ಭಟ್ಕಳ :ಮಾನಸಿಕ ಬೌಧಿಕ ಆರೋಗ್ಯಕ್ಕೆ ಯೋಗ ಒಂದು ಉತ್ತಮ ಆಯ್ಕೆ. ಯೋಗದಿಂದ ರೋಗ ಮುಕ್ತಿ. ಎಂದು ಉತ್ತರಕೊಪ್ಪ ವನವಾಸಿ ಕಲ್ಯಾಣ ಕೇಂದ್ರದ ನಿರ್ವಾಹಕರಾದ ರಾಮಚಂದ್ರ ರವರು ನುಡಿದರು. ಅವರು ವನವಾಸಿ ಕಲ್ಯಾಣ ಕೇಂದ್ರದಲ್ಲಿ ಭಟ್ಕಳದ ಯೋಗ ಗುರುಜೀ ಶ್ರೀ ಗೋವಿಂದ ಗುರುಜಿಯವರ ನೇತೃತ್ವದಲ್ಲಿ ನಡೆದ ಒಂದು ದಿನದ ಉಚಿತ ಕಾಯಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರವೂ ಅತಿ ಮುಖ್ಯ. ಕ್ರಮಬದ್ದವಾದ ಹಾಗೂ ಹಿತ ಮಿತವಾದ ಆಹಾರ ಪದ್ದತಿಯೊಂದಿಗೆ ಯೋಗವನ್ನು ಅಳವಡಿಸಿಕೊಂಡರೇ ಜೀವನದಲ್ಲಿ ಅತ್ಯಂತ ಮಹತ್ವದ ಭಾಗ್ಯವಾದ ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳಬಹುದು. ದಿನದಲ್ಲಿ ಮೂರು ಹೊತ್ತು ಮಾಡುವ ಊಟವೂ ಕ್ರಮಬದ್ದ ವಾಗಿದ್ದರೇ ಮುಕ್ಕಾಲು ಪಾಲು ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು. ಬೆಳಿಗ್ಗೆ ಮಿತ ಆಹಾರವಾಗಿ ಉಪಹಾರವನ್ನು ಸೇವಿಸುವುದು, ದಿನವಹಿ ಕಾರ್ಯ ನಿರ್ವಹಿಸಲು ದೇಹಕ್ಕೆ ಶಕ್ತಿಯ ಅಗತ್ಯಕ್ಕೆ ಮಧ್ಯಾಹ್ನ ಪುಷ್ಕಳ ಆಹಾರ ಸೇವಿಸುವುದು, ಹಾಗೂ ರಾತ್ರಿ ಮಿತ ಭೋಜನ ಮಾಡಿದರೇ ಆರೋಗ್ಯಕ್ಕೆ ಕುಂದು ಬಾರದು. ಬಾಯಿ ಚಾಪಲ್ಯಕ್ಕೆ ಆಹಾರ ಮಿತಿ ತಪ್ಪಿದರೇ ಖಾಯಿಲೆಗಳು ಖಂಡಿತ. ಉತ್ತಮ ಆಹಾರ ಪದ್ದತಿಯೊಂದಿಗೆ ಯೋಗವನ್ನು ಅಳವಡಿಸಿಕೊಂಡರೇ ದೈಹಿಕ ಹಾಗೂ ಮಾನಸಿಕ ನೆಮ್ಮದಿಯೊಂದಿಗೆ ಆರೋಗ್ಯ ಪರಿಪೂರ್ಣವಾಗಿ ದೊರೆಯುವುದು. ಇಂತಹ ಕಾರ್ಯಕ್ರಮಗಳು ಬೌದ್ದಿಕ ಹಾಗೂ ಮಾನಸಿಕ ವಿಕಸನದೊಂದಿಗೆ ಸಾಮಾಜಿಕ ಸಂಬಂಧಗಳು ವೃದ್ದಿಸುವುದು. ಹಾಗೂ ನಾವು ನಮ್ಮ ಸುತ್ತಮುತ್ತಲ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇವೆ. ನಾವಷ್ಟೇ ಸುಖಿಗಳಾಗಿ ಬದುಕುವುದು ಬದುಕಲ್ಲ. ನಮ್ಮ ಸುತ್ತಮುತ್ತಲ ಪರಿಸರವು ಸುಖವಾಗಿಸುವುದೇ ಮಾನವ ಜನ್ಮದ ಕೃತಾರ್ತತೆ ಎಂದರು.
ವನವಾಸಿ ಕಲ್ಯಾಣ ಕೇಂದ್ರದ ವಾರ್ಷಿಕ ಸಮಾರಂಭವೂ ಆಗಿರುವುದರಿಂದ ಯೋಗಾಶಕ್ತರೊಂದಿಗೆ ಸಮಾರೋಮ ಕಾರ್ಯಕ್ರಮ ಜರುಗಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘ ಪ್ರಚಾರಕ ಪ್ರತಾಪ ಪೂನೆ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ, ಬಿಡುವಿಲ್ಲದ ಜೀವನದಲ್ಲಿ ನಮ್ಮ ಬದುಕಿಗಾಗಿ ದುಡಿಯುತ್ತ ತಮ್ಮ ಸುಖಕ್ಕಾಗಿ ಸಂಪತ್ತು ಕೂಡಿ ಹಾಕುವುದರಲ್ಲಿ ಯಾವ ಸಾರ್ಥಕತೆ ಇದೆ. ನಮ್ಮ ಬದುಕಿನೊಂದಿಗೆ ನಮ್ಮ ಸುತ್ತಲಿನ ಸಮಾಜದ ಸ್ವಾಶ್ತ್ಯದೆಡೆಗೂ ಗಮನವನ್ನು ಕೊಡಬೇಕು. ನಮ್ಮ ಬಿಡುವಿಲ್ಲದ ಬದುಕಿನಲ್ಲೂ ನಮ್ಮ ಸುತ್ತಲಿನ ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ಅವರ ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಸಮಾಜ ಸೇವೆಯ ಮಹತ್ವದ ಕುರಿತು ಸಂಸ್ಕಾರವನ್ನು ತುಂಬಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವನವಾಸಿ ಕಲ್ಯಾಣ ಕೇಂದ್ರದ ಸಮಾಜ ಸೇವಾ ವಿಭಾಗದ ಅಧ್ಯಕ್ಷ ಮಾಸ್ತಿ ಗೊಂಡ ಮಾತನಾಡುತ್ತ ವನವಾಸಿ ಕಲ್ಯಾಣ ಕೇಂದ್ರದ ಕಾರ್ಯಚಟುವಟಿಕೆಯಿಂದ ಕುಗ್ರಾಮ ಉತ್ತರಕೊಪ್ಪ ಗ್ರಾಮದಲ್ಲಿ ಆದ ಬದಲಾವಣೆ ಕುರಿತು ವಿವರಿಸಿದರು.
ಶ್ರೀ ಗೋವಿಂದ ಗುರುಜಿ ಮಾತನಾಡುತ್ತ ಕಾಯಕಲ್ಪ ಶಿಬಿರದಿಂದ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಎಂಬ ಮಹತ್ವವನ್ನು ಅರಿತು ಕೊಂಡಿದ್ದೀರಿ. ಪ್ರತಿ ದಿನದ ಜಂಜಾಟದಿಂದ ದೂರವಿದ್ದು ಮಾನಸಿಕ ಒತ್ತಡದಿಂದ ದೂರವಾಗಿ ನೆಮ್ಮದಿಯಿಂದ ಹೇಗೆ ಬದುಕಬಹುದು, ಸಾಮಾನ್ಯ ಬದುಕಿನಲ್ಲಿ ಅನಾರೋಗ್ಯಕರ ಆಹಾರದ ನಿರಿಕ್ಷೆಯಲ್ಲಿರುವ ದೇಹ ರುಚಿಯಿಲ್ಲದ ಆಹಾರದಿಂದಲೂ ನಿಯಂತ್ರಿಸುವ ಪಾಠವನ್ನು ಕಲಿತಿದ್ದೀರಿ. ಕಲುಷಿತ ಆಹಾರದಿಂದ ಮಲಿನಗೊಂಡ ದೆಹದ ಅಂಗಾಂಗವನ್ನುಶುದ್ದೀಕರಿಸಿಕೊಂಡಿದ್ದು, ಜೀವನದ ಉತ್ಸಾಹವನ್ನು ಮರಳಿ ಪಡೆದಿದ್ದೀರಿ. ಈ ಆರೋಗ್ಯವನ್ನು ನಿರಂತರ ಕಾಪಾಡಿಕೊಳ್ಳಲು, ನಿಯಮಿತ ಯೋಗ, ಧ್ಯಾನ, ಹಾಗೂ ಪ್ರಾಣಾಯಾಮವನ್ನು ನಡೆಸುವಂತೆ ಮನವಿ ಮಾಡಿದರು. ಶಿಬಿರದಲ್ಲಿ ತಾಲ್ಲೂಕಿನ ವಿವಿಧ ಭಾಗದಲ್ಲಿ ನಡೆಯುವ ಯೋಗ ಕೇಂದ್ರದಿಂದ ಆಶಕ್ತ ನೂರಕ್ಕು ಅಧಿಕ ಯೋಗಾಶಕ್ತರು ಕಾಯಕಲ್ಪ ಶಿಭಿರದಲ್ಲಿ ಪಾಲ್ಗೊಂಡು ಹಲವರು ತಮ್ಮಅಭಿಪ್ರಾಯ,ಅನುಭವಗಳನ್ನು ಹಂಚಿಕೊಂಡರು.
ಆರಂಭದಲ್ಲಿ ಶ್ರೀ ನಾಗಮಾಸ್ತಿ ಯೋಗ ಕೇಂದ್ರದ ಪ್ರಮುಖರಾದ ಸತೀಶಕುಮಾರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ