ಹಿರೇಗುತ್ತಿ: ಊರಿನ ಅಬಾಲವೃದ್ಧರಿಗೂ ಪ್ರೀತಿಪಾತ್ರನಾಗಿದ್ದ ಶಾಂತ, ಸಹೃದಯಿ ವ್ಯಕ್ತಿತ್ವದ ಹಿರೇಗುತ್ತಿ ಮೇಸಿ ಬೊಮ್ಮಯಣ್ಣನ ತೃತೀಯ ಪುತ್ರನಾದ ಗಂಗಾಧರ ಬೊಮ್ಮಯ್ಯ ಗಾಂವಕರ(ಗಂಗು) (ವಯಸ್ಸು 59) ಅವರು ನಿಧನರಾದರು.
ಸೌಮ್ಯ ಸ್ವಭಾವ, ಮೃದು ಮಾತು ಮತ್ತು ಎಲ್ಲರೊಂದಿಗೂ ಹಿತೈಷಿತನದಿಂದ ವರ್ತಿಸುವ ಗುಣಗಳಿಂದ ಅವರು ಊರಿನ ಪ್ರತಿಯೊಬ್ಬರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಅವರ ಅಗಲಿಕೆಯಿಂದ ಕುಟುಂಬಸ್ಥರಿಗೆ ಮಾತ್ರವಲ್ಲದೆ, ಸಮಸ್ತ ಹಿರೇಗುತ್ತಿ ಗ್ರಾಮಕ್ಕೂ ಅಪಾರ ನಷ್ಟವಾಗಿದೆ.
ಮೃತರು ತಾಯಿ,ಮಡದಿ, ಮಗಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವರದಿ : ಎನ್ ರಾಮೂ ಹಿರೇಗುತ್ತಿ

About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ