ಅಂಕೋಲಾ : ತಾಲ್ಲೂಕಿನ ಬೇಲೇಕೇರಿಯ ಸ್ವರ್ಣ ಪದಕ ವಿಜೇತ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಆರ್.ಟಿ. ಸಿ. ಬಸ್ ಚಾಲಕ – ತರಬೇತಿದಾರರಾಗಿದ್ದ ಸಂಸ್ಮರಣೀಯ ಬೀರಣ್ಣ ನಾಯಕರ ಹಿರಿಯ ಸೊಸೆ, ಕುಂದಾಪುರದ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪದವಿ ಪೂರ್ವ ಕಾಲೇಜು ವಿಭಾಗದ ರಾಜ್ಯಶಾಸ್ತ್ರ ವಿಷಯದ ಹೆಸರಾಂತ ಸೃಜನಶೀಲ ಉಪನ್ಯಾಸಕರಾದ ವಿಶ್ವ ನಾಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷರಾದ ಹರೀಶ ನಾಯಕರವರ ಧರ್ಮಪತ್ನಿ ಸುಮಾ ಶೆಟ್ಟಿಯವರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕಾಧಿಕ್ಷಕರ ಹುದ್ದೆಯಿಂದ ಪತ್ರಾಂಕಿತ ಲೆಕ್ಕ ಪರಿಶೋಧಕ ಹುದ್ದೆಗೆ ಬಡ್ತಿಗೊಂಡಿದ್ದಾರೆ.
ಇವರು ಪ್ರಸ್ತುತ ಉಡುಪಿಯ ಜಿಲ್ಲಾ ಪಂಚಾಯತ್ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಡ್ತಿಯ ಮೇರೆಗೆ ಅಲ್ಲಿನ ತಾಲ್ಲೂಕಾ ಪಂಚಾಯತ್ ಕ್ಕೆ ಸ್ಥಳ ನಿಯುಕ್ತಿಗೊಂಡಿದ್ದಾರೆ.
ಕಾಪು ತಾಲ್ಲೂಕಿನ ಕಳತ್ತೂರು ಮೂಲದ ಪ್ರತಿಷ್ಠಿತ ಕಲಾಯ ಗುತ್ತು ಗುತ್ತಿನ ಮನೆತನದ ಶಾಂತಾ ಶೆಡ್ತಿ ಮತ್ತು ಕಾಲಾಧೀನ ಶಾಮ್ ಶೆಟ್ಟಿ ದಂಪತಿಗಳ ಸುಪುತ್ರಿಯಾದ ಸುಮಾ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗಿನ ಉನ್ನತವಾದ ವಿದ್ಯಾರ್ಹತೆಯನ್ನು ಹೊಂದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತವಾದ ಅಂಕಗಳಿಂದ ಉನ್ನತವಾದ ಜೇಷ್ಠಾಂಕದಲ್ಲಿ ಉದ್ಯೋಗಿಯಾಗಿ ನೇಮಕಗೊಂಡು, ಎರಡನೇ ಬಾರಿಗೆ ಪದೋನ್ನತಿಗೊಂಡಿರುತ್ತಾರೆ .
ತಮ್ಮ ಸಜ್ಜನಿಕೆಯ ನಡವಳಿಕೆಯಿಂದಲೂ ಸಾರ್ವಜನಿಕ ವಲಯದಲ್ಲಿ ಗೌರವದ ವ್ಯಕ್ತಿಯಾಗಿದ್ದಾರೆ.
ಬಡ್ತಿಗೊಂಡ ಅವರನ್ನು ಆಪ್ತೇಷ್ಠರು ಅಭಿನಂದಿಸಿದ್ದಾರೆ.

More Stories
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗಡಗೇರಿ ವಿದ್ಯಾರ್ಥಿನಿಯರ ಅದ್ಭುತ ಸಾಧನೆ – ಇನ್ಸ್ಪೈರ್ ಅವಾರ್ಡ್ಗೆ ಆಯ್ಕೆ
ಶ್ರೇಯಸ್ ಸಾಧನೆಗೆ ಬರ್ಗಿ ವಿದ್ಯಾಪೀಠದ ಪೇಟ
ಪ್ರೌಢ ಶಾಲಾ ಶಿಕ್ಷಕರ ಭಕ್ತಿಗೀತೆ ಸ್ಪರ್ಧೆ, ಮೊದಲ ಮೂರು ಸ್ಥಾನಗಳಲ್ಲಿ ರಾಘವೇಂದ್ರ, ಮಂಜುನಾಥ ಬರ್ಗಿ ಹಾಗೂ ತಸ್ನೀಮ್