

ಇಡಗುಂಜಿ, ಹೊನ್ನಾವರ : ಮಕ್ಕಳೇ ಅಧ್ಯಕ್ಷ ಕಾರ್ಯದರ್ಶಿಗಳು, ಮಕ್ಕಳೇ ಪಿ.ಡಿ.ಓ ಮಕ್ಕಳೇ ಅಧಿಕಾರಿಗಳು ಗ್ರಾಮಸ್ಥರು ಮತ್ತು ಸದಸ್ಯರು, ಮಕ್ಕಳಿಂದಲೆ ಗ್ರಾಮಾಭಿವೃದ್ಧಿಯ ಕುರಿತು ಸುಧೀರ್ಘ ಚರ್ಚೆ ಗ್ರಾಮೀಣ ಭಾಗದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ,ಪಂಚಾಯತ ಅನುದಾನದ ಬಳಕೆ, ಗ್ರಾಮ ಪಂಚಾಯತಿಯಲ್ಲಿ ನಾಗರಿಕರಿಗಾಗಿ ಇರುವ ಹಲವು ಸವಲತ್ತುಗಳು, ಹಾಗೂ ಅದರ ಸದ್ವಿನಿಯೋಗ ಇವೆಲ್ಲವುಗಳ ಬಗ್ಗೆ ನೈಜ ಗ್ರಾಮ ಪಂಚಾಯತ ಗ್ರಾಮಸಭೆಯನ್ನು ನಾಚಿಸುವಂತೆ ಸಭೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇವೆಲ್ಲ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಇಡಗುಂಜಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಮಾದರಿ ಯುವ ಗ್ರಾಮಸಭೆಯ ಝಲಕ್ ಗಳು

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಇಲಾಖೆಯ ನಿರ್ದೇಶನದಂತೆ ದಿನಾಂಕ 07-03-2026 ರಂದು ನಡೆದ ಈ ಕಾರ್ಯಕ್ರಮದಲ್ಲಿ ಇಡಗುಂಜಿ ಗ್ರಾಮಪಂಚಾಯತ ಪಿ.ಡಿ.ಓ ಗಿರೀಶ ನಾಯಕ ಅವರು ಉದ್ಘಾಟನೆ ಮಾಡಿ ಮಾತನಾಡುತ್ತಾ ಪಂಚಾಯತಿಯಲ್ಲಿರುವ ಅನುದಾನ, ಸೌಲಭ್ಯ ಮುಂತಾದವುಗಳ ಬಗ್ಗೆ ಎಳೆ ಎಳೆ ಯಾಗಿ ವಿವರಿಸುತ್ತಾ ಇಂತಹ ಕಾರ್ಯಕ್ರಮಗಳಿಂದ ಮಕ್ಕಳು ಪಂಚಾಯತಿಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯುತ್ತಾ ಮುಂದಿನ ದಿನಗಳಲ್ಲಿ ಜನರು ಹಾಗೂ ಪಂಚಾಯತಿಯ ಸಂಬAಧ ಗಟ್ಟಿಗಿಸುವಲ್ಲಿ ಪ್ರಮುಖಪಾತ್ರ ವಹಿಸುವದು ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ ಶ್ಯಾನಭಾಗ, ಸದಸ್ಯರಾದ ಸಂತೋಷ ಶ್ಯಾನಭಾಗ ಗೀತಾ ನಾಯ್ಕ ಮಂಜುಳಾ ನಾಯ್ಕ ಶಿವಾನಂದ ನಾಯ್ಕ ಹಾಗೂ ಗಜಾನನ ನಾಯ್ಕ ಇದ್ದರು ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯರಾದ ಆಶಾ ವಿ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಆನಂದ ನಾಯ್ಕ ಅವರ ಮಾರ್ಗದರ್ಶನದಲ್ಲಿ ಮಂಜುನಾಥ ನಾಯ್ಕ ಹಾಗೂ ಪದ್ಮಾ ಜಿ ಅವರ ಸಹಕಾರದೊಂದಿಗೆ ಸುಮಾರು 1 ಗಂಟೆಗಳ ಕಾಲ ಮಕ್ಕಳು ಸ್ವತಂತ್ರವಾಗಿ ಮಾದರಿ ಯುವ ಗ್ರಾಮ ಸಭೆಯಕನ್ನು ಬಹಳ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದರು. ಮಕ್ಕಳ ಮನೋಜ್ಞ ಅಭಿನಯ,ಪ್ರಭುದ್ದ ಸಂವಹನ ಮತ್ತು ವಿಷಯ ಮಂಡನೆ ಪಿ.ಡಿ.ಓ.ಹಾಗೂ ಪಾಲಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕ ಆನಂದ ನಾಯ್ಕ ಸರ್ವರನ್ನು ಸ್ವಾಗತಿಸಿ ಮಾದರಿ ಯುವ ಗ್ರಾಮ ಸಭೆಯ ಉದ್ದೇಶ ಹಾಗೂ ತಯಾರಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರೆ ರಾಮಾ ಗೊಂಡ ರವರು ವಂದಿಸಿದರು ವಿಶ್ವೇಶ್ವರ ಬಟ್ಟ ರವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು ನೂರಕ್ಕೂ ಹೆಚ್ವು ಪಾಲಕರು ಉಪಸ್ಥಿತರಿದ್ದರು. ತದನಂತರ ಶಿಕ್ಷಕರಾದ ವೀಣಾ ಹೆಗಡೆ,ಮಂಗಳಾ ಹಾಗೂ ನರೇಶ ಹೆಗಡೆಯವರ ನೇತೃತ್ವದಲ್ಲಿ ಪಾಲಕರ ಸಭೆ ನಡೆಯಿತು.
About The Author




More Stories
ಹೊನ್ನಾವರದಲ್ಲಿ 34ನೇ ಕೊಂಕಣಿ ಮಾನ್ಯತಾ ದಿನಾಚರಣೆ: ‘ಕೊಂಕಣಿ ಕಲಾ ಕುಟಮ್’ ವತಿಯಿಂದ ವಿಜೃಂಭಣೆಯ ಆಚರಣೆ!
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.