ಭಟ್ಕಳ: ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಜಾಫರ್ (41), ನಾಥಗೇರಿ (ತಾ. ಹೊನ್ನಾವರ) ಮೂಲದವನಾಗಿದ್ದು, ಪ್ರಸ್ತುತ ಭಟ್ಕಳದ ಮೂಸಾನಗರ 4ನೇ ಕ್ರಾಸ್‌ನಲ್ಲಿ ವಾಸವಾಗಿದ್ದಾನೆ.
ಆರೋಪಿತನು ಇತರರೊಂದಿಗೆ ಸೇರಿಕೊಂಡು ಸುಮಾರು ₹2.80 ಲಕ್ಷ ಮೌಲ್ಯದ 3 ಎತ್ತುಗಳು ಹಾಗೂ ₹40 ಸಾವಿರ ಮೌಲ್ಯದ 2 ಗಂಡು ಕರುಗಳನ್ನು ಬಂದರ್ ರೋಡ್ 6ನೇ ಕ್ರಾಸ್‌ನಲ್ಲಿರುವ ಶೆಡ್‌ನಲ್ಲಿ ಯಾರಿಗೂ ತಿಳಿಯದಂತೆ ಇಟ್ಟು, ನೀರು-ಮೇವು ನೀಡದೇ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 3 ಎತ್ತುಗಳು ಹಾಗೂ 2 ಕರುಗಳನ್ನು ಹಗ್ಗ ಸಮೇತ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ನಗರ ಠಾಣೆಯ ಪಿಎಸೈ ನವೀನ ನಾಯ್ಕ ದೂರು ನೀಡಿದ್ದು, ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಪಿಎಸೈ ಸೋಮನಾಥ ರಾಠೋಡ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

More Stories
ಭಟ್ಕಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ
ಭಟ್ಕಳದಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ
ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಭಟ್ಕಳ ಪಿ.ಎಸ್.ಐ. ನವೀನ್ ನಾಯ್ಕ ಆಯ್ಕೆ