March 5, 2026

ಮಾನ್ವಿತಾಳ ಕನ್ನಡ ಕಿರೀಟಿಯಾದ ಮಂಜುನಾಥ ಬರ್ಗಿ


ಮುಂಡಗೋಡ : ಶಹರದ ಪಂಜುರ್ಲಿ ಹೋಟೆಲ್ ನ ಸಭಾಂಗಣದಲ್ಲಿ ಮಾನ್ವಿತಾ ಯೂಟ್ಯೂಬ್ ಚಾನೆಲ್ ನ “ವರ್ಷ ತುಂಬಿದ ಸಂಭ್ರಮ”ದ ಸಮಾರಂಭದಲ್ಲಿ ಕುಮಟಾ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಪ್ರತಿಭಾ ಸಂಪನ್ನ ಹೆಸರಾಂತ ಸಂಸ್ಕೃತ ಅಧ್ಯಾಪಕರಾದ ಖ್ಯಾತ ಯಕ್ಷನಟರಾಗಿರುವ – ಸಾಹಿತಿ, ಅಂಕಣಕಾರ ಹಾಗೂ ಪ್ರಖ್ಯಾತ ವಾಗ್ಮಿಗಳಾದ ಮಂಜುನಾಥ ಗಾಂವಕರ್ ಬರ್ಗಿಯವರಿಗೆ “ಕನ್ನಡ ಕಿರೀಟಿ” ಅಭಿದಾನದೊಂದಿಗೆ “ಮಾನ್ವಿತಾ ಮನೆಯ ಮನ್ನಣೆ -2026″ನ್ನಿತ್ತು ನಾಗರತ್ನ – ನರೇಶ ಶೆಟ್ಟಿ ದಂಪತಿಗಳು ಪುರಸ್ಕರಿಸಿದರು.


ಇತ್ತೀಚೆಗಷ್ಟೇ ಮಂಜುನಾಥ ಬರ್ಗಿಯವರು ತಮ್ಮ ಮೂರೂವರೆ ದಶಕಗಳ ಸಾರ್ಥಕ ಯಕ್ಷ ಪಯಣದ ಹೊಸ್ತಿಲಲ್ಲಿ “ಗೋದಾವರಿ ಗೌರವ”ದ ಯಕ್ಷ ಕಿರೀಟವನ್ನು ಅಂತರ್ ರಾಷ್ಟ್ರೀಯ ಸಹಕಾರಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ನಾಯಕರಿಂದ ಮುಡಿಗೆರಿಸಿಕೊಂಡಿದ್ದನ್ನೂ ‘ಭಾವನಾ” ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು.
ಮಾನ್ವಿತಾ ಮನೆಯ ಮನ್ನಣೆಯ ಸುಸಮಯದಲ್ಲಿದ್ದ ಅಂಕವಲ್ಲಿಯ ವೈಶಾಲಿ ಹೋಮ್ ಟೀಮ್ ನಿಂದಲೂ ಮಂಜಣ್ಣರಿಗೆ ಅಭಿಮಾನದಿಂದ ಮಾನಿಲಾಯಿತು.
ಕುಂದ ಯಕ್ಷ ಸಾಂಸ್ಕೃತಿಕ ವೇದಿಕೆಯ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

error: Content is protected !!