ಹೋನ್ನಾವರ:ಸುದ್ಧಿ:ಜೀವವೈವಿಧ್ಯತೆಗಳ ಮತ್ತು ಜಿಲ್ಲೆಯ ಜನಜೀವನದ ಹಿತದ್ರಷ್ಟಿಯಿಂದ ರಾಜ್ಯ ವಿದ್ಯುತ ನಿಗಮದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ ಭೂಗತ ಜಲ ವಿದ್ಯುತ ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಶರಾವತಿ ನದಿಕಣಿವೆ ಉಳಿಸಿ ಹೋರಾಟ ಓಕ್ಕೂಟಗಳ ಜಂಟಿ ನಿಯೋಗವು ಚಂದ್ರಕಾಂತ ಕೊಚರೇಕರ ಮತ್ತು ಅಖಿಲೇಶ ಚಿಪಳಿ ನೇತೃತ್ವದಲ್ಲಿ ಶನಿವಾರ ಕೇಂದ್ರ ವನ್ಯ ಜೀವಿ ಮಂಡಳಿಯ ಎಚ್.ಎಸ್.ಸಿಂಹ, ರಾಮನ್ ಸುಕುಮಾರನ್,ಎಟಿಸಿ. ಶಿವಕುಮಾರ್ ತ್ರೀಸದಸ್ಯರ ಸಮಿತಿಯ ನ್ನು ಭೇಟಿಮಾಡಿ,ತನ್ನ ಅಹವಾಲು ಸಲ್ಲಿಸಿದೆ.
ಈ ಸಂದರ್ಭದಲ್ಲಿ ಲಿಖಿತ ಮನವಿ ಸಲ್ಲಿಸಿದ ನಿಯೋಗವು,ಪರಿಸರ ಸೂಕ್ಷ್ಮ ಪಶ್ಚಿಮಘಟ್ಟದ ಸಿಂಗಳಿಕ ಅಭಯಾರಣ್ಯದಲ್ಲಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಮನವಿಮಾಡಿದರು. ಯೋಜನೆಯ ಅನುಷ್ಠಾನದಿಂದ ಪರಿಸರಕ್ಕೆ, ಜೀವ ವೈವಿಧ್ಯತೆಗಳಿಗೆ ಮತ್ತು ಜನಜೀವನದ ಮೇಲೆ ಆಗಬಹುದಾದ ವಿವಿಧ ದುಷ್ಪರಿಣಾಮಗಳ ಕುರಿತು ಅವರು ಕೇಂದ್ರ ಅಧ್ಯಯನ ತಂಡದ ಗಮನ ಸೆಳೆದರು.
ಒಕ್ಕೂಟಗಳ ಪರ ಹಾಜರಾದ ಖ್ಯಾತ ಪರಿಸರ ತಜ್ಞೆ,ವಕೀಲೆ ನಿರ್ಮಲಾ ಗೌಡ ಅವರು ತಮ್ಮ ವಾದವನ್ನು ಮಂಡಿಸಿ ಯೋಜನೆಯ ಅನುಷ್ಠಾನದ ವಿರುದ್ಧ ಹಲವು ಕಾನೂನಾತ್ಮಕ ಅಂಶಗಳನ್ನು ಪ್ರಸ್ತುತ ಪಡಿಸಿದರು. ಯೋಜನೆಯ ಅನುಷ್ಠಾನದಿಂದ ಜೀವ ವೈವಿಧ್ಯಗಳಿಗೆ ಆಗಬಹುದಾದ ಹಾನಿ ಭೂಕುಸಿತ ಸಹಿತ ವಿವಿಧ ಪಾರಿಸಾರಿಕ ಹಾನಿಗಳ ಕುರಿತು ಮತ್ತು ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಪ್ರಸ್ತುತ ಉಂಟಾಗಿರುವ ಕೊರತೆ ಸಹಿತ ಮುಂದೆ ಎದುರಾಗುವ ಅನೇಕ ಸಮಸ್ಯೆಗಳ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮನಮುಟ್ಟುವಂತೆ ವಿವರಿಸಿದರು.
ಉತ್ತರ ಕನ್ನಡ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ ಮಾತನಾಡಿ ಶರಾವತಿ ನದಿಪಾತ್ರದ ಹೊನ್ನಾವರ ತಾಲೂಕಿನ 11ಏತ ನೀರಾವರಿ ಯೋಜನೆಗಳ ಮೂಲಕ ಅಲ್ಲಿನ ಲಕ್ಷಾಂತರ ಎಕರೆ ಕ್ರಷಿ ಭೂಮಿಗೆ ನೀರುಣಿಸಲಾಗುತ್ತಿದೆ. ಇಡಗುಂಜಿ,ಮುರ್ಡೇಶ್ವರ ಯಾತ್ರಾ ಸ್ಥಳವೂ ಸೇರಿದಂತೆ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಗಳ ಲಕ್ಷಾಂತರ ಜನರು ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ಕುರಿತು ಮತ್ತು ಬೇಸಿಗೆಯಲ್ಲಿ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಕೊರತೆ ಆಗುತ್ತಿರುವದನ್ನು ವಿವರಿಸಿ ಸಮುದ್ರದ ಉಪ್ಪು ನೀರು18ಕೀ.ಮೀ. ವ್ಯಾಪ್ತಿಯಲ್ಲಿ ನದಿ ಸೇರುತ್ತಿರುವ ವಿಚಾರವನ್ನು ಗಮನಸೆಳೆದು ಉದ್ದೇಶಿತ ಯೋಜನೆ ಅನುಷ್ಠಾನವಾದರೆ ಅಮೂಲ್ಯ ಮಳೆಕಾಡು ನಾಶವಾಗಲಿದ್ದು, ಸಮುದ್ರದ ಉಪ್ಪುನೀರು ಗೇರುಸೊಪ್ಪೆ ತನಕ ಸೇರುವ ಅಪಾಯ ಇದೆ ಎಂದರು.
ಶಿವಮೊಗ್ಗ ಒಕ್ಕೂಟದ ಅಖಿಲೇಶ ಚಿಪಳಿ,ಪರಿಸರ ತಜ್ಞ ಸವಿನಯ ಮಾಲ್ಪೆ,ತಾಂತ್ರಿಕ ತಜ್ಞ ಶಂಕರ ಶರ್ಮ,ಮಾಜಿ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶಿಸರ, ಡಾ.ವಿನಾಯಕ ಮುಂತಾದವರು ಯೋಜನೆಯ ಅನುಷ್ಠಾನದಿಂದ ಆಗಬಹುದಾದ ಪಾರಿಸಾರಿಕ ಬಿಕ್ಕಟ್ಟು ಗಳನ್ನು ವಿವರಿಸಿದರು. ವನ್ಯ ಜೀವಿ ಮಂಡಳಿ ಸ್ಥಳ ತನಿಖೆಯಿಂದ ಅನುಮತಿ ನಿರಾಕರಿಸಲು ಕ್ರಮ ವಹಿಸಬೇಕೆನ್ನುವ ಮನವಿಮಾಡಿದರು.
ಬಂಗಾರುಮಕ್ಕಿ ಕ್ಷೇತ್ರದ ಅಜಿತಕುಮಾರ ಹೆಗಡೆ ,ಡಾ.ಗಿರೀಶ ಜನ್ನೆ,ಡಾ.ಶ್ರೀಪತಿ,ಕುಮಾರ ಸ್ವಾಮೀ ತಮ್ಮ ಲಿಖಿತ ಅಹವಾಲುಗಳನ್ನು ಸಲ್ಲಿಸಿದರುಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರ, ಕೆನರಾ ಸಿ.ಸಿ.ಎಫ್.ಹೊನ್ನಾವರ ಡಿ.ಎಫ್.ಓ.ಯೋಗೀಶ್ ಟಿ. ಮತ್ತು ವಿವಿದ ಅರಣ್ಯ ಅಧಿಕಾರಿಗಳು,ವಿದ್ಯುತ ನಿಗಮದ ವಿಜಯಕುಮಾರ್,ಹಾಗೂ ಇತರ ಅಧಿಕಾರಿಗಳು ಇದ್ದರು.
ಕೇಂದ್ರ ವನ್ಯ ಜೀವಿ ಮಂಡಳಿಯ ಸ್ಟ್ಯಾಂಡಿಗ್ ಕಮಿಟಿಯ ತ್ರೀಸದಸ್ಯರ ತಂಡವು ಶನಿವಾರದಿಂದ ಶರಾವತಿ ಸಿಂಗಳಿಕ ಅಭಯಾರಣ್ಯ ಪ್ರದೇಶವೂ ಸೇರಿದಂತೆ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಯೋಜನಾ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು ಕೆ.ಪಿ.ಸಿ.ಯ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯ ಪ್ರಸ್ತಾವನೆಗೆ ಅನುಮತಿ ನೀಡಬೇಕೇ ಅಥವಾ ಬೇಡವೆ ಎನ್ನುವ ಕುರಿತು ಸ್ಥಳ ತನಿಖೆಯಿಂದ ಪರಿಶೀಲಿಸಿ ಕೇಂದ್ರ ವನ್ಯ ಜೀವಿ ಮಂಡಳಿಗೆ ತ್ರೀಸದಸ್ಯರ ಸಮಿತಿ ತನ್ನ ವರದಿಯನ್ನು ಸಲ್ಲಿಸಲಿದೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ