December 23, 2025

ಶಿಸ್ತು ಮತ್ತು ಸಂಯಮದ ಪಾಠ ಏನ್ ಎಸ್ ಎಸ್ ನಿಂದ ಸಾಧ್ಯ — ಎಂವಿ ಹೆಗಡೆ

ಭಟ್ಕಳ : ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಎನ್‌ಎಸ್‌ಎಸ್ ಕೋಶ ಧಾರವಾಡ ಇವರ ಆಶ್ರಯದಲ್ಲಿ ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ ಶಿರಾಲಿಯಲ್ಲಿ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ನ ನಿರ್ದೇಶಕರಾದ ಪ್ರೊ. ಎಂವಿ ಹೆಗಡೆ ಮಾತನಾಡಿ ಎನ್ ಎಸ್ ಎಸ್ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಶ್ರಮಕ್ಕೆ ಹಾಗೂ ಶಿಸ್ತಿನ ಪಾಠವನ್ನು ಕಲಿಯಲು ಪೂರಕ ಸಾಧನ ಎಂದರು,

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶೈಲೇಶ್ ಬಳ್ಳಾರೆ, ಉಪಪ್ರಧಾನ ವ್ಯವಸ್ಥಾಪಕರು ಶ್ರೀ ಚಿತ್ರಾಪುರ ಮಠ ಇವರು ಮಾತನಾಡಿ ಎನ್ ಎಸ್ ಎಸ್ ಶಿಬಿರವು ವಿದ್ಯಾರ್ಥಿ ಪಾಲಿಗೆ ಒಂದು ವರದಾನ ವಿದ್ಯಾರ್ಥಿಗಳು ಇಂತಹ ಕ್ಯಾಂಪಿನ ಮೂಲಕ ಸಮಾಜ ಸೇವೆ ಮಾಡುವಲ್ಲಿ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀವಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವೀಂದ್ರ ಕೈಕಿಣಿಯವರು ಮಾತನಾಡಿ ಎನ್‌ಎಸ್‌ಎಸ್ ಕುರಿತಾದ ಪೂರ್ಣ ಮಾಹಿತಿಯನ್ನು ಎನ್‌ಎಸ್‌ಎಸ್ ಚರಿತ್ರೆಯನ್ನ ವಿದ್ಯಾರ್ಥಿಗಳಿಗೆ ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ. ಶಾಂತಶ್ರೀ ಹರಿದಾಸರವರು ಮಾತನಾಡಿ ಪ್ರತಿಯೊಬ್ಬರು ಸೇವೆಯ ಮನೋಭಾವವನ್ನ ಹೊಂದಿ ಸಮಾಜಕ್ಕೆ ತಾವು ತೊಡಗಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ವಿಕಸನಗೊಳಿಸಿ ಕೊಳ್ಳಬೇಕೆಂದರು ವೇದಿಕೆಯಲ್ಲಿ ಶ್ರೀವಲಿ ಪ್ರೌಢಶಾಲೆಯ ಮುಖ್ಯೋಧ್ಯಾಪಕರಾದ ಮಮತಾ ಭಟ್ಕಳ ವಿದ್ಯಾರ್ಥಿಗಳಿಗೆ ಹಿತನುಡಿಯಾಡಿದರು,ಕಾರ್ಯಕ್ರಮ ಅಧಿಕಾರಿಗಳಾದ ಗಣಪತಿ ಕಾಯ್ಕಿಣಿ ಪ್ರಾಸ್ತಾವಿಕ ನುಡಿಯಾಡಿದರು, ವೇದಿಕೆಯಲ್ಲಿ ಉಪನ್ಯಾಸಕರಾದ ಮಮತಾ ಮರಾಠಿ, ಹಾಗೂ ಉಪನ್ಯಾಸರು ವಿದ್ಯಾರ್ಥಿ ಸ್ವಯಂಸೇವಕರು ವೃಂದದವರು ಹಾಜರಿದ್ದರು

About The Author

error: Content is protected !!