ಹೋನ್ನಾವರ : ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಡಿಗೊಂದು ರಾಗ ಸಂಯೋಜನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಭಟ್ಕಳದ ಕಲಾವಿದ ಹಾಗೂ ಸಾಹಿತಿ ಉಮೇಶ ಮುಂಡಳ್ಳಿಯವರು ಒಂದರಿಂದ ಆರನೇ ತರಗತಿವರೆಗಿನ ಕನ್ನಡ ಅಭ್ಯಾಸ ಪುಸ್ತಕದಲ್ಲಿರುವ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಮಕ್ಕಳ ಎದುರಿಗೆ ಸುಂದರವಾಗಿ ಹಾಡಿ ಪ್ರಾತ್ಯಕ್ಷಿಕೆ ನಡೆಸಿದರು. ಒಂದನೇ ತರಗತಿಯ ಆಲಿಸು ಅನುಸರಿಸು, ಆಸೆ ನಿರಾಶೆ, ಎರಡನೇ ತರಗತಿಯ ಕಾಮನಬಿಲ್ಲು, ಅನ್ನದಾತ, ಮೂರನೇ ತರಗತಿಯ ಹೂವಾಡಗಿತ್ತಿ, ಕಿತ್ತೂರು ರಾಣಿ ಚೆನ್ನಮ್ಮ, ನಾಲ್ಕನೇ ತರಗತಿಯ ದುಡಿಮೆಯ ಗರಿ, ಬಾವಿಯಲ್ಲಿ ಚಂದ್ರ, ಐದನೇ ತರಗತಿಯ ಕರಡಿಯ ಕುಣಿತ, ಮಗುವಿನ ಮೊರೆ, ಮೂಡಲ ಮನೆ, ಆರನೇ ತರಗತಿಯ ಗಂಗವ್ವ ತಾಯಿ, ಹೃದಯ ವಚನಗಳು, ಕಿತ್ತೂರ ಕೇಸರಿ ಮುಂತಾದ ಕವನಗಳನ್ನು ಶುಶ್ರಾವ್ಯವಾಗಿ ಹಾಡಿ ರಂಜಿಸಿದರು.


ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ
ಯವರು ಮತ್ತು ವಿದ್ಯಾರ್ಥಿಗಳು ಸೇರಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಉಮೇಶ ಮುಂಡಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹಾಡಿಗೆ ತುಂಬಾ ಮಹತ್ವವಿದೆ. ಅಭಿನಯದೊಂದಿಗೆ ಹಾಡನ್ನು ಸುಂದರವಾಗಿ ಹಾಡಿದರೆ ಮಗು ಕಲಿಕೆಯಲ್ಲಿ ಆಸಕ್ತಿ ಹೊಂದಲು ಸಾಧ್ಯ. ಆ ದಿಸೆಯಲ್ಲಿ ಶಾಲಾ ಶಿಕ್ಷಕರು ಇಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯವಾದುದು ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ಪಿ.ಆರ್. ನಾಯ್ಕ ಸ್ವಾಗತಿಸಿದರೆ, ಮುಖ್ಯಾಧ್ಯಾಪಕಿ ಲವೇಜಿನ್ ಪಿಂಟೊ ವಂದಿಸಿದರು. ಶಿಕ್ಷಕಿ ಪ್ಲಾವೀಯಾ ಮಿಂಡೋಸ್ ವಂದಿಸಿದರು. ವೇದಿಕೆಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ನೇತ್ರಾವತಿ ತಾಂಡೇಲ, ಉಪಾಧ್ಯಕ್ಷ ಜೋಯ್ ಡಿಸೋಜಾ, ಶಿಲ್ಪಾ, ಯಮುನಾ, ಮಾಲಿನಿ ಮೇಸ್ತ, ಸುಧಾ ಶೇಟ್, ಗೀತಾ ಪ್ರಸಾದ ಮುಕ್ರಿ, ಲಲಿತಾ ನಾಯ್ಕ, ರೇಖಾ ಶೇಟ್, ವಿನಯಾ ಮೇಸ್ತ ಉಪಸ್ಥಿತರಿದ್ದರು.

More Stories
ಹೊನ್ನಾವರದಲ್ಲಿ ಸಂಭ್ರಮದ “ಪತ್ರಿಕಾ ದಿನಾಚರಣೆ”: ಸಾಧಕರಿಗೆ ಸನ್ಮಾನ; ಮಾಧ್ಯಮದ ಸವಾಲುಗಳ ಕುರಿತು ಗಂಭೀರ ಚಿಂತನೆ
ಹೊನ್ನಾವರದ ಯುವಕನ ಜಾಗತಿಕ ಸಾಧನೆ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಿಂಚಿ NVIDIA ಕಂಪನಿಯಲ್ಲಿ ವಾರ್ಷಿಕ ₹2.60 ಕೋಟಿ ಪ್ಯಾಕೇಜ್ ಪಡೆದ ಪೃಥ್ವಿರಾಜ್!
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ: ಸುರಕ್ಷತೆ ಬಗ್ಗೆ ದೇವರಾಜ ಅರಸು ವಿಚಾರ ವೇದಿಕೆ ತೀವ್ರ ಕಳವಳ