oplus_0
- ಗೋವಾದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುರ್ಡೇಶ್ವರ ಕ್ಲಬ್‌ಗೆ ಅಭೂತಪೂರ್ವ ಗೌರವ
ಮುರ್ಡೇಶ್ವರ: ತನ್ನ ವಿನೂತನ ಹಾಗೂ ನಿರಂತರ ಸಮಾಜಸೇವಾ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿರುವ ಮುರ್ಡೇಶ್ವರ ಲಯನ್ಸ್ ಕ್ಲಬ್, ಅಧ್ಯಕ್ಷರಾದ ಲ. ಕಿರಣ ಕಾಯ್ಕಿಣಿ ಅವರ ಸಮರ್ಥ ನೇತೃತ್ವದಲ್ಲಿ 2025-26ನೇ ಲಯನ್ ವರ್ಷದ ಸಾಧನೆಗಾಗಿ ಒಟ್ಟು 9 ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ.

ಗೋವಾದಲ್ಲಿ ಲಯನ್ ಜಿಲ್ಲಾ ಗವರ್ನರ್ ಜೈ ಅಮೋಲ್ ನಾಯ್ಕ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅದ್ಧೂರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಗೌರವಗಳನ್ನು ಪ್ರದಾನ ಮಾಡಲಾಯಿತು. ಗೋವಾ ಹಾಗೂ ಕರ್ನಾಟಕ ರಾಜ್ಯದ ಒಟ್ಟು 115 ಲಯನ್ಸ್ ಕ್ಲಬ್‌ಗಳ ಪೈಕಿ ಮುರ್ಡೇಶ್ವರ ಲಯನ್ಸ್ ಕ್ಲಬ್ ಅತ್ಯುತ್ತಮ ಸಾಧನೆಗಾಗಿ “ಬೆಸ್ಟ್ ಲಯನ್ಸ್ ಕ್ಲಬ್”, “ಬೆಸ್ಟ್ ಯುನಿಕ್ ಆಕ್ಟಿವಿಟಿ ಕ್ಲಬ್”, “ಬೆಸ್ಟ್ ಸ್ಕ್ರ‍್ಯಾಪ್ ಬುಕ್ ಅವಾರ್ಡ್” ಹಾಗೂ “ಗೋಲ್ಡನ್ ಕ್ಲಬ್ ಅವಾರ್ಡ್” ಸೇರಿದಂತೆ ಪ್ರಮುಖ ಸಾಂಸ್ಥಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ವೈಯಕ್ತಿಕ ವಿಭಾಗದಲ್ಲೂ ಪ್ರಶಸ್ತಿಗಳ ಮಹಾಪೂರ:
ಸಂಸ್ಥೆಯ ಯಶಸ್ಸಿಗೆ ಕಾರಣರಾದ ಪದಾಧಿಕಾರಿಗಳಿಗೂ ವೈಯಕ್ತಿಕ ವಿಭಾಗದಲ್ಲಿ ಉನ್ನತ ಪ್ರಶಸ್ತಿಗಳು ಲಭಿಸಿವೆ. ಕ್ಲಬ್‌ನ ಅಧ್ಯಕ್ಷರಾದ ಕಿರಣ ಕಾಯ್ಕಿಣಿ ಅವರು “ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್”, ಕಾರ್ಯದರ್ಶಿಯಾದ ನಾಗೇಶ ಮಡಿವಾಳ ಅವರು “ಬೆಸ್ಟ್ ಸೆಕ್ರೆಟರಿ ಅವಾರ್ಡ್”, ಹಾಗೂ ಕೋಶಾಧ್ಯಕ್ಷರಾದ ಎಮ್.ವಿ. ಹೆಗಡೆ ಅವರು “ಡಿಸ್ಟ್ರಿಕ್ಟ್ ಗವರ್ನರ್ ಅಪ್ರಿಸಿಯೇಶನ್ ಅವಾರ್ಡ್” ಗೌರವಕ್ಕೆ ಪಾತ್ರರಾಗಿದ್ದಾರೆ.






ಅಲ್ಲದೆ, ಡಯಾಬೆಟಿಸ್ ಜಿಲ್ಲಾ ಚೇರ್‌ಪರ್ಸನ್ ಆಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ. ಸುನೀಲ್ ಜತ್ತನ್ ಅವರು “ಬೆಸ್ಟ್ ಜಿಲ್ಲಾ ಚೇರ್‌ಪರ್ಸನ್ ಅವಾರ್ಡ್” ಮತ್ತು ಜಾಗತಿಕ ಮಟ್ಟದ ಅತ್ಯುನ್ನತ “ಇಂಟರ್ನ್ಯಾಷನಲ್ ಪ್ರೆಸಿಡೆಂಟ್ ಅಪ್ರಿಸಿಯೇಶನ್ ಅವಾರ್ಡ್”ಗಳನ್ನು ಪಡೆದುಕೊಂಡು ಕ್ಲಬ್‌ನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಈ ಅಭೂತಪೂರ್ವ ಜಯಕ್ಕೆ ಹಾಗೂ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಲಯನ್ಸ್ ಸಂಸ್ಥೆಯ ಹಿರಿಯರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

More Stories
ಮುಂಡಗೋಡದಲ್ಲಿ ಪ್ರದರ್ಶನಗೊಳ್ಳಲಿರುವ ಅಪರೂಪದ ಯಕ್ಷಗಾನ
ಮಾನ್ವಿತಾಳ ಕನ್ನಡ ಕಿರೀಟಿಯಾದ ಮಂಜುನಾಥ ಬರ್ಗಿ