October 21, 2026

ಜಿಲ್ಲಾಮಟ್ಟದ ಕಬಡ್ಡಿ: ಅರೇಅಂಗಡಿ ಎಸ್.ಎಸ್.ಎಸ್.ಕೆ.ಪಿ. ಶಾಲೆಗೆ ರನ್ನರ್ ಅಪ್ — ವಿಭಾಗ ಮಟ್ಟಕ್ಕೆ 5 ವಿದ್ಯಾರ್ಥಿಗಳು ಆಯ್ಕೆ

ಹೊನ್ನಾವರ/ಅಂಕೋಲಾ: ಶೆಟ್ಟಗೇರಿಯ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯಲ್ಲಿ ಸೆಪ್ಟೆಂಬರ್ 29ರಂದು ನಡೆದ 14 ವರ್ಷದೊಳಗಿನ ಬಾಲಕರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಅರೇಅಂಗಡಿಯ ಎಸ್.ಎಸ್.ಎಸ್.ಕೆ.ಪಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ (ರನ್ನರ್ ಅಪ್) ಗಳಿಸಿ ರಜತ ಪದಕಕ್ಕೆ ಭಾಜನರಾಗಿದ್ದಾರೆ.

ತಂಡದ ತೀವ್ರ ಪೈಪೋಟಿಯ ಪ್ರದರ್ಶನದ ಫಲವಾಗಿ ಶಾಲೆಯ ಐವರು ಪ್ರಮುಖ ಆಟಗಾರರು ವಿಭಾಗೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:

  • ಮನೀಷ ಜಿ. ನಾಯ್ಕ
  • ಪ್ರತಾಪರಾಜ್ ಆರ್. ಎಚ್.
  • ಗಗನ್ ವಿ. ನಾಯ್ಕ
  • ವಿಜಯ್ ಜಿ. ಶೆಟ್ಟಿ
  • ಪ್ರಶಾಂತ್ ವಿ. ನಾಯ್ಕ

    ಸಾಧನೆಗೈದ ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶೈಕ್ಷಣಿಕ ಮಾರ್ಗದರ್ಶಕರು, ಮುಖ್ಯಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    About The Author

    error: Content is protected !!