ಕುಮಟಾ : ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆಯ ಸಾಧನೆಯೊಂದಿಗೆ ಕುಮಟಾ ತಾಲೂಕಿನಲ್ಲಿ ಡಿಜೆವಿಎಸ್ ಪ್ರೌಢಶಾಲೆ ದೀವಗಿ ಅತ್ಯುನ್ನತ ಸ್ಥಾನದಲ್ಲಿದೆ. ಈ ಶಾಲೆಯ ಶಿಕ್ಷಕರ ಅವಿರತ ಪರಿಶ್ರಮ ಆಡಳಿತ ಮಂಡಳಿಯ ಸಹಕಾರ ಪಾಲಕರ ಹಾಗೂ ಊರ ನಾಗರೀಕರ ಸಹಕಾರ ಇದಕ್ಕೆ ಮೂಲ ಕಾರಣವೆಂದು ಶಾಸಕ ದಿನಕರ ಕೆ.ಶೆಟ್ಟಿ ವಾರ್ಷಿಕ ಸ್ನೇಹ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು
ಶಾಲೆಯ ಗತ ಇತಿಹಾಸದ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾ ಅವರು ನಾರಾಯಣ ವಿ.ಶೆಟ್ಟಿ ಇವರ ಉದ್ದೇಶ ಶೈಕ್ಷಣಿಕ ಸಂಸ್ಥೆಯ ಸ್ಥಾಪನೆ ಹಾಗೂ ಈ ಶಾಲೆಯ ಶೈಕ್ಷಣಿಕ ಇಂದಿನವರೆಗಿನ ಪ್ರಗತಿಯ ಕುರಿತು ಮಾತನಾಡುತ್ತಾ ಇಂದು ಈ ಭಾಗದಲ್ಲಿ ದೊಡ್ಮನೆ ಜಾನಕಿ ವಿ ಶೆಟ್ಟಿ ಪ್ರೌಢಶಾಲೆ ಈ ಭಾಗದ ಜನತೆಗೆ ಅನಿವಾರ್ಯ ಹಾಗೂ ಅಗತ್ಯ ಎಂದರಲ್ಲದೆ ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ಸಾಧನೆಯನ್ನು ಮಾಡಿದ್ದಾರೆ. ಆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರಲ್ಲದೇ ಈ ಶಾಲೆಯನ್ನು ಇನ್ನಷ್ಟು ಭೌತಿಕವಾಗಿ ಎತ್ತರಕ್ಕೆ ಕೊಂಡೊಯ್ಯುವ ದಿಶೆಯಲ್ಲಿ ಇಂದಿನ ಮುಖ್ಯಾಧ್ಯಾಪಕರಾದ ಭಾಸ್ಕರ್ ಜಿ. ಭಟ್ ಇವರು ನೂತನ ಕಟ್ಟಡವನ್ನು ಕಟ್ಟುವ ದಿಶೆಯಲ್ಲಿ ಸಾಹಸ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾರ್ವತ್ರಿಕವಾದ ಅಭೂತಪೂರ್ವ ಬೆಂಬಲವನ್ನು ನೋಡಿ ನನಗೆ ಸಂತೋಷವಾಗಿದೆ. ಈ ಸಂಸ್ಥೆಯ ಅಧ್ಯಕ್ಷನಾಗಿ ಶಾಸಕನಾಗಿ ಅವರ ಇಚ್ಛಾಶಕ್ತಿಯನ್ನು ಈಡೇರಿಸುವದಕ್ಕೆ ನನ್ನ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರಲ್ಲದೇ ಈ ಸಂದರ್ಭದಲ್ಲಿ ಈ ಭಾಗದ ಜನತೆಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಕೈಗೊಂಡಿರುವ ಕುರಿತು ಸಾರ್ವಜನಿಕರ ಗಮನಕ್ಕೆ ತಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮಟಾ ತಾಲೂಕಿನ ತಹಶೀಲ್ದಾರ್ ಆದ ಶ್ರೀಕೃಷ್ಣ ಕಾಮ್ಕರ್ ಇವರು ಶಾಲೆಯ ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ವೃತ್ತಿನಿಷ್ಠೆ, ವಿದ್ಯಾರ್ಥಿಗಳ ಶಿಸ್ತು ಇವೆಲ್ಲವನ್ನು ನೋಡಿ ಅತೀವ ಹರ್ಷ ವ್ಯಕ್ತಪಡಿಸಿದರು. ಕುಮಟಾದ ಡಯೆಟ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನರಸಿಂಹ ಆರ್ ಹೆಗಡೆ ಇವರು ಮಾತನಾಡುತ್ತಾ ತಾನು ಈ ಪ್ರೌಢಶಾಲೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದನ್ನು ಸ್ಮರಿಸುತ್ತಾ ಈ ಶಾಲೆಯ ವೃತ್ತಿ ಬಾಂಧವರ ನಿಷ್ಠೆ ಮತ್ತು ಅವರೊಟ್ಟಿಗಿನ ಒಡನಾಟ ಒಂದು ಅವಿಸ್ಮರಣೀಯ ಎಂದರಲ್ಲದೇ ಭಾವನಾತ್ಮಕವಾಗಿ ಒಂದು ಶ್ರೀಮಂತ ಬಾಂಧವ್ಯವನ್ನು ಕಟ್ಟಿಕೊಟ್ಟ ಮಾತೃವಲ್ಲ ಅದರ ಮೌಲ್ಯವನ್ನು ತಿಳಿಸಿಕೊಟ್ಟ ಪುಣ್ಯವಾದ ಕ್ಷೇತ್ರ ಇದು ಎಂದು ತಮ್ಮ ಅಂತರಾಳದ ಮನದುಂಬಿದ ಮಾತುಗಳಿಂದ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಡಯೆಟ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಎನ್.ಆರ್.ಹೆಗಡೆ ಇವರನ್ನು ಜಾನಕಿ ಶೆಟ್ಟಿ ವಿದ್ಯಾಸಂಸ್ಥೆಯ ವತಿಯಿಂದ ಶಿಕ್ಷಣ ಶಿರೋಮಣಿ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಉದಯ್ ನಾಯ್ಕ್ ಇವರಿಗೆ ಶಿಕ್ಷಣ ಕ್ಷೇತ್ರದ ಅನನ್ವಯಾಧಿಕಾರಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಅಲ್ಲದೇ ಗರಿಷ್ಠ ಅಂಕ ಸಾಧನೆಯನ್ನು ಸಾಧಿಸಿದ ಧ್ರುವ ಮುಕ್ರಿ ಹಾಗೂ ಕ್ರೀಡಾ ಸಾಧನೆಯನ್ನು ಮಾಡಿದ ಸಂಕೇತ್ ಗೌಡ ಶೌರ್ಯ ಪ್ರಶಸ್ತಿ ವಿಜೇತರಾದ ಸಂದೀಪ ಅಂಬಿಗ್ , ಹರ್ಷ ಭಂಡಾರಿ ಇವರನ್ನು ಸಹ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗಜಾನನ ಪೈ, ಹೇಮಂತ ಗಾಂವ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ್ ನಾಯ್ಕ್ ಮುಂತಾದವರು ಶುಭ ಹಾರೈಸಿದರು. ವೇದಿಕೆಯಲ್ಲಿ ಅಳಕೋಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದೇವು ಗೌಡ, ದೀವಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಜಗದೀಶ ಎಸ್.ಭಟ್ , ಎಲ್ ಎಸ್ ಅಂಬಿಗ್, ಶ್ರೀಮತಿ ವಿದ್ಯಾ ದೇಶಭಂಡಾರಿ, ಮಂಜುನಾಥ ಗೌಡ, ಆಡಳಿತ ಕಮಟಿಯ ಕಾರ್ಯದರ್ಶಿಗಳಾದ ರಾಘವೇಂದ್ರ ಆರ್.ಶೆಟ್ಟಿ, ಶಿರಗುಂಜಿಯ ಶ್ರೀ ತುಳುಸು ಗೌಡ ಮುಂತಾದವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಮುಖ್ಯಾಧ್ಯಾಪಕರಾದ ಶ್ರೀ ಭಾಸ್ಕರ್ ಜಿ ಭಟ್ ಅವರು ಸ್ವಾಗತವನ್ನು ಕೋರಿದರು. ಶಿಕ್ಷಕರಾದ ಸುಭಾಸ್ ಅಂಬಿಗ್ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು. ಹಿರಿಯ ಶಿಕ್ಷಕರಾದ ಪಾಂಡುರAಗ ಆರ್ ದೀವಗಿ ಇವರು ವರದಿ ವಾಚನಗೈದರು. ಶ್ರೀಮತಿ ವಿಜಯ ಆರ್ ಕಡವಿನ ಬಾಗಿಲು ಇವರು ಸರ್ವರಿಗೂ ಆಭಾರವನ್ನು ಸಲ್ಲಿಸಿದರು.
ಶಿಕ್ಷಕರಾದ ಶ್ರೀಮತಿ ಸುಜಾತಾ ವಿ. ದೇಶಭಂಡಾರಿ , ಶ್ರೀಮತಿ ಸರೋಜಾ ನಾಯ್ಕ್ , ರಾಮಚಂದ್ರ ಅಂಬಿಗ್, ಕಾಶೀನಾಥ್ ವಿ.ದೇಶಭಂಡಾರಿ ಮುಂತಾದವರು ಉಪಸ್ಥಿತರಿದ್ದರು

More Stories
ಚಂದ್ರಶೇಖರ ಅಚ್ಯುತ ಗಾಂವಕರ ನಿಧನ
ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹಿರೇಗುತ್ತಿಯ ಹೈಸ್ಕೂಲ್ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಬರ್ಗಿಯ ನಾಗನೆಲೆಯಲ್ಲಿ ವಂದೇ ಮಹಾಲಿಂಗಶಿವಮನ್ನಣೆಗೆ ಪಂಡಿತ್- ಸಮೀರ್