

ಹೊನ್ನಾವರ : ತಾಲೂಕಿನ ನಾಜಗಾರಿನ ಶ್ರೀ ಕ್ಷೇತ್ರ ಉಪ್ಪಿನಹೊಯ್ಗೆ ನಾರಾಯಣ ದೇವಸ್ಥಾನಕ್ಕೆ ಇದೆ ಏ. 29 ರವಿವಾರ ದಂದು ಗೇರುಸೊಪ್ಪ ಸೀಮೆಯ ಶ್ರೀ ಗೋವರ್ಧನಗಿರಿ ಮುಖ್ಯಪ್ರಾಣ ದೇವರ ಪಲ್ಲಕ್ಕಿಯು ಪ್ರಥಮ ಬಾರಿಗೆ ಆಗಮಿಸುತ್ತಿದೆ.



ಮದ್ಯಾಹ್ನ 4 ಗಂಟೆಗೆ ನಾಜಗಾರ್ ಕ್ರಾಸ್ ತಲುಪಲಿದ್ದು, ಅಲ್ಲಿಂದ ಪೂರ್ಣಕುಂಭ, ವಾದ್ಯ ಘೋಷದ ಮೂಲಕ ಮುಖ್ಯಪ್ರಾಣ ದೇವರ ಪಲ್ಲಕ್ಕಿಯ ಭವ್ಯ ಮೆರವಣಿಗೆಯ ಮೂಲಕ ನಾರಾಯಣ ದೇವರ ಸನ್ನಿದಿಗೆ ಬರಮಾಡಿ ಕೊಳ್ಳಲಾಗುವುದು. ಅದೇ ದಿನ ಸಂಜೆ ದಂಡಾವಳಿ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ, ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಊರಿನ ಸದ್ಭಕ್ತರು ಈ ಧಾರ್ಮಿಕ ಮೆರವಣಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ವಿನಂತಿ ಮಾಡಿಕೊಂಡಿದ್ದಾರೆ.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.