October 22, 2026

ಭಟ್ಕಳ: ರಾಷ್ಟ್ರಮಟ್ಟದ ರೋಬೋಥ್ರಾನ್ 2.0 ಸ್ಪರ್ಧೆಯಲ್ಲಿ ನ್ಯೂ ಇಂಗ್ಲಿಷ್ ಪಿ.ಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ

ಭಟ್ಕಳ: ಪಿಕ್ಸೆಲ್ ಟೆಕ್‌ಗೈಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆಯೋಜಿಸಿದ್ದ ‘ರೋಬೋಥ್ರಾನ್ 2.0’ ಎಂಬ ರಾಷ್ಟ್ರಮಟ್ಟದ ರೋಬೋಟ್ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ.ಯು ಕಾಲೇಜಿನ ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಉಪನ್ಯಾಸಕ ವಿಲಿಯಂ ಫರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ರೋಬೋಟ್ ಮಾದರಿಗೆ ವಿದ್ಯಾರ್ಥಿಗಳಾದ ವಿಕಾಸ ವಾಸು ಮೊಗೇರ ಮತ್ತು ಚರಣ ನಾಗಪ್ಪ ನಾಯ್ಕ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಹಾಗೆಯೇ, ಉಪನ್ಯಾಸಕ ಸಂಕೇತ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ರೋಬೋಟ್ ಮಾದರಿಗೆ ಕವನಾ ಶ್ರೀಧರ ನಾಯ್ಕ ಮತ್ತು ಕಿರ್ತನಾ ನಾಯ್ಕ ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಸುರೇಂದ್ರ ಶಾನಭಾಗ, ಪ್ರಾಂಶುಪಾಲರಾದ ಡಾ. ವೀರೇಂದ್ರ ವಿ. ಶಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About The Author

error: Content is protected !!