October 21, 2026

ಭಟ್ಕಳದಲ್ಲಿ ಮದ್ಯದ ಅಮಲಿನಲ್ಲಿ ರಂಪಾಟ: ಬಿಯರ್ ಬಾಟಲಿಯಿಂದ ಹಲ್ಲೆ, ಮೂವರಿಗೆ ಗಾಯ

ಭಟ್ಕಳ: ಮದ್ಯಪಾನ ಮಾಡುವಾಗ ನಡೆದ ಗಲಾಟೆಯನ್ನು ಬಿಡಿಸಲು ಮುಂದಾದವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹೆಬಳೆ ಗಾಂಧಿನಗರದಲ್ಲಿ ಜರುಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಂಧಿನಗರ ನಿವಾಸಿ ಧರ್ಮವಿಜಯ ಮೊಗೇರ (24) ನೀಡಿದ ದೂರಿನ ಪ್ರಕಾರ, ಮದ್ಯಪಾನದ ವೇಳೆ ಉಂಟಾದ ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದಾಗ ಆರೋಪಿಗಳಾದ ಹುಸೇನ್ ಸೈಯ್ಯದ್, ಮೂಸಾ ಸೈಯ್ಯದ್ ಹಾಗೂ ಅಫ್ಸರ್ ಅಲಿ ಅಲಿಯಾಸ್ ಬಂಟ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಳಿ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

ವರದಿ: ಭಾವನಾ ಟಿವಿ ಡೆಸ್ಕ್

About The Author

error: Content is protected !!