March 12, 2026

ಮಹಿಳಾ ಸಮಾನತೆಇನ್ನು ಬಂದಿಲ್ಲ ಡಾ|| ಕೃಷ್ಣಾ ಜಿ, ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ

ಹೊನ್ನಾವರ : ಸಮಾಜ ಇನ್ನು ಪುರುಷ ಕೇಂದ್ರಿತವಾಗಿದೆ. ಮಹಿಳೆಯರಿಗೆ ಇನ್ನು ಹಲವಾರು ಕ್ಷೇತ್ರಗಳು ಮರೀಚಿಕೆಯಾಗಿ ಉಳಿದಿದೆ. ರಾಜಕೀಯ, ನ್ಯಾಯಾಂಗ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಮಹಿಳೆಯರ ಪಾತ್ರಗಣನೀಯವಾಗಿ ಕಡಿಮೆ ಇದೆ ಎಂದು ಸ್ತಿçà ರೋಗತಜ್ಞರಾದ ಡಾ|| ಕೃಷ್ಣಾ ಜಿ ಹೇಳಿದರು.
ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿಧಾನಸಭೆ ಮತ್ತು ಲೋಕಸಭೆಯಲ್ಲಿಜನಪ್ರತಿನಿಧಿಗಳಾಗಿ ಬೆರಳಣಿಕಯಷ್ಟು ಮಹಿಳೆಯರು ಕಾಣಸಿಗುವುದು ದುರದೃಷ್ಟಕರ. ಸರಕಾರದ ಶಕ್ತಿ ಅಂತಹ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವಲ್ಲಿ ಯಶಸ್ವಿವಾಗಿವೆ. ಎಲ್ಲ ಕ್ಷೇತ್ರಗಳಲ್ಲಿ ಪುರುಷ ಸಿಬ್ಬಂಧಿಗಳು ಇರುವಷ್ಟೇ ಮಹಿಳಾ ಸಿಬ್ಬಂಧಿಗಳು ಕಾರ್ಯ ನಿರ್ವಹಿಸುವಂತಾಗಬೇಕು ಆವಾಗ ಮಾತ್ರ ಈ ವರ್ಷದ ಘೋಷ ವಾಕ್ಯ ಎಲ್ಲ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು ಸಮಾನತೆ ಸಬಲೀಕರಣ ಅರ್ಥಪೂರ್ಣವಾದಿತ್ತುಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾವಹಿಸಿದ ಚವiðರೋಗ ತಜ್ಞರಾದ ಡಾ|| ಶಿವಾನಂದ ಹೆಗಡೆ ಮಾತನಾಡಿ ಇವತ್ತೀನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರು ಪ್ರಮುಖ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆ ಮಾಡುತ್ತಿದ್ದಾರೆ. ನಮ್ಮದೇಶದ ಪ್ರಥಮ ಪ್ರಜೆಯಾಗಿಗೌರವಾನ್ವಿತ ರಾಷ್ಟçಪತಿಗಳು ಮಹಿಳೆಯಾಗಿದ್ದಾರೆ.ವಿಶ್ವ ಮಹಿಳಾ ಕ್ರಿಕೆಟ್‌ಕಪ್‌ನ್ನು ಭಾರತೀಯ ಮಹಿಳೆಯರು ತಮ್ಮದಾಗಿಸಿಕೊಂಡಿದ್ದಾರೆ.ಸಿAಧೂರ ಆಪರೇಷನ್ ಸಂದರ್ಭದಲ್ಲಿಯುದ್ಧದಕುರಿತು ದಿನದ ಬೆಳವಣಿಗೆಗಳನ್ನು ಪತ್ರಕರ್ತರಿಗೆ ವಿವರಿಸುತ್ತಿದ್ದಿದ್ದು ಮಹಿಳಾ ಸೈನ್ಯಾಧಿಕಾರಿಗಳು ಎನ್ನುವುದುಗಮನಾರ್ಹವಾಗಿದೆ. ಹಂತ ಹಂತವಾಗಿ ಮಹಿಳೆಯರು ಪುರುಷ ಪ್ರಧಾನ ಕ್ಷೇತ್ರಗಳಲ್ಲಿಯೂ ತಮ್ಮಛಾಪನ್ನು ಮೂಡಿಸುತ್ತಿರುವುದುಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಮಾತನಾಡಿ ಹೊನ್ನಾವರ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಪೂರಕವಾದ ವಾತಾವರಣವಿರುವುದು ಸಂತೋಷದಾಯಕ ಸಂಗತಿ ಎಂದು ಹೇಳಿದರು. ಶುಶ್ರೂಷಾಧಿಕಾರಿಗಳಾದ ಶ್ರೀಮತಿ ಮಂಗಲಾ ನಾಯ್ಕ ಮಹಿಳಾ ದಿನಾಚರಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಆಡಳಿತಾಧಿಕಾರಿಗಳಾದ ಡಾ|| ರಾಜೇಶಕಿಣಿ ಮಾತನಾಡಿ ಆಸ್ಪತ್ರೆಯು ಉತ್ತಮ ಸೇವೆ ನೀಡುವಲ್ಲಿ ನಮ್ಮ ಮಹಿಳಾ ಸಿಬ್ಬಂಧಿಗಳ ಪಾತ್ರ ಮುಖ್ಯವಾಗಿದೆ. ಎಲ್ಲ ಮಹಿಳಾ ಸಿಬ್ಬಂಧಿಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಹೇಳಿದರು. ವೇದಿಕೆಯಲ್ಲಿ ಡಾ|| ಜೈಮಿನಿ, ಡಾ|| ಕಮಲಾ, ಡಾ||ಅಪೂರ್ವ ಡಾ|| ನವನಿತ ಡಾ|| ಗುರುದತ್ತ ಕುಲಕರ್ಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಹಿಳಾ ಸಿಬ್ಬಂಧಿಗಳಿಗೆ ಗುಲಾಬಿ ಹೂವು ನೀಡಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಲಾಯಿತು.ಆಪೀüಸ್ ಸಿಬ್ಬಂದಿ ವೆಂಕಟೇಶ ಜೆ ಪಾರ್ಥನೆ ಮಾಡಿದ್ದರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.

About The Author

error: Content is protected !!