October 23, 2026

ಸಮುದ್ರದ ಅಲೆಗಳ ರಭಸಕ್ಕೆ ಪಾತಿದೋಣಿ ಮುಗುಚಿ ಮೀನುಗಾರಿಕೆಗೆ ತೆರಳಿದ್ದ ಯುವಕ ಸಾವು

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ 18 ವರ್ಷದ ಯುವಕನೊಬ್ಬ ಸಮುದ್ರದ ಅಲೆಗಳ ಭೀಕರ ರಭಸಕ್ಕೆ ಸಿಲುಕಿ, ಪಾತಿದೋಣಿ ಮುಗುಚಿ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೈಲೂರು ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಬೈಲೂರು ಹರಿಕಂತ್ರಕೇರಿ ನಿವಾಸಿ ಹಾಗೂ ವಿದ್ಯಾರ್ಥಿಯಾಗಿರುವ ನವೀನ್ ಗಣಪತಿ ಹರಿಕಾಂತ (18) ಮೃತಪಟ್ಟ ದುರ್ದೈವಿ.

ನವೀನ್ ಅವರು ತಮ್ಮ ಸ್ನೇಹಿತರೊಂದಿಗೆ ಬೆಳಗಿನ ಜಾವ ಸುಮಾರು 5 ಗಂಟೆಯ ವೇಳೆಗೆ ‘ಶ್ರೀ ಅರಮದೇವಿ’ ಹೆಸರಿನ ಪಾತಿದೋಣಿಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಬೆಳಿಗ್ಗೆ 5 ರಿಂದ 5.30 ರ ನಡುವಿನ ಅವಧಿಯಲ್ಲಿ ಹಠಾತ್ ಅಲೆಗಳ ರಭಸ ಹೆಚ್ಚಾಗಿ ದೋಣಿ ಮುಗುಚಿದೆ. ಪರಿಣಾಮ ನವೀನ್ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಮೃತನ ತಂದೆ ಗಣಪತಿ ನಾರಾಯಣ ಹರಿಕಾಂತ (60) ನೀಡಿದ ದೂರಿನ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಲೋಕನಾಥ ರಾಠೋಡ ಅವರು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!