March 2, 2026

ಸಂಸ್ಕೃತ ಕಾರ್ಯಾಗಾರದಲ್ಲಿ ಸನ್ಮಾನಗೊಂಡ ಪ್ರಶಿಕ್ಷಕ ತೃಯರು


ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಮಟಾ ಡಯಟಿನಿಂದ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ತುಮಕೂರಿನ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಇಲಾಖಾ ಸಂಸ್ಕೃತ ಕಾರ್ಯಾಗಾರದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಡಯಟಿನ ಉಪ ಪ್ರಾಚಾರ್ಯರಾದ ಜಿಎಸ್ ಭಟ್, ಹಿರಿಯ ಉಪನ್ಯಾಸಕರಾದ ಚಂದ್ರಹಾಸ ರಾಯ್ಕರ್ ಹಾಗೂ ನಾಗರಾಜ ಗೌಡರವರನ್ನು ಆಪ್ತವಾಗಿ ಗೌರವಿಸಲಾಯಿತು.


ಉನ್ನತ ಹುದ್ದೆಗಳಿಗೆ ಏರುತ್ತಲೇ ಹೋದರೂ ಪಾಠ ಮಾಡುವಲ್ಲಿ ಗಟ್ಟಿತನವನ್ನು ಕಾದುಕೊಂಡು ಡಯಟಿನ ಜೀವಂತಿಕೆಯ ಧ್ವನಿಯಾಗಿದ್ದ ಈ ಮೂವರೂ ಸಂಸ್ಕೃತದ ಕುರಿತು ಅಪಾರವಾದ ಒಲವು ಮತ್ತು ನಿಲುವುಗಳನ್ನು ಹೊಂದಿರುವುದರಿಂದ ಅವರನ್ನು ಸಂಸ್ಕೃತ ಕಾರ್ಯಾಗಾರದಲ್ಲಿ ಸಮ್ಮಾನಿಸಿರುವುದು ಸಕಾಲಿಕವೆಂದು ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ನುಡಿದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯರಾದ ಎನ್. ಆರ್. ಹೆಗಡೆ,ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕದ್ವಯರಾದ ಸುಧೀರ ನಾಯಕ ಮತ್ತು ರಾಜು ನಾಯ್ಕ, ಕನ್ನಡ ಚಂದ್ರಮ ಉತ್ತರ ಕನ್ನಡದ ಹಾಗೂ ಅಂಕೋಲಾ ತಾಲ್ಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿ, ವಿಶ್ವ ನಾಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷರಾದ ಕುಂದಾಪುರದ ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹರೀಶ ನಾಯಕ, ಸಂಸ್ಕೃತಾಭಿಮಾನಿ ಕೆ.ಆರ್. ನಾಯಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕ ಮೊದಲಾದವರಿದ್ದರು.

About The Author

error: Content is protected !!