ಕೆಆರ್ ಪೇಟೆ ; ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಇಂದಿನ ಒತ್ತಡದ ಬದುಕಿನಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದು ಸಮಾಜ ಸೇವಾಕರ್ತ ಗೂಡೆಹೊಸಳ್ಳಿ ಜವರಾಯಿಗೌಡ ಹೇಳಿದರು. ಅವರು ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ದಾನಿಗಳಾದ ಶ್ರೀಮತಿ ಲಕ್ಷ್ಮಮ್ಮ ಚನ್ನೇಗೌಡ, ಪಾಪಣ್ಣ ಅವರ ಮಕ್ಕಳು ಮತ್ತು ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ಗ್ರಾಮ ದೇವತೆ ಶ್ರೀಉಚ್ಚಳ್ಳಮ್ಮ ಮತ್ತು ಚಿಕ್ಕಮ್ಮ ದೇವಾಲಯಗಳ ಕಳಸ ಕುಂಭಾಭಿಷೇಕ ಮಹೋತ್ಸವ ಹಾಗೂ ನೂತನ ದೇವರ ಶಿಲಾ ವಿಗ್ರಹದ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೂಡೇ ಹೊಸಹಳ್ಳಿ ಗ್ರಾಮದಲ್ಲಿ ದಾನಿಗಳ ಸಹಕಾರದಿಂದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಉಚ್ಚಳ್ಳಮ್ಮ ದೇವಾಲಯಗಳನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಭವ್ಯವಾಗಿ ನಿರ್ಮಿಸಲಾಗಿದೆ. ಮುಂಬೈ ನಗರದಲ್ಲಿ ನೆಲೆಸಿ ಉದ್ಯಮಿಗಳಾಗಿರುವ ಗ್ರಾಮದ ವಜ್ರದ ವ್ಯಾಪಾರಿಗಳಾದ ಸುರೇಶ್ ಹಾಗೂ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು, ಸಂಪೂರ್ಣ ಸಹಕಾರ ನೀಡುವ ಮೂಲಕ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಭವ್ಯವಾದ ದೇವಾಲಯಗಳು ನಿರ್ಮಾಣವಾಗಲು ಕಾರಣರಾಗಿದ್ದಾರೆ. ನಮ್ಮ ಗ್ರಾಮೀಣ ಭಾರತದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ದೇವಾಲಯಗಳು ನಮ್ಮ ನೆಲದ ಜೀವಂತ ಸ್ಮಾರಕಗಳಾಗಿವೆ ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ನೆಮ್ಮದಿ ಮತ್ತು ಶಾಂತಿಯನ್ನು ಪಡೆಯಲು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದು ಇಂದಿನ ಜೀವನದ ಅನಿವಾರ್ಯವಾಗಿದೆ ಎಂದು ಜವರಾಯಿಗೌಡ ಹೇಳಿದರು.
ಇದೇ ಸಂದರ್ಭದಲ್ಲಿ ಪಿತಾಜಿ ರೈತ ಯುವಕ ಸಂಘದ ವತಿಯಿಂದ ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಧಾರ್ಮಿಕ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಸನ್ನನಾಥ ಸ್ವಾಮೀಜಿ, ಶ್ರೀ. ಶಂಭುನಾಥ ಸ್ವಾಮೀಜಿ, ಹಾಗೂ ಪುರುಷೋತ್ತಮಾನಂದನಾಥ ಸ್ವಾಮೀಜಿಯವರು ಭಾಗವಹಿಸಿದ್ದರು. ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ಚನ್ನಿಂಗೇಗೌಡ, ಜಿ.ಆರ್.ಹರೀಶ್, ಜಯರಾಮು, ಮಾಡಿಮನೆ ಕೃಷ್ಣೇಗೌಡ, ಕೆಂಪಮ್ಮನವರ ಮಹೇಶ್, ಪೂಜಾರಿ ಬಸವಣ್ಣ, ಕುಮಾರಣ್ಣ, ರಾಮಕೃಷ್ಣೇಗೌಡ, ಸ್ವಾಮಣ್ಣ, ಮೇಗಲಮನೆ ಧರ್ಮರಾಜು, ಕಾಳೇಗೌಡ್ರು, ಚಿಕ್ಕಯ್ಯನವರ ಪುಟ್ಟಣ್ಣ, ಬೂ ಸಣ್ಣನವರ ಕಾಳೇಗೌಡ, ಕೊಡಗಣ್ಣನ ಕಾಳೇಗೌಡ, ದೇವಣ್ಣ ಗೋಪಾಲ, ವೆಂಕಟಪ್ಪ ಅವರ ಜಯರಾಮ, ಕಾಲೋನಿ ಲೋಕೇಶ್, ಚಿನ್ನದಂಗಡಿ ಸೋಮಣ್ಣ, ಹನುಮಯ್ಯ, ಹಾಗೂ ಪಿತಾಜಿ ಯುವಕ ಸಂಘದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ.

More Stories
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ