ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ‘ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್’ನಲ್ಲಿ ಸೋಮವಾರಪೇಟೆಯ ಇಬ್ಬರು ಸಹೋದರರು ಬೆಳ್ಳಿ ಪದಕ ಗೆದ್ದು ಹೆಮ್ಮೆ ತಂದಿದ್ದಾರೆ.
ಇಲ್ಲಿನ ಪಿ.ಎಂ.ಶ್ರೀ ವಿ.ಎಂ.ಪಿ. ಶಾಲೆಯಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಅದೇ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ರಿತನ್ ಡಿ.ಎಸ್. ಹಾಗೂ ೩ನೇ ತರಗತಿ ವಿದ್ಯಾರ್ಥಿ ರಿಷಿ ಡಿ.ಎಸ್. ಅದ್ಭುತ ಪ್ರದರ್ಶನ ನೀಡಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳ ಪೈಕಿ ರಿತನ್ ಡಿ.ಎಸ್. ಇತ್ತೀಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದ್ದ ೩ನೇ ಅಂತರರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕೊಡಗು ಜಿಲ್ಲೆಯಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದರು.
ಸಾಧನೆಗೈದ ಈ ಇಬ್ಬರು ಬಾಲಕರು ಸೋಮವಾರಪೇಟೆಯ ಎಡವನಾಡು ಗ್ರಾಮದ ಆಶಾ ಹಾಗೂ ಚೇತನ್ ದಂಪತಿಯ ಪುತ್ರರಾಗಿದ್ದು, ಇವರ ಈ ಕ್ರೀಡಾ ಸಾಧನೆಗೆ ಸಾರ್ವಜನಿಕ ವಲಯ ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಶ್ಲಾಘನೆ ವ್ಯಕ್ತವಾಗಿದೆ. (ವರದಿ: ಪ್ರಿತುನ್ ಪೂವಣ್ಣ)

About The Author


More Stories
ನವೀಕೃತ ಪಿಎಲ್ಡಿ ಬ್ಯಾಂಕ್ ಕಚೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟನೆ