ಕೃಷ್ಣರಾಜಪೇಟೆ ತಾಲೂಕಿನ ತಗಡೂರು ಗ್ರಾಮದ ಏಳು ಕೋಟಿ ಮೈಲಾರಲಿಂಗೇಶ್ವರ ಸುಕ್ಷೇತ್ರದ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ…
ಕಂಚಿ ಮೀರಿದ ಸರಪಳಿ ಪವಾಡದಲ್ಲಿ ಕಬ್ಬಿಣದ ಸರಪಳಿಯನ್ನು ಪುಡಿ ಪುಡಿಯಾಗಿ ತುಂಡರಿಸಿದ ರಮೇಶ ಗೊರವಯ್ಯರ್… ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಸುಕ್ಷೇತ್ರದ ಶ್ರೀಗುರು ಕಪಿಲಮುನಿ ಸಿಂಹಾಸನಾಧಿಪತಿ ಶ್ರೀವೆಂಕಪ್ಪಯ್ಯ ಒಡೆಯರ್ ಗುರುಗಳು ಹಾಗೂ ಬೇಬಿ ಬೆಟ್ಟದ ಶ್ರೀರಾಮೇಶ್ವರ ಮಠದ ಶಿವ ಶಿವಬಸವ ಸ್ವಾಮೀಜಿಗಳ ಬೆಳ್ಳಿ ಸಾರೋಟಿನ ಮೆರವಣಿಗೆ.. ಕೃಷ್ಣರಾಜಪೇಟೆ ತಾಲೂಕಿನ ಶ್ರೀ ಏಳು ಕೋಟಿ ಮೈಲಾರಲಿಂಗೇಶ್ವರ ಶ್ರೀಗಂಗೆ ಮಾಳಮ್ಮ ಹಾಗೂ ಕ್ಷೇತ್ರ ಪಾಲಕ ದೂತರಾಯ ದೇವಸ್ಥಾನದ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಮೈಲಾರ ಸುಕ್ಷೇತ್ರದ ಶ್ರೀ ಗುರುಕಪಿಲಮುನಿ ಸಿಂಹಾಸನಾದಿಪತಿ ಶ್ರೀ ವೆಂಕಪ್ಪಯ್ಯ ಒಡೆಯರ್ ಗುರುಗಳು ಹಾಗೂ ಬೇಬಿ ಬೆಟ್ಟದ ಶ್ರೀ ರಾಮ ಯೋಗೇಶ್ವರ ಮಠದ ಶ್ರೀ ಶಿವಬಸವ ಸ್ವಾಮಿಗಳನ್ನು ಬೆಳ್ಳಿ ಸಾರೋಟಿನಲ್ಲಿ ಕುಳ್ಳಿರಿಸಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು. ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳು ಹಾಗೂ ಕಂಚಿ ಮೀರಿದ ಸರಪಳಿ ಪವಾಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಹೆಚ್.ಟಿ. ಮಂಜು ದಂಪತಿಗಳು ನೆರೆದಿದ್ದ ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡಿ ಹಬ್ಬ ಹರಿದಿನಗಳು ಹಾಗೂ ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮೈಲಾರ ಲಿಂಗೇಶ್ವರ ಸುಕ್ಷೇತ್ರವು ವರ್ಷದಿಂದ ವರ್ಷಕ್ಕೆ ಸಾವಿರಾರು ಭಕ್ತಾದಿಗಳನ್ನು ನಾಡಿನ ವಿವಿಧ ಭಾಗಗಳಿಂದ ಬರಮಾಡಿಕೊಳ್ಳುತ್ತಿದ್ದು 10 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಮೂರು ದಿನಗಳ ಕಾಲ ನಡೆದ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅನ್ನದಾಸೋಹ ಪ್ರಸಾದವನ್ನು ಸ್ವೀಕರಿಸಿ ಧನ್ಯತಾ ಭಾವನೆಯನ್ನು ಮೆರೆದಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಜಾತಿ ವರ್ಗಗಳ ಜನರು ಶ್ರೀ ಕ್ಷೇತ್ರದ ಭಕ್ತರಾಗಿ ತಮ್ಮ ಮನದ ಕೋರಿಕೆಗಳನ್ನು ಈಡೇರಿಸುವಂತೆ ಮೈಲಾರಲಿಂಗೇಶ್ವರ ಗಂಗೆ ಮಾಳಮ್ಮ ಹಾಗೂ ಕ್ಷೇತ್ರ ಪಾಲಕನಾದ ದೂತರಾಯ ಸ್ವಾಮಿಯಲ್ಲಿ ನಿವೇದನೆ ಮಾಡಿಕೊಂಡು ಭಕ್ತಿಯ ಪರಾಕಾಷ್ಟೆಯನ್ನು ಪ್ರದರ್ಶಿಸಿದ್ದಾರೆ. ತಗಡೂರು ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳು ಸೇರಿದಂತೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ವಿಶೇಷ ಅನುದಾನವನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಿಸಿಕೊಟ್ಟು ಕ್ಷೇತ್ರದ ಶಾಸಕನಾಗಿ ನನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಮೈಲಾರಲಿಂಗೇಶ್ವರ ಸುಕ್ಷೇತ್ರದಲ್ಲಿ ನಡೆಯುವ ವಿವಿಧ ಪವಾಡಗಳನ್ನು ಕಣ್ಣಾರೆ ಕಂಡು ತುಳಕಿತನಾಗಿ ರೋಮಾಂಚನಗೊಂಡಿದ್ದೇನೆ ಎಂದು ಅಭಿಮಾನದಿಂದ ಹೇಳಿದ ಶಾಸಕರು ಶ್ರೀ ವೆಂಕಪ್ಪಯ್ಯ ಒಡೆಯರ್ ಗುರುಗಳು ಹಾಗೂ ಶಿವಬಸವ ಸ್ವಾಮೀಜಿಗಳಿಂದ ಆಶೀರ್ವಾದವನ್ನು ಪಡೆದುಕೊಂಡರು.
ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ, ಉದ್ಯಮಿ ಜಗದಾಂಭ ಹೊನ್ನಾವರ ಚಂದ್ರಶೇಖರ್, ಡಿ.ಪಿ.ಸ್ವಾಮಿ ಗೌಡ, ಆರ್.ಪಿ.ರೇವಣ್ಣ, ಆನೇಕಲ್ ತಾಲೂಕಿನ ತಹಶೀಲ್ದಾರ್ ನವೀನ್ ಕುಮಾರ್, ದಾನಿಗಳಾದ ಲಕ್ಷ್ಮಣ್, ಗೀತಾ ಗಾರ್ಮೆಂಟ್ಸ್ ಈರಪ್ಪ, ಲಕ್ಷ್ಮಿ ಗಾಣದ ಎಣ್ಣೆಯ ಕೆ.ಆರ್.ಮಹೇಶ್ ಕ್ಯಾಂಟೀನ್ ರಾಮಣ್ಣ, ನಳಿನಾ ದೊರೇಶ್, ಯೋಗೇಶ್ ಗೌಡ, ಹೂವಿನ ವ್ಯಾಪಾರಿ ಮಂಜಣ್ಣ ಭಾಗವಹಿಸಿದ್ದರು. ಮೈಲಾರಲಿಂಗೇಶ್ವರ ಸ್ವಾಮಿಯ ಸದ್ಭಕ್ತರಾದ ಗಂಗಪ್ಪ ಸಿದ್ದಪ್ಪ ಅಂಗಡಿ ಮಡಿಕೆಹೊನ್ನಹಳ್ಳಿ ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ರಮೇಶ್ ಗೊರವಯ್ಯರ್, ಅಭಿಲಾಶ್ ಮತ್ತು ರವಿಯವರು ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಸುಕ್ಷೇತ್ರದಲ್ಲಿ ನಡೆದ ನಾಲ್ಕನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿ ಸ್ವಾಮಿಯ ದರ್ಶನ ಪಡೆದು ರೋಮಾಂಚನ ಗೊಂಡರು. ಕರಡಿ ಮಜಲು ನೃತ್ಯ, ಪೂಜಾ ಹಾಗೂ ಪಟ ಕುಣಿತ, ಕಂಚಿ ಮೀರಿದ ಸರಪಳಿ ಪವಾಡ ಹಾಗೂ ಕಂಸಾಳೆ ಕಾರ್ಯಕ್ರಮಗಳು ನೆರೆದಿದ್ದ ಭಕ್ತಾದಿಗಳನ್ನು ರೋಮಾಂಚನಗೊಳಿಸಿದವು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಂಡು ಗುಡಿಕೈಗಾರಿಕೆ ಸ್ಥಾಪಿಸಿ ಸಾಧನೆ ಮಾಡಿ. ಅಶ್ವಿನಿ ಕರೆ
ತೊಟ್ಟಿಲನ್ನು ತೂಗುವ ಕೈ ಈ ರಾಷ್ಟ್ರವನ್ನು ಆಳಬಲ್ಲದು.. ಹೆಣ್ಣು ಮಕ್ಕಳು ಈ ರಾಷ್ಟ್ರದ ಶಕ್ತಿ ನ್ಯಾಯಾಧೀಶ ಸುಧೀರ್ ಅಭಿಮತ
ಬಡ ರೈತನ ಮಗ, ವಕೀಲ ಕಾಮನಹಳ್ಳಿ ಬೋರೇಗೌಡರ ಜೀವನ ಸಾಧನೆಗೆ ಗವಿಮಠ ಶ್ರೀಗಳ ಮೆಚ್ಚುಗೆ..