ಹೊನ್ನಾವರ: ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ ಅಕಾಡಮಿ (ರಿ) ಬೆಂಗಳೂರು ವತಿಯಿಂದ ಆಯೋಜಿಸಿರುವ 2025-26 ನೇ ಸಾಲಿನ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ರಾಜ್ಯದ ಅತ್ಯುತ್ತಮ ಶಾಲೆ ಎಂದು ಗುರುತಿಸುವುದರ ಮೂಲಕ ‘ಶಿಕ್ಷಣ ಚೈತನ್ಯ’ ಪ್ರಶಸ್ತಿಯನ್ನು ನ್ಯೂ ಇಂಗ್ಲೀಷ್ ಸ್ಕೂಲಗೆ ನೀಡಿ ಸನ್ಮಾನಿಸಲಾಗಿದೆ. ಇದರಿಂದ ಸತತ ಎರಡನೇ ಬಾರಿ ಪ್ರಶಸ್ತಿ ಲಭಿಸಿದಂತಾಗಿದೆ. ಕಳೆದ 2024 -25 ನೇ ಸಾಲಿನಲ್ಲಿಯೂ ಸಹ ಪ್ರಶಸ್ತಿ ಲಭಿಸಿತ್ತು. ಶಾಲೆಯು ಶೈಕ್ಷಣಿಕವಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಮಾದರಿ ಆಡಳಿತ ಮಂಡಳಿ ಹೊಂದಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ವಿವಿಧ ಸೌಲಭ್ಯಗಳನ್ನು ನೀಡುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಪ್ರಜೆಗಳನ್ನು ರೂಪಿಸುತ್ತಾ ಶಿಕ್ಷಣ ಸೇವೆಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಂಡಿರುವ ಬಗ್ಗೆ ಕೊಡ ಮಾಡುವ ಪ್ರಶಸ್ತಿ ಎಂದು ಸಂಘಟಕರು ಪ್ರಶಸ್ತಿ ಪತ್ರದಲ್ಲಿ ಪ್ರಕಟಿಸಿರುತ್ತಾರೆ, ಸಂಸ್ಥೆಯ ಉಪಾಧ್ಯಕ್ಷ ನಾಗರಾಜ್ ಕಾಮತ್ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಒದಗಿ ಬರಲು 3 ವಿಭಾಗದ ಶಿಕ್ಷಕ-ಶಿಕ್ಷಕೇತರರ ಅವಿರತ ಶ್ರಮ, ಆಡಳಿತ ಮಂಡಳಿ ಸಹಕಾರ, ಪಾಲಕರ ಬೆಂಬಲವೇ ಕಾರಣ ಎಂದು ಹರ್ಷ ವ್ಯಕ್ತಪಡಿಸಿ ಎಲ್ಲರಿಗೂ ಅಭಿನಂದಿಸಿದ್ದಾರೆ.

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’