ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಸುಕನ್ಯಾ ವೃದ್ಧಾಶ್ರಮಕ್ಕೆ ಮೈಸೂರಿನ ಧನ್ವಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ಭೇಟಿ ನೀಡಿ, ವೃದ್ಧರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಲ್.ಎಸ್ ಚಾಂಪಿಯನ್ ತಂಡದ ಸಂಸ್ಥಾಪಕ ವಿಜಯಕುಮಾರ್ ಅವರು, “ಇಲ್ಲಿರುವ ವೃದ್ಧರನ್ನು ಸ್ವಂತ ತಂದೆ-ತಾಯಿಯಂತೆ ಜೋಪಾನ ಮಾಡುತ್ತಿರುವುದು ಶ್ಲಾಘನೀಯವಾದದ್ದು. ನಮ್ಮ ಕಂಪನಿಯ ವತಿಯಿಂದ ಶೀಘ್ರದಲ್ಲೇ ಈ ಆಶ್ರಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು (R.O. Plant) ಅಳವಡಿಸಿಕೊಡಲಾಗುವುದು,” ಎಂದು ಭರವಸೆ ನೀಡಿದರು.
ರೋಗಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಅಭಿಯಾನ
ಅಥಣಿ ನಗರದ ಆರ್. ಹೋಟೆಲ್‌ನಲ್ಲಿ ಧನ್ವಂತರಿ ಲೋಕಸಿರಿ ಬಯೋಟೆಕ್ ಕಂಪನಿಯ ವತಿಯಿಂದ ಸಾರ್ವಜನಿಕರಿಗಾಗಿ ಹಾಗೂ ರೈತರಿಗಾಗಿ ‘ರೋಗಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಕಟ್ಟುವ ಕಡೆ’ ಎಂಬ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರಿನಿಂದ ಆಗಮಿಸಿದ ಡಿ.ಎಲ್.ಎಸ್ ಸೆಲ್ಸ್ ಹೆಡ್ ಮತ್ತು ಮಾರ್ಗದರ್ಶಕರಾದ ಚರಣ್ ರಾಜ್, ಡಿ.ಎಲ್.ಎಸ್ ಚಾಂಪಿಯನ್ ತಂಡದ ಸಂಸ್ಥಾಪಕ ವಿಜಯಕುಮಾರ್ ಹಾಗೂ ಡಿ.ಎಲ್.ಎಸ್ ಸಿಲ್ವರ್ ಡೈರೆಕ್ಟರ್ ರೇಖಾ ಎಸ್. ಇವರನ್ನು ಭವ್ಯ ಮೆರವಣಿಗೆಯ ಮೂಲಕ, ಹೂಮಾಲೆ ಹಾಕಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಬಳಿಕ ರೈತ ಗೀತೆಯನ್ನು ಹಾಡುವ ಮೂಲಕ ದೇಶದ ಬೆನ್ನೆಲುಬಾದ ರೈತರಿಗೆ ಗೌರವ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಆರೋಗ್ಯವೇ ಭಾಗ್ಯ: “ಆಯುರ್ವೇದ ಗಿಡಮೂಲಿಕೆ, ಹಣ್ಣುಗಳು ಹಾಗೂ ಮನೆಯಲ್ಲಿರುವ ಆಹಾರ ಪದಾರ್ಥಗಳಿಂದ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಇದು ಕೇವಲ ರೋಗಲಕ್ಷಣಗಳನ್ನಷ್ಟೇ ಅಲ್ಲದೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟಾರೆಯಾಗಿ ಪರಿಗಣಿಸಿ ರೋಗಮುಕ್ತವಾಗಲು ಸಹಾಯ ಮಾಡುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇದನ್ನು ಬಡಜನರಿಗೆ ಉಚಿತವಾಗಿ ನೀಡಲಾಗುವುದು.”
— ಚರಣ್ ರಾಜ್, ಡಿ.ಎಲ್.ಎಸ್ ಸೆಲ್ಸ್ ಹೆಡ್
ವಿಷಮುಕ್ತ ಕೃಷಿಗೆ ಕರೆ
ಮುಂದುವರಿದು ಮಾತನಾಡಿದ ವಿಜಯಕುಮಾರ್ ಕೆ. ಸಿ. ಅವರು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಕೃಷಿ ಭೂಮಿ ಹಾಳಾಗುತ್ತಿದ್ದು, ಅದನ್ನು ವಿಷಮುಕ್ತವನ್ನಾಗಿ ಮಾಡಲು ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಯೇ ಮುಖ್ಯ ದಾರಿಯಾಗಿದೆ. ಧನ್ವಂತರಿ ಲೋಕಸಿರಿ ಬಯೋಟೆಕ್ ಸಂಸ್ಥೆಯ ಸಾವಯವ ಔಷಧಗಳನ್ನು ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಗತಿಪರ ರೈತ ಚಿದಾನಂದ ದರೂರ ಮಾತನಾಡಿ, “ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಂತೆ ರೈತರು ದುಡಿಯಬೇಕು. ರಾಸಾಯನಿಕ ಬಳಕೆ ಕೈಬಿಟ್ಟು ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸಿ ಕುಟುಂಬದ ಆರೋಗ್ಯ ಕಾಪಾಡಬೇಕು. ಪ್ರತಿಯೊಬ್ಬರೂ ಹಸು, ಎಮ್ಮೆಗಳನ್ನು ಸಾಕಬೇಕು,” ಎಂದು ಕರೆ ನೀಡಿದರು. ಮತ್ತೊಬ್ಬ ಅತಿಥಿ ರೇಖಾ ಎಸ್. ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ತನ್ನ ಗುರಿ ಮುಟ್ಟಲು ಸಾಧ್ಯ ಎಂದರು.
ಗಣ್ಯರ ಉಪಸ್ಥಿತಿ
ಈ ಯಶಸ್ವಿ ಕಾರ್ಯಕ್ರಮವನ್ನು 7 ಸ್ಟಾರ್ ಅಥಣಿ ತಂಡದ ನಾಯಕರಾದ ಬಂದೆ ನವಾಜ್ ಗಡ್ಡೇಕರ ಹಾಗೂ ಆಶಿಪ್ ಮುಲ್ಲಾ ಅವರು ರೈತರಿಗಾಗಿ ಆಯೋಜಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ:
- ಮಹಾದೇವ ನಾಯಿಕ (ವೈದ್ಯರು, ಗುರುದೇವ ಆಯುರ್ವೇದ ಆಸ್ಪತ್ರೆ)
- ಪ್ರವೀಣ ನಾಯಿಕ (ಮುಖಂಡರು, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ)
- ನಿಂಗಪ್ಪಾ ಹಡಪದ, ಮಲ್ಲಪ್ಪಾ ಕೆಂಪವಾಡ, ಮುತ್ತಪ್ಪಾ ದನ್ಯಾಳ, ಬಸಪ್ಪಾ ದನ್ಯಾಳ, ಚನ್ನಪ್ಪಾ ಪಾಟೀಲ, ಸುರೇಶ ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಪ್ರವೀಣ ನಾಡಗೌಡ, ಈರಪ್ಪಾ ರೋಗಿ, ಸಿದ್ರಾಯ ಸಾತನವರ, ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಮಹೇಶ ಶರ್ಮಾ, ಶಿವಾನಂದ ನಾವಿ, ಸುರೇಖಾ ಜಾಧವ, ಸೃಷ್ಟಿ ನಾಯಿಕ, ಕವಿತಾ ಬೋಸಲೆ, ಬೌರವಾ ದನ್ಯಾಳ, ಶಂಕರ ಪಾಟೀಲ, ಅಸ್ಲಾಂ ಮುಲ್ಲಾ, ವಿಶ್ವನಾಥ ಭಂಡಾರೆ, ಆದಿತ್ಯ ನಾಯಿಕ, ಅಖಿಲೇಶ ನಾಯಿಕ, ಶರದ ಶೆಟ್ಟಿ, ಸಂತೋಷ ನಾಯಿಕ, ಸುರೇಶ ಮಡಿವಾಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಶಿವಲಿಲಾ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ಸಂಗೀತ ಸೇವೆ ನಡೆಸಿಕೊಟ್ಟರು. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಶಕ್ತಿದಳದ ಸಿಬ್ಬಂದಿಗಳಾದ ಅಶೋಕ ಬಡಿಗೇರ ಮತ್ತು ರಾಜು ಸಿಂಧೆ ಅವರು ಬುದ್ಧನ ಮೂರ್ತಿಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿ, ಕಾರ್ಯಕ್ರಮದ ಭದ್ರತಾ ಉಸ್ತುವಾರಿ ನಿರ್ವಹಿಸಿದರು.
ವರದಿ: ಮಹೇಶ್ ಶರ್ಮಾ,.

More Stories
ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಪರಿಸರ ದಿನಾಚರಣೆ; ಸಸಿ ನೆಟ್ಟು ಪರಿಸರ ರಕ್ಷಣೆಗೆ ಕರೆ
ಕೃಷ್ಣಾ ನದಿ ಬರಿದು: ಅಥಣಿ ತಾಲೂಕಿನಲ್ಲಿ ಜಲಕ್ಷಾಮದ ಭೀತಿ; ಮಹಾರಾಷ್ಟ್ರದಿಂದ ನೀರು ಬಿಡಿಸಲು ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಆಗ್ರಹ
ಅಥಣಿಯಲ್ಲಿ ‘ನಮ್ಮ ನಡೆ ಸರ್ಕಾರಿ ಶಾಲೆ ಕಡೆ’ ಅಭಿಯಾನ: ಶಿಕ್ಷಕರ ಕೊರತೆ ನೀಗಿಸಲು ಬಿಇಒ ಎಂ.ಆರ್. ಮುಂಜೆ ಅವರಿಗೆ ಮನವಿ