ಭಟ್ಕಳ: DSERT ಬೆಂಗಳೂರು ಇವರು ರಾಜ್ಯಸ್ತರದ ಬಾಲ ವೈಜ್ಞಾನಿಕ ಪ್ರದರ್ಶಿನಿ (RSBVP) ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತೆಂಗಿನಗುಂಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದಿಶಾ ಸುಬ್ರಾಯ ದೇವಾಡಿಗ ಆಯ್ಕೆಯಾಗಿದ್ದಾಳೆ.
ದಿಶಾ ದೇವಾಡಿಗ ‘ಸುಸ್ಥಿರ ಕೃಷಿ’ ಎಂಬ ವಿಷಯದಡಿಯಲ್ಲಿ ತಮ್ಮ ಪ್ರದರ್ಶನ ಮಾದರಿಯನ್ನು ಸಿದ್ಧಪಡಿಸಿ ಮುಂದಿನ ಹಂತದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ. ಈ ಸಾಧನೆಗೆ ಶಾಲೆಯ ವಿಜ್ಞಾನ ಶಿಕ್ಷಕ ವಸಂತ್ ವಿ. ನಾಯ್ಕ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿನಿಯ ಈ ಸಾಧನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಕಾರವಾರ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕ ವೃಂದದವರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.
About The Author


More Stories
ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ₹1.30 ಕೋಟಿ ಲಾಭ: 60ನೇ ವಾರ್ಷಿಕ ಮಹಾಸಭೆ ಯಶಸ್ವಿ
ನ್ಯಾಯಬೆಲೆ ಅಂಗಡಿ ಮುಂದೆ ತಾಸುಗಟ್ಟಲೇ ಕಾಯುವ ಪಡಿತರದಾರರು: ಭಟ್ಕಳದಲ್ಲಿ ಸರ್ವರ್ ಸಮಸ್ಯೆಗೆ ಪರಿಹಾರ ಯಾವಾಗ?
ಟ್ಯಾಕ್ಸಿ ಸ್ಟ್ಯಾಂಡ್ಗೆ ಸೂಕ್ತ ಸ್ಥಳ ಕಲ್ಪಿಸಲು ಎಎಸ್ಪಿಗೆ ಭಟ್ಕಳ ಟ್ಯಾಕ್ಸಿ ಚಾಲಕರ ಸಂಘದಿಂದ ಮನವಿ