ಭಟ್ಕಳ: ಹೊನ್ನಾವರ ಮಂಡಳ ಅಂತರ್ಗತ ಭಟ್ಕಳ ಹವ್ಯಕ ವಲಯದ ಐದನೇ ವಲಯೋತ್ಸವ ಕಾರ್ಯಕ್ರಮ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಬಸ್ತಿಮಕ್ಕಿಯ ಆಚಾರ್ಯ ಭವನದಲ್ಲಿ ನಡೆಯಿತು.
ಗುರುವಂದನೆಯೊAದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮ ಅತ್ಯಂತ ಉತ್ತಮವಾಗಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲಯದ ವೈವಾಹಿಕ ವಿಭಾಗದ ಮುಖ್ಯಸ್ಥ ಕೃಷ್ಣಾನಂದ ಭಟ್ಟ ಬಲ್ಸೆ ಅವರು ಗುರುವಿನ ಸ್ಥಾನ ಬಹು ದೊಡ್ಡದು. ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ ಭಗವಂತನನ್ನು ಗುರು ಕಾರುಣ್ಯ ಬೇಕು. ಗುರು ಕೃಪೆಯಿಲ್ಲದೇ ನಮ್ಮಲ್ಲಿ ಯಾವುದೇ ಸಾಧನೆ ಅಸಾಧ್ಯ ಎಂದರು. ನಾವು ಭಗವಂತನ ಸ್ಮರಣೆ ಮಾಡಬೇಕು, ನಮ್ಮಲ್ಲಿಯ ಯೌವನವು ಕ್ಷಯವಾಗುತ್ತಾ ಬರುತ್ತದೆ. ಆಯುಷ್ಯವೂ ಕ್ಷಯವಾಗುತ್ತಾ ಬರುತ್ತದೆ ಇಂತಹ ಸಮಯದಲ್ಲಿ ನಮ್ಮ ಚಿಂತನೆ ಮೋಕ್ಷದೆಡೆಗೆ ಇರಬೇಕು. ಸಂಪತ್ತು ಕೂಡಾ ಕ್ಷಣಿಕವಾದುದು. ಅದು ಸಮುದ್ರದ ಅಲೆಗಳಿದ್ದಂತೆ ಶಾಶ್ವತವಾದುದಲ್ಲ. ನಮ್ಮಲ್ಲಿ ಸಂಪತ್ತು ಇದ್ದಾಗ ನಾವು ಸದುಪಯೋಗ ಪಡಿಸಿಕೊಳ್ಳಬೇಕು ಆಗ ಮಾತ್ರ ಜೀವನ ಸಾರ್ಥಕವಾಗುವುದು ಎಂದೂ ಹೇಳಿದರು.
ಹೊನ್ನಾವರ ಮಂಡಳದ ವಿದ್ಯಾರ್ಥಿ ವಿಭಾಗದ ಮುಖ್ಯಸ್ಥ ಎಸ್.ಎನ್.ಹೆಗಡೆ ಕರ್ಕಿ ಅವರು ಮಾತನಾಡಿ ಗುರುಗಳ ಉಪಾಸನೆ, ಭಜತೆ, ಸ್ತೋತ್ರ ಪಠಣ, ಪ್ರತಿ ಮನೆಯಲ್ಲಿಯೂ ನಡೆಯಬೇಕು. ನಮ್ಮಲ್ಲಿ ಪರಿವರ್ತನೆ ಮಾತೆಯರಿಂದಲೇ ಆಗಬೇಕು. ಭಕ್ತಿಯಿಂದ ಮಾಡುವ ಪ್ರತಿಯೊಂದು ಕಾರ್ಯವೂ ಕೂಡಾ ಯಶಸ್ವೀಯಾಗುವುದು ಎಂದ ಅವರು ಇದಕ್ಕೆ ನಿದರ್ಶನವೆಂದರೆ ರಾಜ ಮನೆತನದ ಮೀರಾ ಬಾಯಿ. ಆಕೆಯ ಭಕ್ತಿಯು ಇಂದಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿದ್ಧಾಪುರ ಮಂಡಳದ ಕೋಶಾಧ್ಯಕ್ಷ ಎಸ್.ಎಂ.ಹೆಗಡೆ ಅವರು ಮಾತನಾಡಿ ಸಿದ್ಧಾಪುರದಲ್ಲಿ ಎ.೨೦ರಿಂದ ೨೨ರ ತನಕ ಬಾನ್ಕುಳಿ ಮಠದಲ್ಲಿ ನಡೆಯುವ ಶಂಕರ ಪಂಚಮಿ ಕಾರ್ಯಕ್ರಮದ ರೂಪು ರೇಷೆಗಳನ್ನು ನೀಡಿದರು. ಅಡಿಕೆ ಬೆಳೆಗಾರರ ಸಂಕಷ್ಟ ನಿವಾರಣೆಗಾಗಿ ಹೋಮ ನಡೆಯಲಿದ್ದು ಅಡಿಕೆ ಬೆಳೆಗಾರರೆಲ್ಲ ಭಾಗವಹಿಸುವಂತೆ ಕೋರಿದರು. ಸಾಗರ ವಲಯದ ಮಾತ್ರತ್ವಂ ವಿಭಾದ ಮುಖ್ಯಸ್ಥೆ ವೀಣಾ ಅವರು ಶಂಕರ ಪಂಚಮಿ ಆಮಂತ್ರಣ ಪತ್ರಿಕೆಯನ್ನು ಅಕ್ಷತೆಯೊಂದಿಗೆ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಗರಾಜ ಭಟ್ಟ ಬೇಂಗ್ರೆ, ಹೊನ್ನಾವರ ಮಂಡಳದ ಮಾತೃ ಪ್ರಧಾನೆ ರೇಷ್ಮಾ ಯೋಗೀಶ ಭಟ್ಟ ಮಾತನಾಡಿದರು. ವೇದಿಕೆಯಲ್ಲಿ ಹೊನ್ನಾವರ ಮಂಡಳದ ಉಪಾಧ್ಯಕ್ಷ ಶಂಭು ಹೆಗಡೆ, ಭಟ್ಕಳ ವಲಯದ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಉಪಸ್ಥಿತರಿದ್ದರು.
ವಲಯೋತ್ಸವದ ಆತಿಥ್ಯ ವಹಿಸಿದ್ದ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ ಅವರನ್ನು ಸಾಲು ಹೊದಿಸಿ ಗೌರವಿಸಲಾಯಿತು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಎಸ್.ಎಂ.ಭಟ್ಟ ನಿರ್ವಹಿಸಿದರು. ಗುರಿಕಾರರಾದ ಪಿ.ಎನ್. ಭಟ್ಟ ಹಾಗೂ ತಿಮ್ಮಣ್ಣ ಮಧ್ಯಸ್ಥ ಸಹಕರಿಸಿದರು.

More Stories
ಎಲ್ಪಿಜಿ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಭಟ್ಕಳದಲ್ಲಿ ಹೋಟೆಲ್ಗಳ ತಪಾಸಣೆ
ರೈಲಿನಿಂದ ಬಿದ್ದು ವೃದ್ಧನ ದಾರುಣ ಸಾವು
ತೋಟಗಾರಿಕೆ ಇಲಾಖೆಯಿಂದ 10 ತಿಂಗಳ ತರಬೇತಿಗೆ ಅರ್ಜಿ ಆಹ್ವಾನ