ಭಟ್ಕಳ: ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವ ಹಾಗೂ ಸ್ವಾವಲಂಬನೆ ಮನೋಭಾವ ರೂಪಿಸುವ ಉದ್ದೇಶದಿಂದ ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಗೆ ಕೃಷಿ ಉತ್ಪನ್ನಗಳಿಗೆ ವಿಶೇಷ ಉತ್ತೇಜನ ದೊರಕಿತು.


ಮುಟ್ಟಳ್ಳಿ ಯಲ್ಲಿ ಶಾಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಯನ್ನು ವಿಶೇಷ ಚೇತನ ವಿದ್ಯಾರ್ಥಿ ಕೈಯಿಂದ ಮಕ್ಕಳಸಂತಿಯನ್ನು ಚಾಲನೆ ನೀಡಲಾಯಿತು.
ನಂತರ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪೂರ್ಣಿಮಾ ಮೊಗೇರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂತೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತರಕಾರಿ, ಹಣ್ಣು, ಸೊಪ್ಪುಗಳು ಹಾಗೂ ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಪ್ರದರ್ಶಿಸಿ ಮಾರಾಟಕ್ಕೆ ಇಡಲಾಗಿತ್ತು. ಹೊರಗಿನಿಂದ ತರಲಾಗುವ ಪ್ಲಾಸ್ಟಿಕ್ ತಿಂಡಿ-ತಿನಿಸುಗಳಿಗೆ ಅವಕಾಶ ನೀಡದಿರುವುದು ಸಂತೋಷಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳು, ಸೊಪ್ಪುಗಳು, ಹಣ್ಣುಗಳು ಹಾಗೂ ಮನೆಮದ್ದಿನ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಪಾಲಕರು ಹಾಗೂ ಸ್ಥಳೀಯರು ಮಕ್ಕಳಿಂದಲೇ ಖರೀದಿ ನಡೆಸಿ ಪ್ರೋತ್ಸಾಹಿಸಿದರು.
ಈ ಸಂತೆ ಇಂದ ಮಕ್ಕಳಲ್ಲಿ ಕೃಷಿ ಕಾರ್ಯಗಳ ಮಹತ್ವ, ಶ್ರಮದ ಮೌಲ್ಯ ಹಾಗೂ ವ್ಯಾಪಾರ ಕೌಶಲ್ಯಗಳ ಅರಿವು ಹೆಚ್ಚಿತು.
ಮಕ್ಕಳ ಸಂತೆಯ ಮೂಲಕ ಹೊಸ ತಲೆಮಾರಿನಲ್ಲಿ ಕೃಷಿ ಪ್ರೀತಿಯನ್ನು ಬೆಳೆಸುವ ಕಾರ್ಯ ಯಶಸ್ವಿಯಾಗಿ ನೆರವೇರಿತು.


ಈ ಸಂದರ್ಭದಲ್ಲಿ ಸಿ.ಆರ್.ಪಿ ವಿಜಯಾ ಬಾಳಗಿ, ಬಿ.ಆರ್.ಪಿ ಬಿ.ಕೆ. ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಅನಂತ ನಾಯ್ಕ, ಉಪಾಧ್ಯಕ್ಷೆ ಶೈಲಾ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ರವಿ ನಾಯ್ಕ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಜಿನಿ ನಾಯ್ಕ, ಸದಸ್ಯ ಶೇಷಗಿರಿ ನಾಯ್ಕ, ಶಾಲಾ ಮುಖ್ಯ ಶಿಕ್ಷಕಿ ಗಂಗಾ ಮೊಗೇರ, ಶಿಕ್ಷಕರಾದ ವಿಜಯಕುಮಾರ, ಜಯಶ್ರೀ ಆಚಾರಿ, ಲತಾ ಕೆ.ಎಂ. ದೀಪಾ ದೇವಾಡಿಗ, ನೂತನ ನಾಯ್ಕ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ