ಭಟ್ಕಳ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ‘ಸ್ವಚ್ಛತಾ ಪಾಕ್ಷಿಕ’ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು.
ಗೋವಾದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ದಿಲೀಪ್ ಡಿ. ಭಟ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಲ್ದಾಣದ ಸಿಬ್ಬಂದಿಗಳು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು.
ದಿಲೀಪ್ ಡಿ. ಭಟ್: “ರೈಲ್ವೆ ನಿಲ್ದಾಣದ ಆವರಣ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ನಿಲ್ದಾಣದ ಉತ್ತಮ ಹಾಗೂ ಆಹ್ಲಾದಕರ ವಾತಾವರಣವನ್ನು ಕಂಡು ಸಂತೋಷಪಡುವಂತಾಗಬೇಕು.”
ಕಾರ್ಯಕ್ರಮಕ್ಕೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ಅವರು ಅಗತ್ಯ ಸಹಕಾರ ನೀಡಿದರು.

ಸ್ವಚ್ಛತಾ ಜಾಗೃತಿಯ ಭಾಗವಾಗಿ ಪುಟಾಣಿ ಮಕ್ಕಳಿಂದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪರಿಸರ ನೈರ್ಮಲ್ಯ ಹಾಗೂ ಸ್ವಚ್ಛತೆಯ ಮಹತ್ವ ಸಾರುವ ಅರ್ಥಪೂರ್ಣ ಬೀದಿ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ರೈಲ್ವೆ ನಿಲ್ದಾಣದ ಸಿಬ್ಬಂದಿಗಳು, ಸ್ಥಳೀಯರು ಹಾಗೂ ಪ್ರಯಾಣಿಕರು ಭಾಗವಹಿಸಿದ್ದರು.
About The Author


More Stories
ಮುರಡೇಶ್ವರ ರೈಲು ನಿಲ್ದಾಣದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನ
ದಾಖಲೆಯ ₹11.10 ಲಕ್ಷಕ್ಕೆ ಗಣಪತಿಯ ಮುಡಿಗಂಧ ಪ್ರಸಾದ ಹರಾಜು
ಜನಸೇವೆಯ ಜನಾನುರಾಗಿ ವ್ಯಕ್ತಿ ಮುರುಡೇಶ್ವರದ ವೈದ್ಯ ಇನ್ನಂಜೆ ರಾಜಗೋಪಾಲ ಭಟ್ ನಮ್ಮೊಂದಿಗಿಲ್ಲ.