November 19, 2025

ವಿಜೇತ ವಸತಿಯುತ ವಿಶೇಷ ಶಾಲೆಯ ಮಕ್ಕಳಿಂದ ದೀಪಾವಳಿ ಹಣತೆ

ಕಾರ್ಕಳ: ವಿಜೇತ ವಸತಿಯುತ ವಿಶೇಷ ಶಾಲೆ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ರಿ. ಕಾರ್ಕಳ ಅಯ್ಯಪ್ಪನಗರದಲ್ಲಿ ನಡೆಯುತ್ತಿರುವ ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸುಮಾರು 140 ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದು ಇದರಲ್ಲಿ ಸುಮಾರು 40 ಮಕ್ಕಳು ಅನಾಥ ವಿಶೇಷ ಚೇತನ ಮಕ್ಕಳು ಕೂಡ ಇದ್ದಾರೆ. 35 ಮಂದಿ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದು ವಿಶೇಷ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಈ ಸಂಸ್ಥೆಯು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.

25 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೃತ್ತಿ ತರಬೇತಿ ನೀಡುವ ಮೂಲಕ , ಮಕ್ಕಳು ಸ್ವತಂತ್ರವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಈ ಕರಕುಶಲ ವಸ್ತುಗಳ ತಯಾರಿಕ ತರಬೇತಿಯನ್ನು ನೀಡಲಾಗುತ್ತಿದೆ. ಈ ವರ್ಷ ದಶಮಾನೋತ್ಸವದ ಹೊಸ್ತಿಲಲ್ಲಿದ್ದು ವಿಜೇತ ವಿಶೇಷ ಶಾಲಾ ದೇವರ ಮಕ್ಕಳು ತಯಾರಿಸಿದ ದೀಪಾವಳಿ ಹಣತೆಗಳನ್ನು ಖರೀದಿಸಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಲಾಗಿದೆ.
ಸAಪರ್ಕ ಸಂಖ್ಯೆ. 9449 711 678. 88614 38100

About The Author

error: Content is protected !!