March 29, 2026

ಕೊಂಡಾಕುಳಿ ಗರ್ಭ ಧರಿಸಿದ ಗೊ ಹತ್ಯೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ

ಹೊನ್ನಾವರ: ವರ್ಷದ ಹಿಂದೆ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ ಗೋ ಹತ್ಯೆ ಪ್ರಕರಣ ಮಾಸುವ ಮುನ್ನ ಕಡ್ಲೆ ಗ್ರಾಮದ ವಂದೂರಿನ ಅರಣ್ಯ ಇಲಾಖೆಯ ಪ್ರದೇಶದಲ್ಲಿ ದುರುಳರು ಗೋವನ್ನು ಕೊಂದು ಮಾಂಸ ತೆಗೆದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ  ವಂದೂರು ಸಮೀಪದ ಜಡಿಗದ್ದೆಯ ಅರಣ್ಯ‌ ಇಲಾಖೆಯ ಪ್ರದೇಶದಲ್ಲಿ ಗೋವನ್ನು ವಧೆ ಮಾಡಿ ರುಂಡ ಮತ್ತು ಕಾಲಿನ ಭಾಗವನ್ನು ಪಕ್ಕದಲ್ಲಿ ಬಿಸಾಡಿ ಮೌಂಸವನ್ನು ಕದ್ದೊಯ್ದಿದ್ದಾರೆ.

ವಂದೂರಿನ ಗಣಪತಿ ಮಹಾಬಲೇಶ್ವರ ಭಟ್ ಎನ್ನುವವರ ಮನೆಯಲ್ಲಿ 27 ಗೋವುಗಳಿದ್ದವು. ರವಿವಾರ ಮುಂಜಾನೆ ಮೇಯಲು ಬಿಟ್ಟ ಆಕಳು ಬರಲಿಲ್ಲ. ಸಾಯಂಕಾಲ‌ ಸಮೀಪದ ಪ್ರದೇಶದಲ್ಲಿ ಹುಡುಕಿದರೂ ಸುಳಿವು ಸಿಗಲಿಲ್ಲ. ಸೋಮವಾರ ಮುಂಜಾನೆ ಅರಣ್ಯ ಇಲಾಖೆ ಪ್ರದೇಶದಲ್ಲಿ‌ಗೋವಿನ ತಲೆ ಭಾಗ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಚರ್ಮದ ಮೇಲ್ಪದರ ಹಾಗೂ ಕಾಲಿನ ಭಾಗ ನೋಡುತ್ತಿದ್ದಂತೆ ಇದು ವಧೆ ಮಾಡಿ ಮಾಂಸ ಸಾಗಾಟ ಮಾಡಿದ್ದಾರೆಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ಬೆಳಕಿಗೆ ಬರತ್ತಿದ್ದಂತೆ ಅಲರ್ಟ್ ಆದ ಖಾಕಿ ಪಡೆ

ಸೋಮವಾರ ಮುಂಜಾನೆ‌ ಸಾರ್ವಜನಿಕರು ಗೋ ಹತ್ಯೆಯ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದಾಗ ಪಿಎಸೈ ಮಂಜುನಾಥ ನಾಯ್ಕ ಆರಂಭಿಕವಾಗಿ ಪರಿಶೀಲನೆ ನಡೆಸಿದರು. ನಂತರ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಹಾಂತೇಶ ವಾಲ್ಮಿಕಿ ಹಾಗೂ ಸಿಬ್ಬಂದಿಗಳು ಆಗಮಿಸಿ ವಿವಿಧ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ. ಕುಟುಂಬಸ್ಥರಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಪ್ರದೇಶಕ್ಕೆ ಆಗಮಿಸಿದ ವಾಹನಗಳು, ಸಿ.ಸಿ ಕ್ಯಾಮರ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಡಿವೈಎಸ್ಪಿ ಬಿ ಗಿರೀಶ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು..

About The Author

error: Content is protected !!