕ್ಷಣೆಯಾಗಬೇಕು ಎನ್ನುವ ಮಹಾ ಸಂಕಲ್ಪ ಇಟ್ಟುಕೊಂಡು ಕೇಶವನಾಥೇಶ್ವರ ದೇವರಿಗೆ ತ್ರಿಶೂಲ ಸಮರ್ಪಣೆ ಮಾಡಿದ್ದೇವೆ. ಈ ಸನಾತನ ಭೂಮಿಗೆ ಸೂರ್ಯ-ಚಂದ್ರ ಇರುವ ತನಕ ಶಾಶ್ವತವಾಗಿರಲಿ. ನಾವೆಲ್ಲ ಹಿಂದುಗಳು ಪ್ರೀತಿ, ಒಗ್ಗಟಾಗಿರಲಿ ಎಂದರು.


ಈ ಸಂದರ್ಭದಲ್ಲಿ ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡ್ಗಲ್ ಅನುವಂಶಿ ಧರ್ಮದರ್ಶಿ ರಾಘವೇಂದ್ರ ಕಾರಂತ್, ಶಂಕರಪುರ ಮಠದ ಭಕ್ತರಾದ ಗಜೇಂದ್ರ ಎಸ್ ಬೇಲೆಮನೆ, ನಾಗರಾಜ್ ಪೂಜಾರಿ ಹೇರೂರು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲದ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಸೇವಾ ಟ್ರಸ್ಟ್ ನ ಸ್ಥಾಪಕರುಗಳಾದ ಪ್ರವೀಣ್ ಎಸ್. ಕುಂಪಲ, ಪುರುಷೋತ್ತಮ ಕಲ್ಲಾಪು, ಟ್ರಸ್ಟಿಗಳಾದ ನರೇಶ್ ಚೌಟ ಮುಳಿಹಿತ್ಲು, ಗಣೇಶ್ ಪಂಡಿತ್, ಪ್ರಶಾಂತ್ ಗಟ್ಟಿ ಕಾಯಂಗಳ, ಸೇವಕರುಗಳಾದ ಪ್ರವೀಣ್ ಮೆಸ್ಕಾಂ, ಶವಿತ್ ಉಚ್ಚಿಲ್, ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಂಘದ ಜಿಲ್ಲಾಧ್ಯಕ್ಷ ಎಚ್ ಸುಶಾಂತ್ ಆಚಾರ್ ಬೈಂದೂರು ಮುಂತಾದವರು ಉಪಸ್ಥಿತರಿದ್ದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

More Stories
ಖ್ಯಾತ ನಿರೂಪಕ ಕಿರಣ್ ಬಿಜೂರು ಇವರಿಗೆ ಯುವ ನಿರೂಪಕ ರತ್ನ ಪ್ರಶಸ್ತಿ
ಉಪನಯನ ಸಂಸ್ಕಾರ–ಬೇಸಿಗೆ ಶಿಬಿರ ಯಶಸ್ವಿ ಸಮಾರೋಪ
ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪ್ಪುಂದದಲ್ಲಿ 7ನೇ ಶಾಖೆ ಉದ್ಘಾಟನೆ