ಭಟ್ಕಳ:ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಂಬಳ್ಳಿಯ ಪುರಾತನ ಯೋಗನರಸಿಂಹ ದೇವಸ್ಥಾನಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರು ಭೇಟಿ ನೀಡಿ ದೇವಾಲಯವನ್ನು ವೀಕ್ಷಿಸಿದರು. ಭಕ್ತರೊಂದಿಗೆ ಮಾತನಾಡಿದ ಅವರು, ಯೋಗನರಸಿಂಹ ಮೂರ್ತಿ ಅಪರೂಪದದ್ದು; ದೇವಸ್ಥಾನವು ಅತೀ ಪುರಾತನವಾದುದರಿಂದ ಸಮಗ್ರ ಜೀರ್ಣೋದ್ಧಾರದ ಅಗತ್ಯವಿದೆ ಎಂದರು. ರಾಜರ ಕಾಲದ ಶೈಲಿಯಲ್ಲೇ ಅಭಿವೃದ್ಧಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಗಳು, ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಶ್ರೀಗಳು ಒಂದು ತಾಸಿಗೂ ಅಧಿಕ ಕಾಲ ದೇವಸ್ಥಾನದಲ್ಲಿ ಉಳಿದು ಪುರೋಹಿತರು ಹಾಗೂ ಊರಿನ ಜನರೊಂದಿಗೆ ಚರ್ಚಿಸಿದರು. “ಜೀರ್ಣೋದ್ಧಾರ ಕಾರ್ಯವನ್ನು ಯೋಗನರಸಿಂಹನೇ ಮಾಡಿಸಿಕೊಳ್ಳುತ್ತಾನೆ” ಎಂದು ಆಶೀರ್ವಚನ ನೀಡಿದರು. ಈ ವೇಳೆ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು