

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಪ್ರಮುಖ ಯೋಗ ಶಿಕ್ಷಕರಾದ ಎಸ್. ಕೆ. ಹೊಳೆಪ್ಪನವರ ಹಾಗೂ ಪ್ರೇಮಾ ಬುಟಾಳಿ ಅವರನ್ನು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ್ ನಾಯಕ್ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.


ಬಳಿಕ ಮಾತನಾಡಿದ ಪ್ರವೀಣ್ ನಾಯಕ್ ಅವರು, “ಮನುಷ್ಯನು ದೈಹಿಕವಾಗಿ, ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢನಾಗಿರಲು ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಯೋಗವು ಅತ್ಯಂತ ಪ್ರಮುಖವಾಗಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿರುವ ಇಬ್ಬರು ಯೋಗ ಶಿಕ್ಷಕರ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅನಿಲ್ ಭಾಮನೆ, ಶರಣಪ್ಪಾ ಶಿಂಧೆ, ಕಿರಣ್ ಪಾಟೋಳೆ, ಎಂ. ಶರ್ಮಾ, ಅಮೂಲ್ ಚವಾಣ್, ಶಿವಾನಂದ ನಾವಿ, ಅಶೋಕ್ ಬಡಿಗೇರ, ಪ್ರಶಾಂತ್ ಶಿಂದೆ, ಕವಿತಾ ಭೋಸಲೆ, ಶಾಂತಾ ಶಿಂಧೆ, ಸರಸ್ವತಿ ನೇಮಗೌಡ, ರೇಷ್ಮಾ ತೇಲಿ ಹಾಗೂ ಸಾವಿತ್ರಿ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ : ಮಹೇಶ ಶರ್ಮ

About The Author




More Stories
ಅಥಣಿಯ ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ: ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಶಾಲಾ ಮೇಲ್ದರ್ಜೆಗೆ ಸ್ಥಳೀಯರ ಉಗ್ರ ಆಗ್ರಹ.
ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ
ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ