ಭಟ್ಕಳ: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠದ ಸ್ವರ್ಣ ಪಾದುಕಾ ಸಂಚಾರ ಹಾಗೂ ಶಿಷ್ಯ ಹಿತಂ ಕಾರ್ಯಕ್ರಮ ಭಟ್ಕಳ ವಲಯದಲ್ಲಿ ನಡೆಯಿತು.
ಗುರುವಾರ ಜ.೧ರಂದು ಸಂಜೆ ಅಪ್ಸರಕೊಂಡ ವಲಯದಿಂದ ಭಟ್ಕಳ ವಲಯದ ಹುರುಳಿಸಾಲ್ ಶಾಸ್ತಿç ಕಾಲೋನಿಯಲ್ಲಿರುವ ಬಾಲಕೃಷ್ಣ ಸೀತಾರಾಮ ಶಾಸ್ತಿç ಅವರ ಮನೆಗೆ ಚಿತ್ತೆöÊಸಿದ ಸ್ವರ್ಣ ಪಾದುಕೆ ಧೂಳೀ ಪೂಜೆಯ ನಂತರ ಅಲ್ಲಿಯೇ ಮೊಕ್ಕಾಂ ಹೂಡಿದ್ದು ಇದೇ ಸಂದರ್ಭದಲ್ಲಿ ಭಟ್ಕಳ ವಲಯದ ಗುರಿಕಾರರಿಂದ ಶಿಷ್ಯ ಹಿತಂ ದಾಖಲಾತಿಗಳನ್ನು ಆಚಾರ ಭಟ್ಟರ ಸಮ್ಮುಖದಲ್ಲಿ ಸ್ವರ್ಣ ಪಾದುಕೆಗೆ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಷ್ಯ ಹಿತಂ ವಿಷಯ ಸಂಗ್ರಹದ ಕುರಿತು ವಲಯದ ಆಧ್ಯಕ್ಷ ಎಂ.ವಿ.ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲದ ಮಾತ್ರೃ ಪ್ರಧಾನೆ ರೇಷ್ಮಾ ಭಟ್ಟ ಇವರು ಸ್ವರ್ಣ ಪಾದುಕಾ ಸಂಚಾರದ ಕುರಿತು ಮಾಹಿತಿ ನೀಡಿದರು.
ಶುಕ್ರವಾರ ಜ.೨ರಂದು ಬೆಳಿಗ್ಗೆ ಸಾಲೆಮನೆ, ರಂಗೀಕಟ್ಟೆಗಳಲ್ಲಿ ಶಿಷ್ಯರ ಮನೆಗಳಿಗೆ ತೆರಳಿ ಪ್ರತಿ ಮನೆಯಲ್ಲಿಯೂ ಸ್ವರ್ಣ ಪಾದುಕಾ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಪುಃನ ಬಾಲಕೃಷ್ಣ ಶಾಸ್ತಿçಯವರ ಮನೆಗೆ ಆಗಮಿಸಿ ಪೂಜೆ, ಭಿಕ್ಷಾ ಸಮರ್ಪಣೆ ನಡೆಯಿತು. ಸಂಜೆ ಜಾಲಿ ಹಾಗೂ ದೇವಾಲಿ ಮಜಿರೆಯ ಶಿಷ್ಯರ ಮನೆಗೆ ತೆರಳಿ ಪೂಜೆ ಸಲ್ಲಿಸಿದ ಭವತಾರಿಣಿ ವಲಯಕ್ಕೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಗುರಿಕಾರರಾದ ಅನಂತ ಹೆಗಡೆ, ವೆಂಕಟ್ರಮಣ ಹೆಗಡೆ, ಪರಮೇಶ್ವರ ಭಟ್ಟ, ತಿಮ್ಮಣ್ಣ ಮಧ್ಯಸ್ಥ, ಅನಂತ ಭಟ್ಟ ಶಿರಾಲಿ, ಶಿವಾನಂದ ಭಟ್ಟ, ನಾರಾಯಣ ಭಟ್ಟ ಮಂಜುನಾಥ ಭಟ್ಟ ಕಾರ್ಗದ್ದೆ ಹಾಗೂ ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿ ಎಸ್.ಎಂ.ಭಟ್ಟ, ಕೋಶಾಧಿಕಾರಿ ಪ್ರಕಾಶ ಭಟ್ಟ, ಮಂಡಳದ ಪ್ರಮುಖರಾದ ಶಂಭು ಹೆಗಡೆ, ರೇಷ್ಮಾ ಭಟ್ಟ, ಪಿ.ಎನ್.ಭಟ್ಟ, ನೀಲಕಂಠ ಉಪಾಧ್ಯಾಯ, ಜಿ.ಜಿ. ಹೆಗಡೆ ಅಪಗಾಲ, ಸೀತಾ ಭಟ್ಟ, ಸಾಧನಾ ಭಟ್ಟ, ನಾಗರಾಜ ಮಧ್ಯಸ್ಥ, ರವೀಂದ್ರ ಭಾಗವತ, ವಿಶಾಲಾಕ್ಷಿ ಭಟ್, ಸುಧಾ ಭಟ್ಟ, ಶಿವಾನಂದ ಭಟ್ಟ, ಶಾಸ್ತಿç ಕುಟುಂಬದ ಹಿರಿಯರಾದ ಶಾರದಾ ಸೀತಾರಾಮ ಶಾಸ್ತಿç ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ