August 30, 2025

ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಭೂಮಿ ಹಕ್ಕನ್ನು ನೀಡಲು ಅವಕಾಶವಾಗುವಂತೆ ಕಾನೂನು ತಿದ್ದುಪಡಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕೆಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದರು.

ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ 35ನೇ ದಿನ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಬಸ್ತಿಕೇರಿ, ಗೇರಸೊಪ್ಪ ಗ್ರಾಪಂ ಕೂಟದಿಂದ ಸಲ್ಲಿಸಲಾದ ಗುರು ಸೇವೆಯನ್ನು ಸ್ವೀಕರಿಸಿದ ಶ್ರೀಗಳು, ನ್ಯಾಯವಾದಿ ರವೀಂದ್ರ ನಾಯ್ಕರು ಹಲವು ವರ್ಷಗಳಿಂದ ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕನ್ನು ಕೊಡಿಸಲು ಹೋರಾಟ ನಡೆಸಿದ್ದಾರೆ. ಅರಣ್ಯವಾಸಿಗಳು ಅಮಾಯಕರು ಮತ್ತು ಮುಗ್ದರು. ಅವರು ಯಾವಾಗಲೂ ಅರಣ್ಯವನ್ನು ಬೆಳೆಸಿ, ರಕ್ಷಿಸಿದವರು. ಅವರಿಂದ ಅರಣ್ಯ ನಾಶ ಯಾವತ್ತೂ ಆಗಿಲ್ಲ. ಅವರ ಕಟುಂಬದ ಜೀವನ ನಿರ್ವಹಣೆಗೆ ಅಗತ್ಯವಾದ ಭೂಮಿ ಹಕ್ಕನ್ನು ಸರ್ಕಾರ ನೀಡಲು ಕಾನೂನಿಗೆ ತಿದ್ದುಪಡಿ ತರಲೇ ಬೇಕು. ಯಾಕೆಂದರೆ ಶಾಸಕರು, ಸಚಿವರು ತಮಗೆ ಬೇಕಾದ ರೀತಿಯಲ್ಲಿ ಕಾನೂನು ರಚಿಸುವುದಿಲ್ಲವೇ, ತಮಗೆ ಬೇಕಾದ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ಮಾಡುತ್ತಾರಲ್ಲಾ..? ಅಲ್ಲದೇ ಕಾನೂನು ತಿದ್ದುಪಡಿಗೆ ಸಂವಿಧಾನದಲ್ಲಿ ಅವಕಾಶ ಇರುವಾಗ ಸುಪೀಂ ಕೋರ್ಟ್ ಮೂಲಕವೇ ಪರವಾನಗಿ ಪಡೆದು ಅಥವಾ ಸಂಸತ್ತು, ಸದನದಲ್ಲಿ ಅರಣ್ಯ ಭೂಮಿ ಹಕ್ಕು ನೀಡಲು ತೊಡಕಾದ ಕಾನೂನಿಗೆ ಸೂಕ್ತ ರೂಪದಲ್ಲಿ ತಿದ್ದುಪಡಿ ತಂದು ಬಡ ಅರಣ್ಯವಾಸಿಗಳಿಗೆ ಭೂಮಿ ಹಕ್ಕನ್ನು ಒದಗಿಸಿಕೊಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದ ಶ್ರೀಗಳು, ಮನುಷ್ಯನಿಗೆ ಅಧಿಕಾರ ಅಂತಸ್ತು, ಕೀರ್ತಿ ಬಂದಾಗ ಎದುರಾಗುವ ಅಂಹಕಾರದಿAದ ಆತನ ಪತನ ಶುರುವಾಗುತ್ತದೆ. ಅದನ್ನು ಪ್ರಕೃತಿಯೇ ಸಹಿಸದೇ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಅಧಿಕಾರ, ಕೀರ್ತಿ ಬಂದಾಗ ಅದೆಲ್ಲವನ್ನು ಭಗವಂತನೇ ಕರುಣಿಸಿದ್ದು ಎಂಬ ವಿನಮೃಭಾವದಿಂದ ನಿತ್ಯ ಕರ್ಮ ಮಾಡಿಕೊಂಡು ಹೋದರೆ, ಭಗವಂತನ ಸಾನಿಧ್ಯ ಪಾಪ್ತವಾಗುತ್ತದೆ. ಆಧ್ಯಾತ್ಮಿಕ ಜಾಗೃತಿಯಿಂದ ಪರ್ಸ್ನಾಲಿಟಿ ಡೆವಲ್ಪ್ ಆಗುತ್ತದೆ. ಧರ್ಮ ದಡಿಯಲ್ಲಿ ನಡೆಯುವವರಿಗೆ ಯಾರಿಗೂ ಹೆದರ ಬೇಕಾಕಿಲ್ಲ. ನಾಮಧಾರಿ ಸಮಾಜ ಸಶಕ್ತರಾಗಿ ಸಣ್ಣಪುಟ್ಟ ಸಮಾಜವನ್ನು ನಿಮ್ಮ ಜೊತೆಗೆ ಕರೆದುಕೊಂಡು ಹೋಗುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗಬೇಕು. ಅದಕ್ಕೆ ಈ ಚಾತುರ್ಮಾಸ್ಯ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ ಎಂದು ಶ್ರೀಗಳು ಆಶೀರ್ವದಿಸಿದರು.

ಚಾತುರ್ಮಾಸ್ಯ ವ್ರತಾಚರಣೆಯ 35ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರದ ನಗರ ಬಸ್ತಿಕೇರಿ, ಗೇರಸೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಗೋಳಿ, ಬೇಣ, ದೇವಿನಗರ, ಹುಳೇಗಾರ, ವರ್ನಕೋಡು, ಕಬ್ಬಿನಹಕ್ಕಲ್, ಆನೆದಡಿ, ಅಡಿಗದ್ದೆ, ಬೆಳ್ಳಿಮಕ್ಕಿ, ಕುಂಬೆಶ್ವರ, ಬೊಮ್ಮನಕೊಡ್ಲ, ದೇವಿಗದ್ದೆ, ಆನೆಗದ್ದೆ, ಬಸ್ಸಾಕುಳಿ, ಕರ್ನಾಕೊಡ, ಬೋಳಕಾರ, ಕಾಸಬೈಲ, ಕ್ರಷ್ಣಾಕೇರಿ, ಹಾಡಗೇರಿ, ಕಲ್ಲತೋಟ, ಗಾಳಗುರು, ಹುಂಜಿಮಕ್ಕಿ, ನಗರೆ, ಕಂಡೊಡಿ, ಕೆನ್ನಕ್ಕಿ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು.

ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರು ಮತ್ತು ವಕೀಲರಾದ ರವೀಂದ್ರ ನಾಯ್ಕರ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಅರಣ್ಯವಾಸಿಗಳು ಮತ್ತು ರೈತರು ಶ್ರೀಗಳ ದರ್ಶನ ಪಡೆದು, ವಿಶೇಷ ಗುರು ಪಾದುಕಾ ಪೂಜೆಯನ್ನು ನೆರವೇರಿಸಿದರು. ಬುಡಕಟ್ಟು ಜನಾಂಗದ ಲಂಮಾಣಿ ಸಮಾಜದವರು ಶ್ರೀರಾಮ ಮತ್ತು ಸೀತೆಯನ್ನು ಜಾನಪದ ಶೈಲಿಯಲ್ಲಿ ಸ್ಥುತಿಸುತ್ತ ಶ್ರೀಗಳ ಪಾದಕಮಲಗಳಿಗೆ ಶಿರಬಾಗಿ ನಮಸ್ಕರಿಸಿ ಪರಿ ಭಾವುಕರನ್ನಾಗಿಸಿತು. ಶ್ರೀಗಳು ಅವರೆಲ್ಲರಿಗೂ ಫಲಮಂತ್ರಾಕ್ಷತೆಯನ್ನು ವಿತರಿಸಿ, ಹರಸಿದರು. ಈ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಭೀಮಸಿ ವಾಲ್ಮಿಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಸಂಚಾಲಕ ಮಹೇಶ ನಾಯ್ಕ ಕಾನಳ್ಳಿ, ಶಂಕರ ಗೌಡ, ವಿನೋದ ನಾಯ್ಕ, ಹರಿಶ್ಚಂದ್ರ ನಾಯ್ಕ , ಓಂಕಾರ, ದಿನೇಶ ನಾಯ್ಕ, ನೆಹರು ನಾಯ್ಕ, ಎಂ ಕೆ ನಾಯ್ಕ ಕಂಡ್ರಾಜಿ, ಚಂದ್ರು ಪೂಜಾರಿ ಮಂಚಿಕೇರಿ, ಸುರೇಶ ನಾಯ್ಕ ನಗರಬಸ್ತಿಕೇರಿ, ಜನಾರ್ಧನ ಸೇರಿದಂತೆ ಇತರರು ಇದ್ದರು.

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಅನುವಂಶಿಯ ಉಪಾದಿವಂತ ಮಂಡಳಿಯ ಅಧ್ಯಕ್ಷರಾದ ರಾಜಗೋಪಾಲ್ ಅಡಿ ಗುರೂಜೀ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಆಗಮಿಸಿ, ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದು, ಆಶೀರ್ವಾದ ಪಡೆದರು.

ವೆಂಕಟರಮಣ ಜಟ್ಟಪ್ಪ ನಾಯ್ಕ (ಚೊಕನಮಕ್ಕಿ) ಬಾಡ ಇವರು ವಿಶೇಷ ಸೇವೆ ಸಲ್ಲಿಸಿದರು. ಮಂಜುನಾಥ ನಾರಾಯಣ ನಾಯ್ಕ ಕುಟುಂದವರು ಬೋಳಕಾರ, ಗೋವಿಂದ ಸುಬ್ಬಾ ನಾಯ್ಕ ಕುಟುಂಬದವರು ಬೋಳಕಾರ, ಮಂಜುನಾಥ ಮಹಾದೇವ ನಾಯ್ಕ ಕುಟುಂಬದವರು ಉಪ್ಪಿನಗುಳಿ, ಮಹೇಶ ಮಂಜುನಾಥ ನಾಯ್ಕ ಕುಟುಂಬದವರರು ಅಡಿಗದ್ದೆ, ಸುಬ್ರಾಯ ಧರ್ಮಾ ನಾಯ್ಕ ಬಸ್ಸಾಕುಳಿ, ಪ್ರಶಾಂತ ಗೋಪಾಲ ನಾಯ್ಕ ಮತ್ತು ಪ್ರಕಾಶ ಗೋಪಾಲ ನಾಯ್ಕ ಕ್ರಷ್ಣಾಕೇರಿ, ಮಾರುತಿ ಮಂಜುನಾಥ ನಾಯ್ಕ ಮತ್ತು ರಾಘವೆಂದ್ರ ಮಂಜುನಾಥ ನಾಯ್ಕ ಹುಂಜಮಕ್ಕಿ, ರಾಜು ಮಹಾದೇವ ನಾಯ್ಕ ವರ್ನಕೋಡು, ಕೇಶವ ವಿ ನಾಯ್ಕ ಎಮಿನೆನ್ಸ್ ಕನಸ್ಟ್ರಕ್ಷನ್ ಕುಮಟಾ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ರಾಘವೇಂದ್ರ ನಾಯ್ಕ್ ಡಿವೈಎಸ್ಪಿ ಕಾರವಾರ, ಮೋಹನ್ ನಾಯಕ್ ಗೋಕರ್ಣ ಅರ್ಬನ್ ಬ್ಯಾಂಕ್ ಅಧ್ಯಕ್ಷರು, ಸುರಾಲು ಚಂದ್ರಶೇಖರ್ ಭಟ್ ಸೀಮಾ ಮುಖ್ಯಸ್ಥರು, ದೇವಸ್ಥಾನದ ಪ್ರದಾನ ಅರ್ಚಕರು ನಗರ ಬಸ್ತಿಕೇರಿ ಹಾಗೂ ಅನೇಕ ಗಣ್ಯರು ಆಗಮಿಸಿದ್ದರು. ಸಿದ್ದಾಪುರ, ಶಿರಸಿ, ಕೊನಳ್ಳಿ ಗ್ರಾಮದ ಸಮಾಜ ಬಾಂಧವರು ಗುರು ಸೇವೆ ಸಲ್ಲಿಸಿದರು. ಕಾಗಲ್ ನ ನಾಮಧಾರಿ ಮಹಿಳಾ ಸಮಾಜ ಬಾಂಧವರು ಸಂತೋಷ ನಾಯ್ಕ ಮತ್ತು ವಕೀಲರಾದ ಮಮತಾ ನಾಯ್ಕ ನೇತೃತ್ವದಲ್ಲಿ ಆಗಮಿಸಿ, ಶ್ರೀಗಳ ದರ್ಶನ ಪಡೆದು ಫಲಮಂತ್ರಾಕ್ಷತೆ ಪಡೆದರು. ಅಲ್ಲದೇ ಮಹಿಳಾ ಸಂಘದ ವತಿಯಿಂದ ಭಕ್ತರಿಗೆ ಸಿಹಿ ವಿತರಿಸಲಾಯಿತು. ಬಳಿಕ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿ, ಹರಸಿದರು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಭೋಜನ ಸ್ವೀಕರಿಸಿ, ಕೃತಾರ್ಥರಾದರು.
ವರದಿ : ವಿಶ್ವನಾಥ ಸಾಲ್ಕೊಡ್ ಹೊನ್ನಾವರ

About The Author