

ಭಾವನಾ ಸುದ್ದಿ ಬೈಂದೂರು : ಗೌಡ ಸಾರಸ್ವತ ಸಮಾಜ ಬಾಂಧವರು ಆರಾಧಿಸಿಕೊಂಡು ಬರುತ್ತಿರುವ ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ದ ಸುತ್ತುಪೌಳಿ ನವೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ದೇವಳದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸುತ್ತುಪೌಳಿ ನವೀಕರಣ ಕಾಮಗಾರಿಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಗಣಪತಿ ಭಟ್ ರವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಗಣೇಶ ಪ್ರಭು, ಉಪಾಧ್ಯಕ್ಷ ರವಿಕಾಂತ ಶ್ಯಾನುಭಾಗ, ಕಾರ್ಯದರ್ಶಿ ನಾಗರಾಜ ವೆಂಕಟದಾಸ ಪ್ರಭು, ಕೋಶಾಧಿಕಾರಿ ನಾಗರಾಜ ರತ್ನಾಕರ ಪ್ರಭು, ಮಹಿಳಾ ಮಂಡಳಿ ಅಧ್ಯಕ್ಷೆ ಮೇಘಾ ಪೈ, ಕಾರ್ಯದರ್ಶಿ ಅಶ್ವಿನಿ ಕಾಮತ್, ಹಿರಿಯರಾದ ಬಾಬುರಾಯ ಕಾಮತ್, ಪ್ರಕಾಶ ಪ್ರಭು, ವೆಂಕಟೇಶ ಪ್ರಭು,ಚಂದ್ರಕಾAತ ನಾಯಕ್ ಜಿ.ಎಸ್.ಬಿ.ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author




More Stories
ಬೈಂದೂರಿನಲ್ಲಿ ವಿಜೃಂಭಣೆಯ ಸಿದ್ಧ ಸಮಾಧಿ ಯೋಗ ಗುರುಪೂರ್ಣಿಮೆ ಮಹೋತ್ಸವ
ಮೂಡಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನಕ್ಕೆ ತ್ರಿಶೂಲ ಹಾಗೂ ಡಮರುಗ ಸಮರ್ಪಣೆ
ಖ್ಯಾತ ನಿರೂಪಕ ಕಿರಣ್ ಬಿಜೂರು ಇವರಿಗೆ ಯುವ ನಿರೂಪಕ ರತ್ನ ಪ್ರಶಸ್ತಿ