ಭಟ್ಕಳ : “ಅಕ್ಕರ ಸರಸ್ವತಿ”- ಅಭಿದಾನದ ಜನಪ್ರಿಯ ವಿಶ್ರಾಂತ ಆಂಗ್ಲ ಭಾಷಾ ಶಿಕ್ಷಕಿ ರಾಜಂ ಹಿಚಕಡ್ ಅವರಿಗೆ ಬೆಂಗಳೂರಿನ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಸೇವಾ ರತ್ನ ಪ್ರಶಸ್ತಿಯನ್ನು ಬೆಳಗಾವಿಯ ಕುಮಾರ ಗಂಧರ್ವ ಸಭಾಭವನದಲ್ಲಿ ಭಾನುವಾರದಂದು ಪ್ರದಾನಗೊಳಿಸಲಾಯಿತು.


ಅಂಕೋಲಾ ಮೂಲದ ರಾಜಂ ಹಿಚ್ಕಡ್ ರವರು ಭಟ್ಕಳ ಶಹರದ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ದೀರ್ಘಕಾಲಿಕವಾಗಿ ಆಂಗ್ಲ ಭಾಷಾ ಶಿಕ್ಷಕರಾಗಿ ಅನುಪಮವಾದ ಸೇವೆಯನ್ನು ಸಲ್ಲಿಸಿ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಜನಮಾನಸದಲ್ಲಿ ನೆಲೆ ನಿಂತವರು. ಸಂಘಟನಾತ್ಮಕವಾಗಿಯೂ ಸಕ್ರಿಯವಾಗಿ ರಚನಾತ್ಮಕ ಚಟುವಟಿಕೆಗಳ ಮೂಲಕ ಜಿಲ್ಲೆಯನ್ನು ಮೀರಿ ಬೆಳೆದವರು.
ಇದುವರೆಗೆ ಹತ್ತಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅವರಿಗೆ, ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯು ಸಿದ್ಧೇಶ್ವರ ಶ್ರೀಗಳ ಸಂಸ್ಮರಣೆಯೊಂದಿಗೆ ಪ್ರದತ್ತವಾಗಿರುವುದು ಅಭಿಮಾನದ ವಿಷಯವೆಂದು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿ, ರಾಜ್ಯ ಸಂಚಾಲಕರಾದ ವಿಜಯಕುಮಾರ್, ರಾಜ್ಯ ಕೋಶ್ಯಾಧ್ಯಕ್ಷರಾದ ಶಿವಚಂದ್ರ, ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಕನ್ನಡ ಭಾರತೀ ಪ್ರಪಂಚದ ಸಂಚಾಲಕರಾದ ನಾಗನೆಲೆಯ ನಾರಾಯಣ ನಾಗು ನಾಯಕ, ಸಮರ್ಪಣ ವಿಶ್ರಾಂತ ಶಿಕ್ಷಕರ ಬಳಗದ ನಿಕಟಪೂರ್ವ ಸಂಸ್ಥಾಪಕ ಅಧ್ಯಕ್ಷರಾದ ಎನ್ ಬಿ ನಾಯಕ್ ಸೂರ್ವೆ ಹಾಗೂ ಅಂಕೋಲಾದ ಯಕ್ಷಮಖಿಯ ಸಂಚಾಲಕರಾದ ರಾಜೇಶ ನಾಯಕ ಸೂರ್ವೆ ಮೊದಲಾದವರು ಅಭಿನಂದಿಸಿದ್ದಾರೆ.

More Stories
ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ನಗರ ಹಿಂದೂ ಸಂಗಮ ಯಶಸ್ಸಿಗೆಸಹಕರಿಸಿದ ಪೊಲೀಸರಿಗೆ ಧನ್ಯವಾದ
ಮಾರ್ಚ್ 14ರಂದು ಭಟ್ಕಳದಲ್ಲಿ ಮೊದಲ ಲೋಕ್ ಅದಾಲತ್