ಹೊನ್ನಾವರ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ ಇವರ ಸಂಯುಕ್ತ ಆಶ್ರಯದಲ್ಲಿ “ಓದೋಣ ಬನ್ನಿ” ಕಾರ್ಯಕ್ರಮ ಉಪ್ಪೋಣಿ ಗ್ರಾ.ಪಂ.ಅಧ್ಯಕ್ಷ ಗಣೇಶ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಇದು ಎಲ್ಲಾ ಶಾಲೆಗಳಲ್ಲಿ ಅಗತ್ಯವಾಗಿ ನಡೆಯಬೇಕಿದ್ದು, ಪುಸ್ತಕಗಳಿಂದ ಜ್ಞಾನ ದೊರೆಯಲಿದೆ. ಇಂದು ಮೊಬೈಲ್ ಗೀಳಿಗೆ ಮಕ್ಕಳು ಒಲಗಾಗುತ್ತಿದ್ದು, ಪಾಲಕರು ಮಕ್ಕಳಲ್ಲಿ ಪುಸ್ತಕ ಓದುವ ಪ್ರವೃತ್ತಿ ರೂಡಿಸುವ ಕಾರ್ಯಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್.ಗೌಡ ಮಾತನಾಡಿ ಎಲ್ಲಾ ಸಂದರ್ಭದಲ್ಲೂ ಮಕ್ಕಳು ತಪ್ಪು ಮಾಡುತ್ತಾರೆ ಎಂಬ ಹಿರಿಯರ ಮನೋಸ್ಥಿತಿ ಬದಲಾಗಬೇಕು. ನಮ್ಮಲ್ಲಿನ ನಿಜವಾದ ಸಮಸ್ಯೆ ಅರಿತು ಪರಿಹಾರ ಮಾಡಿ ಮಗುವಿನ ಜ್ಞಾನ ವೃದ್ಧಿಗೆ ಹಿರಿಯರು ನೆರವಾಗಬೇಕು, ಸಮುದಾಯದಲ್ಲಿ ಸರ್ವರೂ ಓದುವ ಹವ್ಯಾಸ ಬೆಳೆಸಿಕೊಂಡರೆ ಬದುಕು ಸಾರ್ಥಕತೆ ಪಡೆಯಲಿದೆ ಎಂದರು.
ಕಸಾಪ ಸಂಘಟನೆಯ ಎಂ.ಡಿ.ಹರಿಕಾಂತ, ಜನಾರ್ಧನ ಕಾಣಕೋಣಕರ, ಮಹೇಶ ಭಂಡಾರಿ, ದಿನೇಶ ನಾಯ್ಕ, ಕೇಶವ ಗೌಡ ಎಸ್.ಡಿ.ಎಂ.ಸಿ ಅಧ್ಯಕ್ಷ ಗಣೇಶ ನಾಯ್ಕ ಪುಸ್ತಕಗಳ ಓದಿನ ಮಹತ್ವ ತಿಳಿಸಿದರು.,
ಮುಖ್ಯಾಧ್ಯಾಪಕ ಸುಬ್ರಾಯ ಶ್ಯಾನಭಾಗ ಸ್ವಾಗತಿಸಿದರೆ, ಮಮತಾ ನಾಯ್ಕ ವಂದಿಸಿದರು. ಶೋಭಾ ಶ್ಯಾನಭಾಗ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಕಾನಗೋಡ ಶ್ರೀ ಚೆನ್ನಕೇಶವ ದೇವರ ನೂತನ ಮಹಾದ್ವಾರ ಲೋಕಾರ್ಪಣೆ
ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನ ದಿನಾಚರಣೆ
ಮೇ 9ರಂದು ಚಿತ್ರದುರ್ಗದಲ್ಲಿ “ಬಿ.ಎಸ್.ವೈ ಅಭಿಮಾನೋತ್ಸವ”